• Slide
  Slide
  Slide
  previous arrow
  next arrow
 • ಸಫಾರಿಗೆ ತೆರಳಿದ್ದ ವಾಹನ ಪಲ್ಟಿ; ಐವರು ಪ್ರವಾಸಿಗರಿಗೆ ಗಾಯ

  300x250 AD

  ದಾಂಡೇಲಿ: ಜಂಗಲ್ ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಹಿಂದುರುಗಿ ಬರುತ್ತಿದ್ದ ಬೊಲೆರೊ ಕ್ಯಾಂಪರ್ ವಾಹನವೊಂದು ಬೆಥಗಿ ಘಾಟ್ ಹತ್ತಿರ ಪಲ್ಟಿಯಾಗಿ ವಾಹನದಲ್ಲಿದ್ದ ಐವರು ಗಾಯಗೊಂಡಿದ್ದಾರೆ.
  ಕೋಲಾರದಿಂದ ಪ್ರವಾಸಕ್ಕೆಂದು ಬಂದಿದ್ದ ಆರು ಜನರ ತಂಡವೊಂದು ಫಣಸೋಲಿಯ ಜಂಗಲ್ ಸಫಾರಿ ಪಾಯಿಂಟ್‌ನಿಂದ ಬೊಲೆರೊ ಕ್ಯಾಂಪರ್ ವಾಹನದ ಮೂಲಕ ತೆರಳಿದ್ದರು. ಜಂಗಲ್ ಸಫಾರಿ ಮುಗಿಸಿ ಹಿಂದುರುಗಿ ಬರುತ್ತಿದ್ದಾಗ ಬೆಥಗಿ ಘಾಟ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಕ್ಯಾಂಪರ್ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಕೋಲಾರದ ಒಂದೇ ಕುಟುಂಬಕ್ಕೆ ಸೇರಿದ ಐವರಿಗೆ ಗಾಯವಾಗಿದೆ.

  ಗಾಯಗೊಂಡವರಿಗೆ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಋತ್ವಿಕ್.ಭದ್ರ.ಎಸ್ ಎಂಬಾತನನ್ನು ಬಿಟ್ಟು ಉಳಿದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ. ಚಾಲಕ ರಾಘವೇಂದ್ರ ಪೆಡ್ನೇಕರ್ ಎಂಬಾತನಿಗೆ ಸಣ್ಣಪುಟ್ಟ ಗಾಯವಾಗಿರುವ ಮಾಹಿತಿ ಲಭ್ಯವಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top