• Slide
    Slide
    Slide
    previous arrow
    next arrow
  • ಹಟ್ಟಿಕೇರಿ ಸೇತುವೆಯಲ್ಲಿ ಬಿರುಕು: ವಾಹನ ಸಂಚಾರ ಸ್ಥಗಿತ

    300x250 AD

    ಅಂಕೋಲಾ: ತಾಲೂಕಿನ ಹಟ್ಟಿಕೇರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಅತ್ಯಧಿಕ ಭಾರದ ಯಂತ್ರವನ್ನು ಹೊತ್ತ ವಾಹನವೊಂದು ಹಳೆಯ ಸೇತುವೆಯ ಮೇಲೆ ಸಂಚರಿಸಿದ್ದು, ಅತೀ ಭಾರದ ಕಾರಣದಿಂದ ಸೇತುವೆಯಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಚತುಷ್ಪಥ ರಸ್ತೆ ನಿರ್ಮಾಣದಲ್ಲಿ ಹೊಸ ಸೇತುವೆಯೊಂದನ್ನು ನಿರ್ಮಿಸಲಾಗಿದೆಯಾದರೂ ಕ್ಷಮತೆಯ ಪರೀಕ್ಷೆಯನ್ನು ನಡೆಸಿ ಹಳೆಯ ಸೇತುವೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.
    ಇತ್ತೀಚೆಗೆ ಸೇತುವೆಯ ಮೇಲೆ ಸೈಡ್ ವಾಲಗಳನ್ನು ನಿರ್ಮಿಸಿ ಚಿಕ್ಕ ಪುಟ್ಟ ದುರಸ್ತಿ ಕಾರ್ಯಗಳನ್ನೂ ಕೈಗೊಳ್ಳಲಾಗಿತ್ತು. ಸೇತುವೆ ಅಷ್ಟೇನೂ ಶಿಥಿಲಗೊಂಡಿರಲಿಲ್ಲ. ಆದರೆ ಸೇತುವೆ ಸಾಮರ್ಥ್ಯಕ್ಕಿಂತ ಅತೀ ಭಾರದ ಟ್ರಾಲಿ ಸಂಚರಿಸಿದ್ದೇ ಸೇತುವೆ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top