• Slide
    Slide
    Slide
    previous arrow
    next arrow
  • ಎನ್‌ಎಸ್‌ಎಸ್ ವಿದ್ಯಾರ್ಥಿಗಳೊಂದಿಗೆ ರೋಟರಿ ಸಂವಾದ

    300x250 AD

    ಕಾರವಾರ: ಇತ್ತೀಚೆಗೆ ರೋಟರಿ ಕ್ಲಬ್ ಸಂಸ್ಥೆಯ ಸದಸ್ಯರು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್. ಶಿಬಿರದಲ್ಲಿ ಭಾಗವಹಿಸಿ ‘ನೀರಿನ ಸಂರಕ್ಷಣೆ’ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
    ಪ್ರಾರಂಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭುರವರು ಎಲ್ಲರನ್ನು ಸ್ವಾಗತಿಸಿದರು. ನಿವೃತ್ತ ಇಂಜಿನೀಯರ್ ಶಿವರಾಮ ಎಸ್.ಗಾಂವಕಾರರವರು ವಿದ್ಯಾರ್ಥಿಗಳನ್ನುದ್ದೇಶಿಸಿ, ಇಂದು ನಾವೆಲ್ಲ ಅಂತರ್ಜಲಕ್ಕಿoತ ಅಂರ್ಜಾಲಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ. ನಾವು ಉಪಯೋಗಿಸಿದ ಕುಲಶಿತ ನೀರು ಭೂಮಿಗೆ ಸೇರಿಸುತ್ತೇವೆ, ಅದೇ ನೀರು ನಮ್ಮ ಬಾವಿ, ಬೋರ್‌ವೆಲ್‌ಗಳಿಗೆ ಸೇರಿಕೊಂಡು ನೀರು ಕಲುಶಿತವಾಗುತ್ತಿದೆ. ಅದು ಕುಡಿಯಲು ಉಪಯೋಗಿಸಲಾಗುತ್ತಿಲ್ಲ. ಇದಕ್ಕೆ ವಿದ್ಯಾರ್ಥಿಗಳಾದ ನೀವು ಬೇರೆ ಬೇರೆ ಮಾರ್ಗೋಪಾಯಗಳನ್ನು ಹುಡುಕಿ ಅಂತರ್ಜಲ ಸಂರಕ್ಷಿಸಬೇಕು ಎಂದರು.

    ರೋಟರಿ ಸಂಸ್ಥೆಯ ಕಾರ್ಯದರ್ಶಿ ಗುರುದತ್ತ ಬಂಟ, ಈ ಭೂಮಿಯಲ್ಲಿ 75 ಪ್ರತಿಶತ ನೀರಿದ್ದರೂ ನಾವು ಕುಡಿಯಲು ಉಪಯೋಗಿಸುವ ನೀರು ಕೇವಲ 0.5 ಪ್ರತಿಶತ ಮಾತ್ರ. ಇತ್ತೀಚೆಗೆ ಇದರ ಪ್ರಮಾಣವು ಇನ್ನೂ ಕಡಿಮೆಯಾಗುತ್ತಿದೆ. ‘ಮಳೆನೀರು ಕೊಯ್ಲು’ ಇಂತಹ ಯೋಜನೆಯನ್ನು ಪ್ರತೀ ಹಳ್ಳಿ ಹಳ್ಳಿಗಳಲ್ಲಿ, ಮನೆ ಮನೆಗಳಿಗೆ ಅಳವಡಿಸುವ ವ್ಯವಸ್ಥೆಯಾಗಬೇಕು. ನಾವು ಮಳೆ ನೀರನ್ನು ಸಮುದ್ರಕ್ಕೆ ಸರಾಗವಾಗಿ ಹರಿದು ಹೋಗುವಂತೆ ಮಾಡುತ್ತಿದ್ದೇವೆ. ಮಳೆನೀರನ್ನು ಶೇಖರಿಸುವ ಸರಕಾರದ ಹಲವಾರು ಯೋಜನೆಗಳು ಇವೆ. ಅವುಗಳನ್ನು ಜನಸಾಮಾನ್ಯರಿಗೆ ಅರಿವು ಮಾಡುವ ಕೆಲಸ ವಿದ್ಯಾರ್ಥಿಗಳಾದ ನೀವು ಮಾಡಬೇಕಾಗಿದೆ ಎಂದರು.

    300x250 AD

    ಸಂಸ್ಥೆಯ ಪ್ರಾಂಶುಪಾಲ ವಾಸುದೇವ ಗೌಡಾ ಮಾತನಾಡಿದರು. ವಿದ್ಯಾರ್ಥಿಗಳಿಗೆ ರೋಟರಿ ಸದಸ್ಯ ಸಾತಪ್ಪಾ ತಾಂಡೇಲ ಲಘು ಉಪಹಾರ ಮತ್ತು ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿಗಳಾದ ಮಯೂರ ಕೊಠಾರಕತರ, ಚಂದನ ಎಂ.ಜೆ. ರಾಜೇಶ ಸಿ.ಎಂ. ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಸದಸ್ಯರಾದ ಪ್ರಸನ್ನ ತೆಂಡೂಲ್ಕರ, ಅರಮರನಾಥ ಶೆಟ್ಟಿ, ಗುರುರಾಜ ಭಟ್, ಉಪಸ್ಥಿತರಿದ್ದರು. ಡಾ.ಸಮೀರಕುಮಾರ ನಾಯಕ ವಂದನಾರ್ಪಣೆ ಮಾಡಿದರು. ಕಾರ್ಯಕ್ರವನ್ನು ಶೈಲೇಶ ಹಳದೀಪೂರ ನಡೆಸಿಕೊಟ್ಟರು.

    Share This
    300x250 AD
    300x250 AD
    300x250 AD
    Leaderboard Ad
    Back to top