Slide
Slide
Slide
previous arrow
next arrow

ಬಿಜೆಪಿ ಸೋಲಿಗೆ ಕಾರಣಗಳನ್ನ ತಿಳಿಸಿದ ಶಿವರಾಮ ಹೆಬ್ಬಾರ್

300x250 AD

ಮುಂಡಗೋಡ: ಲಂಬಾಣಿ ಮತ್ತು ಭೋವಿ ಸಮಾಜದ ಗೊಂದಲ, ಅಕ್ಕಿ ವಿತರಣೆಯಲ್ಲಿ ಕಡಿಮೆ ಮಾಡಿರುವುದು ಮತ್ತು ಗ್ಯಾರೆಂಟಿ ಕಾರ್ಡ್ನಿಂದಾಗಿ ನಾವು ಆಡಳಿತ ಪಕ್ಷದ ವಿರೋಧಿ ಅಲೆಗೆ ಸಿಲುಕಬೇಕಾಯಿತು ಎಂದು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಹಳೂರ ಓಣಿಯ ಶ್ರೀಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕೆಲ ನಾಯಕರೇ ಕಾರ್ಯಕರ್ತರ ಹಾದಿ ತಪ್ಪಿಸಿದರು. ನಿಷ್ಠಾವಂತ ಕಾರ್ಯಕರ್ತರ ನೋವು ನನಗೆ ಅರ್ಥವಾಗಿದೆ. ಕಾರ್ಯಕರ್ತರ ಮೇಲೆ ವಿಶ್ವಾಸವಿತ್ತು. ಗೆದ್ದೇ ಗೆಲ್ಲುವೆನೆಂಬ ಆತ್ಮಸ್ಥೈರ್ಯವಿತ್ತು. ಆದರೆ ಈ ಬಾರಿಯ ಚುನಾವಣೆ ರಾಜಕೀಯ ಜೀವನದಲ್ಲಿ ನನಗೆ ಸವಾಲಾಗಿತ್ತು. ಇದರಿಂದ ನಾನು ಪಾಠ ಕಲಿತೆ. ಇಲ್ಲಿ ಯಾರೂ ಶತ್ರುಗಳಲ್ಲ. ಮತದಾರ ಬದಲಾವಣೆ ಆಗುವುದು ಸಹಜ. ನಮ್ಮಿಂದ ಏನೋ ತಪ್ಪು ಆಗಿರಬಹುದು. ಇಡೀ ರಾಜ್ಯದಲ್ಲಿ ಆದ ಮೂರ್ನಾಲ್ಕು ಲೋಪಗಳು ಮತಗಳು ಕಡಿಮೆಯಾಗಲು ಕಾರಣವಾಯಿತು. ಆದರೂ 40 ಬೂತ್‌ಗಳಿಂದ ಹೆಚ್ಚು ಮತಗಳು ಬಂದಿವೆ ಎಂದರು.

