Slide
Slide
Slide
previous arrow
next arrow

ಇದು ಕೇರಳ ಕಥೆಯ ಕಥೆ: Story of The Kerala Story

300x250 AD

ಸ್ಟೋರಿ ಆಫ್ ಕೇರಳ ಸ್ಟೋರಿ

ಕೇರಳ ಸ್ಟೋರಿಯನ್ನು ಎಲ್ಲರೂ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಮಹಿಳೆಯರು ನೋಡಬೇಕು. ಈ ಚಿತ್ರದ ತಂಡದೊಡನೆ ಮಾತುಕತೆಯ ಸಾರ ಇಲ್ಲಿದೆ.

YouTube Link: https://youtu.be/efcw5bHlZCo

ಈ ಚಿತ್ರದ ಕುರಿತು ಸಾಕಷ್ಟು ರಿಸರ್ಚ್ ಮಾಡಿದ್ದರರು. ನಿರ್ಮಾಣದಲ್ಲಿ ಕಷ್ಟವಿತ್ತು. ಕಮರ್ಷಿಯಲ್ ಅಂಶವನ್ನು ಸೇರಿಸಬೇಕಿತ್ತು ಇವೆಲ್ಲ ಸವಾಲು ಎದುರಿಸಿ ಚಿತ್ರ ಬಂದಿದೆ. ನಿರ್ದೆಶಕರು ಮೊದಲು ಇದರ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದರು. ಅದಕ್ಕಾಗಿ ಒಂದಷ್ಟು ಜನರನ್ನು ಭೇಟಿಯಾದರು. ಆಗ ಸಮಸ್ಯೆ ಬೆದರಿಕೆ ಎದುರಿಸಿದರು. ಕೇರಳ ಸರ್ಕಾರದ ಕಣ್ಣು ತಪ್ಪಿಸಿ ಅಧ್ಯಯನ ನಡೆಸಲು ಹರಸಾಹಸವೇ ಆಯಿತು.
ಇದೊಂದು ಸುಂದರ ರೋಚಕ ಪಯಣವೆನ್ನುತ್ತಾರೆ ನಿರ್ದೇಶಕ ವಿಪುಲ್ ಷಾ.

ಅವರಿಗೆ ಆದ ಪ್ರೇರಣೆ ಏನು? ಜನರಿಗೆ ತಲುಪಿಸಲು ಕಾರಣ ಏನು?
ಮತಾಂತರಿಗಳು ಉಗ್ರರು ಹಲವಾರು ಹೆಣ್ಣುಮಕ್ಕಳ ಜೀವನ ಜೊತೆ ಆಟ ಆಡಿದ್ದಾರೆ. ಸಂತ್ರಸ್ತರ ಭೇಟಿ ಮಾಡಿದಾಗ ಈ ಸಮಸ್ಯೆ ಬಗೆ ಹರಿಸದಿದ್ದರೆ ಇದು ಇನ್ನೂ ಬಿಗಡಾಯಿಸಬಹುದು ಅನಿಸಿತು. ಕಾರಣವೆಂದರೆ ಇದು ಕೇವಲ ಕೇರಳದಲ್ಲಾಗುವ ಘಟನೆ ಮಾತ್ರವಲ್ಲ. ಇದು ದೇಶವ್ಯಾಪಿ, ವಿಶ್ವವ್ಯಾಪಿಯಾದ ಸಂಗತಿ. ಕೇರಳದ ಕೆಲ ನಿದರ್ಶನ , ಘಟನೆ ಇದೆ ಅಷ್ಟೆ. ಇದು ಪೂರಾ ಭಾರತಕ್ಕೆ ಅನ್ವಯಿಸುತ್ತದೆ. ಈ ಸಂಗತಿ ಮುಂದಿನ ದಿನಗಳಲ್ಲಿ ಇದರ ಪ್ರಭಾವ ಅತಿಯಾಗುತ್ತದೆ. ಹಾಗಾಗಿ ಜನರು ಜಾಗೃತರಾಗಬೇಕು. ಅರ್ಥಮಾಡಿಕೊಳ್ಳಬೇಕು.
ಈ ದಿಸೆಯಲ್ಲಿ ಒಂದು ಅಡಿಗಲ್ಲು ಈ ಚಿತ್ರ. ನಾಳಿನ ಪೀಳಿಗೆ ಹಿತದೃಷ್ಟಿಯಿಂದಲೂ ಸಹ.

ಇನ್ನು ಈ ಕಥೆಯಲ್ಲಿ ನೋವಿದೆ. ಮನಕ್ಕೆ ತಾಕುವ ಅಂಶವಿದ್ದಾಗ ಅಂತರಂಗದಲ್ಲಿ ಬದಲಾವಣೆ ತಂದೇ ತರುತ್ತದೆ.

ಕಲಾವಿದರಿಗೂ ಸಹ ನಟನೆಯ ಸವಾಲು ಇತ್ತು. ಕಷ್ಟದ ದೃಶ್ಯಗಳಿದ್ದವು. ಕಲಾವಿದರು ಬೇರೆ ಬೇರೆ , ಭಿನ್ನ ಭಿನ್ನ ಪಾತ್ರ ಮಾಡಬೇಕಾಗುತ್ತದೆ. ಕೊನೆಯಲ್ಲಿ ಕಲಾವಿದರಿಗೆ ಇದು ತುಂಬಾ ತೃಪ್ತಿ ತಂದಿದೆ. ಚಿತ್ರ ನಿರ್ಮಾತೃಗಳ ಮನಸಲ್ಲಿ ಏನಿದೆ ಎಂದು ಅರಿತರೆ ಪಾತ್ರ ನಿರ್ವಹಣೆ ಸುಲಭವಾಗುತ್ತದೆ ಎನ್ನುತ್ತಾರೆ ಅದಾ ಶರ್ಮಾ.

