• Slide
    Slide
    Slide
    previous arrow
    next arrow
  • ಕ್ರೀಡೆಗಳು ದೇಹಕ್ಕೆ ನವಚೈತನ್ಯ ನೀಡುತ್ತವೆ: ಉಮೇಶ ನಾಯ್ಕ

    300x250 AD

    ಅಂಕೋಲಾ: ಕ್ರೀಡೆಗಳು ನಮ್ಮ ದೇಹಕ್ಕೆ ನವಚೈತನ್ಯ ನೀಡುತ್ತದೆ. ಅವುಗಳಲ್ಲಿ ತೊಡಗಿಸಿ ಕೊಂಡಾಗ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ ಎಂದು ವಕೀಲ ಉಮೇಶ ನಾಯ್ಕ ಹೇಳಿದರು.
    ಅವರು ತಾಲೂಕಿನ ಜೈಹಿಂದ್ ಮೈದಾನದಲ್ಲಿ ಮಾರ್ನಿಂಗ್ ಬಾಯ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ನಡೆಯುತ್ತಿರುವ ಅಂಕೊಲಾ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ ಕ್ರೀಡಾಕೂಟಗಳ ಆಯೋಜನೆಯಿಂದ ಸಮಾಜದಲ್ಲಿನ ಯುವಜನರನ್ನ ಸರಿದಾರಿ ತರಲಿಕ್ಕೆ ಸಾಧ್ಯವಿದೆ. ನಾಯಕತ್ವದ ಗುಣಗಳು ಬೆಳೆಯುವುದರ ಜೊತೆಗೆ ಸಮಯ ಪ್ರಜ್ಞೆ ಮೂಡಿಸಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಲಿವೆ ಎಂದರು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಮಾತನಾಡಿ, ಏಕಾಗ್ರತೆ ಸಂಘಟಿತವಾದ ಹೋರಾಟದಿಂದ ಜಯ ಸಾಧಿಸಲು ಸಾಧ್ಯವಾಗುತ್ತದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜವಾಗಿರುತ್ತದೆ. ಎರಡನ್ನ ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ಎದುರಾಗುವಂತಹ ಎಲ್ಲ ಒತ್ತಡಗಳನ್ನ ನಿಭಾಯಿಸಲಿಕ್ಕೆ ಕ್ರೀಡೆಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.
    ಕಾರ್ಯನಿರತ ಪತ್ರಕರ್ತ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ, ಪ್ರತಿಯೊಬ್ಬ ಆಟಗಾರ ಸಮರ್ಪಣಾ ಮನೋಭಾವನೆಯಿಂದ ಕ್ರೀಡೆಯಲ್ಲಿ ತೊಡಸಿಕೊಳ್ಳಬೇಕು. ಪ್ರತಿಕ್ಷಣವೂ ಬಹಳ ಎಚ್ಚರಿಕೆಯಿಂದ ಆಡುವ ಮೂಲಕ ದೈಹಿಕವಾಗಿಯೂ ಚಟುವಟಿಕೆಯಿಂದ ಇರಲು ಸಾಧ್ಯವಾಗಲಿದೆ ಎಂದರು.
    ಈ ಸಂದರ್ಭದಲ್ಲಿ ಪಂದ್ಯಾವಳಿಯಲ್ಲಿ ಆಡುತ್ತಿರುವ 12 ತಂಡದ ಮಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕ ಮಂಜುನಾಥ ಲಕ್ಮಾಪುರ್ ಸ್ವಾಗತಿಸಿದರು. ಪ್ರಶಾಂತ ನಾಯ್ಕ ಕಾರ್ಯಕ್ರಮ ನಿರೂಪಿಸಿದರು ಮಂಜುನಾಥ ನಾಯ್ಕ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top