• Slide
    Slide
    Slide
    previous arrow
    next arrow
  • ಕೈಗೆ ಸಿಕ್ಕಿದ್ದ ಸೈಕಲ್ ಕಳ್ಳ ಪರಾರಿ

    300x250 AD

    ದಾಂಡೇಲಿ: ಹಾಡು ಹಗಲೆ ನಿಲ್ಲಿಸಿಟ್ಟಿದ್ದ ಸೈಕಲ್ ಕಳ್ಳತನಕ್ಕೆ ಯತ್ನಿಸಿದಾತನನ್ನು ಹಿಡಿದು, ಇನ್ನೇನು ಪೊಲೀಸರಿಗೆ ಒಪ್ಪಿಸಬೇಕೆನ್ನುವುಷ್ಟರಲ್ಲಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಸೋಮವಾರ ನಗರದ ಕೇಂದ್ರ ಬಸ್ ನಿಲ್ದಾಣದ ಜೆ.ಎನ್.ರಸ್ತೆಯ ಮುಂಭಾಗದಲ್ಲಿರುವ ನ್ಯೂ ಫ್ಯಾಷನ್ ಸಾರಿ ಅಂಗಡಿಯ ಮುಂದೆ ನಡೆದಿದೆ.

    ಅಂಗಡಿಯ ಮಾಲಕ ಮೋಸಿನ್ ಖಾನ್ ಅವರು ತಮ್ಮ ಅಣ್ಣನ ಮಗನ ಸೈಕಲನ್ನು ಅಂಗಡಿಯ ಮುಂದೆ ಇಟ್ಟಿದ್ದರು. ಅಲ್ಲಿಗೆ ಬಂದ ಕಳ್ಳನೊಬ್ಬ ಸೈಕಲನ್ನು ಎಗರಿಸಿ ಮುಂದೆ ತೆಗೆದುಕೊಂಡು ಹೋಗಿದ್ದಾನೆ. ತಕ್ಷಣವೇ ಗಮನಿಸಿದ ಮೋಸಿನ್, ಆತನನ್ನು ಹಿಂಬಾಲಿಸಿ ಹಿಡಿದು ಸೈಕಲ್ ಸಹಿತ ತನ್ನ ಅಂಗಡಿಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ.

    300x250 AD

    ಇನ್ನೇನು ಪೊಲೀರಿಗೆ ಒಪ್ಪಿಸಬೇಕೆನ್ನುವಷ್ಟರಲ್ಲಿ ಮೋಸಿನ್ ಖಾನ್ ಅವರಿಂದ ಬಿಡಿಸಿಕೊಂಡು ಓಡಿ ಹೋಗಿ ಪರಾರಿಯಾಗಿದ್ದಾನೆ. ನೋಡ ನೋಡುತ್ತಲೆ ಹಾಗೂ ಹಾಡುಹಗಲೆ ಸೈಕಲ್ ಕಳ್ಳತನ ಮಾಡಲೆತ್ನಿಸಿ ಸಿಕ್ಕಿ ಬಿದ್ದು, ಓಡಿ ಹೋದ ಕಿರಾತಕ ಯಾರಿರಾಬಹುದೆನ್ನುವುದನ್ನು ಪತ್ತೆ ಹಚ್ಚುವ ಕಾರ್ಯವಾಗಬೇಕಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top