ಪ್ರತಿ ಚುನಾವಣೆ ಒಂದೊ0ದು ವಿಷಯದ ಆಧಾರದ ಮೇಲೆ ನಡೆಯುತ್ತದೆ. ಕಾರ್ಯಕರ್ತರು ಹಗಲು- ಇರುಳು ಕಷ್ಟಪಟ್ಟ ಕಾರಣ 27 ಸಾವಿರ ಮತಗಳು ಬಂದಿವೆ. ಯಾವ ಕಾಲಕ್ಕೆ ಏನು ನಿರ್ಣಯ ತೆಗೆದುಕೊಳ್ಳಬೇಕು ಎಂದು ನನಗೆ ಗೊತ್ತು. ಯಾರು ನಮ್ಮಿಂದ ಹೆಚ್ಚು ಸಹಾಯ ಪಡೆದಿದ್ದಾರೋ ಅವರೇ ಇಂದು ನಮಗೆ ವಿರೋಧಿಗಳಾಗಿದ್ದಾರೆ. ನನಗೆ ಸಂತಸವಿದೆ. ಪ್ರತಿ ಪಂಚಾಯತ ಮಟ್ಟದಲ್ಲಿ ಆತ್ಮಾವಲೋಕನ ಸಭೆ ನಡೆಸುತ್ತೇನೆ. ಅನೇಕ ವಿರೋಧಗಳ ನಡುವೆಯೂ ನಾಲ್ಕು ಬಾರಿ ಆಯ್ಕೆಯಾಗಿ ಬಂದಿದ್ದೇನೆ ಎಂದರು.
ಕ್ಷೇತ್ರಕ್ಕಾಗಿ ಸರ್ಕಾರದಿಂದ ಅಭಿವೃದ್ಧಿ ಕೇಳುವುದು ನನ್ನ ಹಕ್ಕು. ಈ ಹಿಂದೆ ವಿರೋಧ ಪಕ್ಷದವರ ಕೆಲಸ ಮಾಡಿ ಕೊಟ್ಟಿದ್ದೇನೆ. ಅದೇ ರೀತಿ ಅವರಿಂದ ಕೆಲಸ ಪಡೆಯುತ್ತೇನೆ. ಮುಂಡಗೋಡ ಜನರಿಗೆ ಯಲ್ಲಾಪುರ ಮತ್ತು ಬನವಾಸಿ ಭಾಗದವರ ಸಾಲ ಬಾಕಿ ಇತ್ತು. ಅದು ಈಗ ಚುಕ್ತಾ ಆದಂತಾಯಿತು. ಬದಲಾವಣೆ ಮನುಷ್ಯನ ಸಹಜ ಪ್ರಕ್ರಿಯೆ. ಅದೇ ಕಾರಣದಿಂದ ಚುನಾವಣೆಗಳು ನಡೆಯುತ್ತವೆ. ಜನರನ್ನು ದೂಷಿಸುವುದು ಸರಿಯಲ್ಲ. ದೇವರು ಕೃತಘ್ನರನ್ನು ಎಂದೂ ಕ್ಷಮಿಸುವುದಿಲ್ಲ. ಭಗವಂತ ನನಗೆ ಕೃತಜ್ಞತೆ ಸಲ್ಲಿಸಿದ್ದಾನೆ ಎಂದರು.

