ಶಿರಸಿ: ಯಕ್ಷಗಾನ, ತಾಳಮದ್ದಲೆ ತರಬೇತಿ ವರ್ಗವನ್ನು ಪ್ರಾರಂಭಿಸಿ ಹತ್ತು ವರ್ಷಗಳನ್ನು ಪೂರೈಸಿದ ಅಭಿಮಾನ ಸಾಂಸ್ಕೃತಿಕ ವೇದಿಕೆಯು ಮೇ.21, ರವಿವಾರದಂದು ತಾಳಮದ್ದಲೆ ತರಬೇತಿ ವರ್ಗದ ದಶಮಾನೋತ್ಸವ ಕಾರ್ಯಕ್ರಮವನ್ನು ಇಲ್ಲಿನ ಶ್ರೀನಗರ, ಗಾಯತ್ರಿ ನಗರದ 5ನೇ ಅಡ್ಡರಸ್ತೆಯ ಸುಮುಖ ನಿಲಯದಲ್ಲಿ ಅಪರಾಹ್ನ 3.30ರಿಂದ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ತರಬೇತಿ ವರ್ಗದವರು ‘ರಾಮ ನಿರ್ಯಾಣ’ ಎಂಬ ಆಖ್ಯಾನ ಪ್ರಸ್ತುತ ಪಡಿಸಲಿದ್ದು, ಭಾಗವತರಾಗಿ ಆದರ್ಶ ಹೆಗಡೆ, ಗಣಪತಿ ಹೆಗಡೆ, ಮೃದಂಗದಲ್ಲಿ ಶ್ರೀಪಾದ ಭಟ್ ಮೂಡಗಾರು, ಶ್ರೀರಾಮನಾಗಿ ಕರುಣಾಕರ ಹೆಗಡೆ ಕಲ್ಲಳ್ಳಿ, ಲಕ್ಷ್ಮಣನಾಗಿ ರಮೇಶ ಭಟ್ ಹೊಸ್ತೋಟ, ಊರ್ಮಿಳೆಯಾಗಿ ಕೆ.ಜಿ.ನಾಯ್ಕ್, ಹನುಮಂತನಾಗಿ ಎನ್.ಟಿ.ಭಾಗ್ವತ್ ಮನ ರಂಜಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವ ಕಲಾಸಕ್ತರು ಆಗಮಿಸಲು ಪ್ರಕಟಣೆ ತಿಳಿಸಿದೆ.