Slide
Slide
Slide
previous arrow
next arrow

ರಾಜೇಶ್ ನಾಯಕ್ ಅಗಲಿಕೆಗೆ ಬಿಜೆಪಿ ಶ್ರದ್ಧಾಂಜಲಿ

300x250 AD

ಕಾರವಾರ: ಬಿಜೆಪಿಯ ಮುಖಂಡರು, ನಗರ ಮಂಡಲದ ಮಾಜಿ ಅಧ್ಯಕ್ಷರು ಹಾಗೂ ವಕ್ತಾರರು ಆಗಿದ್ದ ರಾಜೇಶ್ ನಾಯಕ್ ಅವರು ಇತ್ತೀಚಿಗೆ ಅಕಾಲಿಕವಾಗಿ ನಿಧನರಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿ ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ರಾಜೇಶ್ ನಾಯಕ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಎರಡು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರ್ಡೇಕರ್, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ರಾಜ್ಯ ಓಬಿಸಿ ಸದಸ್ಯ ರಾಜೇಂದ್ರ ನಾಯ್ಕ್, ನಗರಸಭೆ ಉಪಾಧ್ಯಕ್ಷ ಪಿ.ಪಿ.ನಾಯ್ಕ ಹಾಗೂ ಜಿಲ್ಲಾ ಮೋರ್ಚಾ ಉಪಾಧ್ಯಕ್ಷೆ ನಯನಾ ನೀಲಾವರ ಉಪಸ್ಥಿತರಿದ್ದು ರಾಜೇಶ ನಾಯಕರವರನ್ನು ಸ್ಮರಿಸಿಕೊಂಡರು.

300x250 AD

2005 ರಿಂದ 2009ರವರೆಗೆ ಬಿಜೆಪಿಯ ನಗರ ಮಂಡಲದ ಅಧ್ಯಕ್ಷರಾಗಿ, ಅದಕ್ಕೂ ಪೂರ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಹಲವಾರು ಹುದ್ದೆಗಳನ್ನು ಅವರು ಅಲಂಕರಿಸಿದ್ದರು. ಈ ಹಿಂದೆ ಜಿಲ್ಲಾ ಮಾಧ್ಯಮ ವಕ್ತ್ತಾರ ಸೇರಿದಂತೆ ಕಳೆದ ಅವಧಿಯಲ್ಲಿ ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನ ಶಾಸಕರ ಕಮಿಟಿಯಲ್ಲಿ ಸದಸ್ಯರಾಗಿ ಉತ್ತಮ ಸಲಹೆಗಾರನಾಗಿ ಸಲಹೆ ನೀಡುತ್ತಿದ್ದರು. ಬಿಜೆಪಿಯ ಹಲವು ಧುರೀಣರ ಜೊತೆಗೆ ಒಳ್ಳೆಯ ಸಂಬoಧ ಹೊಂದಿದ್ದು, ಕಾರವಾರ ಬಿಜೆಪಿಯ ಧ್ವನಿಯಾಗಿದ್ದರು.
ಕಳೆದ 30 ವರ್ಷಗಳಿಂದ ಕಾರವಾರ ಜಿಲ್ಲಾ ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ ರಾಜೇಶ ನಾಯಕರವರು ಈ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದು, ಬಿಜೆಪಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಮುಖರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಕಾರವಾರ ಬಿಜೆಪಿ ಪದಾಧಿಕಾರಿಗಳು, ಮುಖಂಡರು, ಚುನಾಯಿತ ಪ್ರತಿನಿಧಿಗಳು, ಮೋರ್ಚಾದವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top