• Slide
  Slide
  Slide
  previous arrow
  next arrow
 • ಮರದ ಬೃಹತ್ ಟೊಂಗೆ ಮುರಿದು ಬಿದ್ದು ಬೈಕ್ ಜಖಂ

  300x250 AD

  ಕಾರವಾರ: ನಗರದ ರೋಟರಿ ಕ್ಲಬ್‌ನ ಶತಾಬ್ದಿ ಭವನದ ಬಳಿ ಬೃಹತ್ ಮರವೊಂದರ ಟೊಂಗೆ ಮುರಿದು ಬಿದ್ದು ಅವಘಡವೊಂದು ಸಂಭವಿಸಿದೆ.
  ಏಕಾಏಕಿ ಬೃಹತ್ ಗಾತ್ರದ ಮರದ ಟೊಂಗೆ ಮುರಿದು ಅಂಚೆ ಕಚೇರಿ ಪಕ್ಕದ ರಸ್ತೆ ಮೇಲೆ ಬಿದ್ದಿದ್ದು, ಇದರಿಂದ ಮರದಡಿ ಪಾರ್ಕ್ ಮಾಡಲಾಗಿದ್ದ ಎರಡು ಬೈಕ್‌ಗೆ ಹಾನಿಯಾಗಿದೆ. ಮರದ ಟೊಂಗೆ ಪೂರ್ಣ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಸಹ ಆಗಿತ್ತು. ಸಂಚಾರ ಪೊಲೀಸರು ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಿದರು.
  ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್ ತಂತಿಯ ಮೇಲೆ ಮರದ ಟೊಂಗೆ ಬಿದ್ದ ಕಾರಣದಿಂದ ವಿದ್ಯುತ್ ತಂತಿಗೆ ಹಾನಿಯಾಗಿದೆ. ವಾರ್ಡ್ ಸದಸ್ಯೆ ರೇಷ್ಮಾ ಮಾಳ್ಸೇಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ನಗರಸಭೆಗೆ ಮಾಹಿತಿ ನೀಡಿದರು. ಬಳಿಕ ನಗರಸಭೆ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಮರಿದ ಮರದ ಟೊಂಗೆಯನ್ನು ತೆರವು ಮಾಡಿದರು. ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ತಂತಿಯನ್ನು ದುರಸ್ತಿ ಮಾಡಿದರು. ಕೆಲ ಹೊತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಿತ್ತು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top