300x250 AD

ಜಿ.ಪo. ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ, ತಾಲೂಕಿನ ಬಗ್ಗೆ ತುಂಬಾ ಅಪೇಕ್ಷೆ ಇತ್ತು. ಕನಿಷ್ಠ 5000 ಮತಗಳ ಅಂತರದ ವಿಶ್ವಾಸವಿತ್ತು. ಬನವಾಸಿ ಭಾಗದ ಮತದಾರರ ಆಶೀರ್ವಾದದಿಂದ ಶಿವರಾಮ ಹೆಬ್ಬಾರ ಆಯ್ಕೆಯಾದರು. ಕ್ಷೇತ್ರ ಕಾಯ್ದುಕೊಳ್ಳಲು ಆಗದಿದ್ದರೆ ಮುಖಂಡತ್ವ ಯಾಕೆ ವಹಿಸಬೇಕು? ವಿರೋಧ ಪಕ್ಷದವರ ಜೊತೆ ನಮ್ಮ ಕೆಲವು ಮುಖಂಡರು ಮಾಡಿದ ಸಂಭಾಷಣೆ ರೆಕಾರ್ಡ್ ನಮ್ಮ ಬಳಿ ಇದೆ. ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಸಭೆ ಮಾಡಲಾಗುವುದು. ನಮ್ಮ ವಿರುದ್ಧ ಮತದಾನ ಮಾಡಿದವರು ಸಾಕಷ್ಟು ಜನರು ಇಲ್ಲಿಯೇ ಇದ್ದಾರೆ. ಈ ರೀತಿಯಾಗಿ ಚೂರಿ ಹಾಕುವ ಕೆಲಸ ಮಾಡಿದರೆ ಕಾರ್ಯಕರ್ತರ ಗತಿ ಏನು ಎಂದು ಪ್ರಶ್ನಿಸಿದ ಅವರು, ನಮಗೆ ಇದೊಂದು ಎಚ್ಚರಿಕೆ ಘಂಟೆಯಾಗಿದೆ. ಪಟ್ಟಣದಲ್ಲಿ ಮುಖಂಡರ ಬದಲಾವಣೆ ಆಗಬೇಕು ಎಂದರು.
ಮುಖoಡ ಉಮೇಶ ಬಿಜಾಪುರ ಮಾತನಾಡಿ, ಪಟ್ಟಣದಲ್ಲಿ ಎಲ್ಲೂ ಮತಗಳು ತೀರಾ ಕಡಿಮೆ ಬಂದಿಲ್ಲ. ಒಂದೇ ಸಮಾಜದವರು ಇದ್ದ ಕಾರಣದಿಂದ 2600 ಮತಗಳು ಕಡಿಮೆ ಬಂದಿವೆ. ತಪ್ಪು ಅಭಿಪ್ರಾಯ ಬೇಡ ಎಂದರು. ಬಸವರಾಜ ಟನಕೇದಾರ, ನಿಷ್ಠಾವಂತ ಕಾರ್ಯಕರ್ತರತ್ತ ಬೆರಳು ಮಾಡಿ ತೋರಿಸುವುದು ಬೇಡ. ನೀವು ಮಾಡಿದ ತಪ್ಪಿಗೆ ನಮ್ಮನ್ನು ಬಲಿಪಶು ಮಾಡಬೇಡಿರಿ. ನಾವು ನಿಯತ್ತಿನಿಂದ ಕೆಲಸ ಮಾಡಿದ್ದೇವೆ ಮತ್ತು ಸಾಬೀತು ಕೂಡ ಮಾಡುತ್ತೇವೆ. ನಮ್ಮ ಜೊತೆಗೇ ಇದ್ದು ಬೇರೆ ಪಕ್ಷಕ್ಕೆ ಓಟು ಹಾಕಿಸಿ ತಪ್ಪು ಮಾಡಿದ್ದಕ್ಕೆ ಮತಗಳ ಅಂತರ ಕಡಿಮೆಯಾಯಿತು ಎಂದರು.
ಮುಖoಡ ಗುಡ್ಡಪ್ಪ ಕಾತೂರ, ಪಕ್ಷದಲ್ಲಿದ್ದು ಆತ್ಮವಂಚನೆ ಮಾಡಿಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದವರು ಪಕ್ಷ ಬಿಟ್ಟು ಹೋಗಬೇಕು ಎಂದರು. ಅಶೋಕ ಚಲವಾದಿ, ಜಗದೀಶ ಕುರುಬರ, ಡಿ.ಎಫ್.ಮಡ್ಲಿ, ವೈ.ಪಿ.ಪಾಟೀಲ, ರಾಬರ್ಟ್ ಲೋಬೊ, ರವಿ ಹಾವೇರಿ, ಎಫ್.ಡಿ.ಗುಲ್ಯಾನವರ, ಪಿ.ಜಿ.ತಂಗಚ್ಚನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಶಾಸಕರನ್ನು ಸನ್ಮಾನಿಸಿದರು.
ಈ ವೇಳೆ ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷ ರಮೇಶ ಕಾಮತ, ನಾಗಭೂಷಣ ಹಾವಣಗಿ, ಪ.ಪಂ.ಉಪಾಧ್ಯಕ್ಷ ಶ್ರೀಕಾಂತ ಸಾನು, ಪರಶುರಾಮ ತಹಶೀಲ್ದಾರ, ಉದಯ ಪಾಲೇಕರ, ಮಂಜುನಾಥ ನಡಿಗೇರ, ರಾಜು ಗುಬ್ಬಕ್ಕನವರ, ನಾಗರಾಜ ಸಂಕನಾಳ, ಗೀತಾ ಯಲ್ಲಾಪುರ, ವಿಠ್ಠಲ ಬಾಳಂಬೀಡ, ಸಂತೋಷ ತಳವಾರ, ಗುರುರಾಜ ಕಾಮತ, ಬಾಬುರಾವ ವಾಲ್ಮೀಕಿ, ಪ.ಪಂ.ಸದಸ್ಯರು ಹಾಗೂ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top