• Slide
  Slide
  Slide
  previous arrow
  next arrow
 • ಇನ್ಮುಂದೆ ಅಭಿವೃದ್ಧಿಯ ಜೊತೆಗೆ ಉದ್ಯೋಗ ಪರ್ವ ಆರಂಭ: ಬೋಳಶೆಟ್ಟಿ

  300x250 AD

  ಹಳಿಯಾಳ: ರಾಜ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರು ಈ ಬಾರಿಯ ಚುನಾವಣೆಯನ್ನು ಜಾಣ್ಮೆ, ತಾಳ್ಮೆ ಹಾಗೂ ಸಮಯ ಪ್ರಜ್ಞೆ ಈ ಮೂರು ಅಂಶಗಳಿಂದ ಗೆದ್ದು ಕ್ಷೇತ್ರದಲ್ಲಿ ಜನನಾಯಕ (ಮಾಸ್ ಲೀಡರ್) ಆಗಿದ್ದು, ಇನ್ನುಮುಂದೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಜೊತೆಗೆ ಉದ್ಯೋಗ ಪರ್ವ ಆರಂಭವಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಹೇಳಿದರು.
  ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಬಿಜೆಪಿಯವರು ಧರ್ಮಾಧಾರಿತವಾಗಿ ಮಾಡಿದರೆ ಜೆಡಿಎಸ್‌ನವರು ಜಾತಿ ಮುಂದಿಟ್ಟುಕೊಂಡು ಮಾಡಿದರು ಆದರೆ ದೇಶಪಾಂಡೆ ಅವರು ಸರ್ವ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವ ಒಂದು ಜಾತಿ, ಪಂಗಡ, ಧರ್ಮಕ್ಕೆ ಸೀಮಿತರಾಗದೆ ತಮ್ಮ ಅಭಿವೃದ್ದಿ ಮಂತ್ರದಿಂದಲೇ ಮರು ಆಯ್ಕೆಯಾದರು ಅಲ್ಲದೇ ದಾಖಲೆಯ 9ನೇ ಬಾರಿ ಆಯ್ಕೆಯಾಗುವ ಮೂಲಕ ಇತಿಹಾಸ ಬರೆದಿದ್ದಾರೆ ಎಂದರು.
  ಶಾಸಕರ ಪುತ್ರ ಎಐಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಈ ಬಾರಿಯ ಚುನಾವಣೆಯಲ್ಲಿ ಪಟ್ಟ ಶ್ರಮ ಹಾಗೂ ಅವರಿಗಿರುವ ಅಪಾರ ಜನಬೆಂಬಲ ಕಾಂಗ್ರೇಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದು ಕ್ಷೇತ್ರದಲ್ಲಿ ಮುಂದಿನ ನಾಯಕರು ಅವರೇ ಎಂದ ಉಮೇಶ ಬೋಳಶೆಟ್ಟಿ ಅವರು ಶಾಸಕ ಆರ್ ವಿ ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಹಾಗೂ ಪ್ರಶಾಂತ ದೇಶಪಾಂಡೆ ಅವರ ನೇತೃತ್ವದಲ್ಲಿ ಮುಂದಿನ ಎಲ್ಲ ಚುನಾವಣೆಗಳನ್ನು ಎದುರಿಸಲಿದ್ದೇವೆ ಎಂದು ತಿಳಿಸಿದರು.
  ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಕೃಷ್ಣಾ ಪಾಟೀಲ್ ಮಾತನಾಡಿ, ಆರ‍್ವಿಡಿ ಅವರು ಅಹಂಕಾರ, ವೈರತ್ವ, ದ್ವೇಷ ಎಂದಿಗೂ ಯಾರೊಂದಿಗೂ ಮಾಡಲ್ಲ ಅವರದ್ದು ಏನಿದ್ದರೂ ಅಭಿವೃದ್ದಿಯೊಂದೆ ಮಂತ್ರವಾಗಿದೆ ಹೀಗಾಗಿ ಜನರು ಅವರನ್ನು ಮರು ಆಯ್ಕೆ ಮಾಡಿದ್ದಾರೆ ಎಂದ ಅವರು ನನ್ನಿಂದ ದೇಶಪಾಂಡೆ ಅವರು ಆಯ್ಕೆಯಾಗುತ್ತಾರೆ ಎಂದು ಅಹಂ ತೋರುತ್ತಿದ್ದವರು ಇಂದು ಹೊರಗಿದ್ದಾರೆ ಆದರೂ ದೇಶಪಾಂಡೆ ಗೆಲುವು ಸಾಧಿಸಿದ್ದಾರೆಂದರೇ ಅವರ ಜನಪ್ರೀಯತೆಯನ್ನು ವಿರೋಧಿಗಳು ಅರಿತುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
  ಪುರಸಭೆ ಹಿರಿಯ ಸದಸ್ಯ ಶಂಕರ ಬೆಳಗಾಂವಕರ ಮಾತನಾಡಿ, ನಮ್ಮ ಜೊತೆಗಿದ್ದ ಮಾಜಿ ವಿಪ ಸದಸ್ಯ ಎಸ್ ಎಲ್ ಘೊಟ್ನೇಕರ ಅವರು ನಮ್ಮಿಂದ ಹೊರ ಹೊಗಿ ಜೆಡಿಎಸ್ ನಿಂದ ಸ್ಪರ್ದಿಸಿದ್ದರಿಂದ ಕಾಂಗ್ರೇಸ್‌ಗೆ ಬರಬೇಕಿದ್ದ ಮತಗಳು ಅವರ ಪಾಲಾಗಿವೆ ಹೀಗಾಗಿ ನಾವು ಎಲ್ಲಿಯೂ ಕಡಿಮೆ ಲೀಡ್ ಬಂದಿಲ್ಲವೆಂದು ಪ್ರತಿಪಾದಿಸಿದರು.
  ಹಳಿಯಾಳ ಪುರಸಭೆ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ ಮಾತನಾಡಿ ಹಳಿಯಾಳ, ದಾಂಡೇಲಿ, ಜೋಯಿಡಾ ಮೂರು ತಾಲೂಕುಗಳಿಗೆ ಪ್ರತ್ಯೇಕ ಪ್ರಣಾಳಿಕೆಗಳನ್ನು ಚುನಾವಣೆ ಸಂದರ್ಭದಲ್ಲಿ ದೇಶಪಾಂಡೆ ಅವರು ನೀಡಿದ್ದರು. ಅದರಂತೆಯೇ ಇಂದು ಅವರು ಆಯ್ಕೆಯಾಗಿ ಸಚಿವರಾಗುತ್ತಿದ್ದು ಕ್ಷೇತ್ರದಲ್ಲಿ ಅವರು ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
  ಈ ಸಂದರ್ಭದಲ್ಲಿ ಪ್ರಮುಖರಾದ ಸುವರ್ಣಾ ಮಾದರ, ಮಾಲಾ ಬ್ರಗಾಂಜಾ, ಸಂಜು ಮಿಳ್ಯಾಳೆ, ಬಿಡಿ ಚೌಗಲೆ, ದೇಮಾಣಿ ಶಿರೋಜಿ, ಪ್ರಭಾಕರ ಗಜಾಕೋಶ, ಪರಶುರಾಮ ಎಚ್.ಬಿ., ಅಣ್ಣಪ್ಪ ವಡ್ಡರ, ರೋಹನ ಬ್ರಗಾಂಜಾ ಇತರರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top