ನಿರೀಕ್ಷೆಯೊಂದಿಗೆ ಕೆಲಸ ಮಾಡಬಾರದು. ಪ್ರತಿಯೊಬ್ಬರೂ ಚಿತ್ರವನೋಡಬೇಕೆಂಬ ಆಸೆ ಇದೆ. ಎಲ್ಲರಿಗೂ ತಲುಪಿ, ಜಾಗೃತಿ ಉಂಟು ಮಾಡಲಿ, ಹುಡುಗಿಯರು ನೋಡಲಿ, ತಮ್ಮ ಮನೆಯವರ ಸ್ನೇಹಿತೆಯರೊಡನೆ ಹೋಗಲಿ ಎನ್ನುತ್ತಾರೆ ಚಿತ್ರದ ನಟಿ ಅದಾ ಶರ್ಮಾ.

300x250 AD

ವಿಪರ್ಯಾಸವೆಂದರೆ ಜನ ಕೇವಲ ಅಂಕಿ ಸಂಖ್ಯೆ ಲೆಕ್ಕಿಸುತ್ತಿದ್ದಾರೆ. ಮೂವತ್ತು ಸಾವಿರ ಜನರ ಮತಾಂತರ ಅಲ್ಲ, ಇಪ್ಪತ್ತು ಸಾವಿರ ಅಲ್ಲ ಇಪ್ಪತ್ತೆರಡು ಸಾವಿರ. ಹೀಗೆ ಅಂಕಿ ಸಂಕಿ ಚರ್ಚಿಸುವ ಕೀಳು ಮನಃಸ್ಥಿತಿಗೆ ಬೇಸರ ಎನಿಸುತ್ತದೆ. ಎಲ್ಲಿಯವರೆಗೆ ಒಬ್ಬ ಹೆಣ್ಣುಮಗಳಿಗೆ ಅನ್ಯಾಯ ಆಗುತ್ತದೋ ಅದು ಅನ್ಯಾಯವೇ. ಒಬ್ಬರ ಇಬ್ಬರ ನೋವು, ಸಾವಿರ ಜನರ ನೋವು ಎಂದು ಬೇರೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಅದು ಸ್ವಾರ್ಥ, ನೀಚ ಮನೋಭಾವ. ಎಲ್ಲರ ನೋವೂ ಒಂದೇ. ನೋವು ಯಾರಿಗಾದರೂ ನೋವೇ. ಎಂಬ ಅಭಿಪ್ರಾಯ ಅದಾ ಶರ್ಮಾ ಅವರದ್ದು.

ಜನ ಚಿತ್ರ ನೋಡಿ ಇದು ಕೇವಲ ಸಂಖ್ಯೆಗಳ ಮೇಲೆ ನಿಂತ ಚಿತ್ರವೇ ಅಲ್ಲವೇ ಎಂಬುದನ್ನು ನಿರ್ಧರಿಸಬೇಕು. ಆಗುತ್ತಿರುವುದು ಸತ್ಯವೇ ಎಂದು ಅರಿಯಬೇಕು ಒಂದು ವೇಳೆ ಹಾಗಾಗಿದ್ದರೆ ಅದರ ಮೇಲೆ ಕ್ರಮ ಕೈಗೊಳ್ಳಲು ಜನರು ದನಿ ಎತ್ತಬೇಕೆಂಬ ಉದ್ದೇಶ ಚಿತ್ರ ನಿರ್ಮಾಣದ ಹಿಂದಿದೆ.

ವಿರೋಧಿಗಳಿಗೆ ಉತ್ತರ ಇರದಿದ್ದಾಗ ಕರ್ನಾಟಕದ ಚುನಾವಣೆ ಎದುರಿಗೆ ಈ ಚಿತ್ರ ಬಂದಿದೆ ಇತ್ಯಾದಿ ಬೇರೆ ಬೇರೆ ವಿಷಯ ಹಿಡಿದು, ವಿಷಯಾಂತರ ಮಾಡುತ್ತಾರೆ. ಇಲ್ಲಿಯೂ ಅದೇ ಆಗಿದೆ. ಜನ ಇದಕ್ಕೆ ಉತ್ತರ ನೀಡುತ್ತಾರೆ ಎನ್ನುತ್ತಾರೆ ನಿರ್ಮಾಪಕ ವಿಪುಲ್ ಷಾ.

ಸಂಖ್ಯೆ ಅಂಕೆಗಳು ನಮಗೆ ಮುಖ್ಯವಲ್ಲ. ಇದು ರಾಜಕೀಯ ವಿಷಯವಲ್ಲ. ಹಿಂದು ಮುಸ್ಲಿಮ್ ವಿವಾದವಲ್ಲ. ಇದು ಅಸಹಾಯಕ ಹೆಣ್ಣುಮಕ್ಕಳ ಪರಿಸ್ಥಿತಿ ಬಿಂಬಿಸುವ ಚಿತ್ರವಷ್ಟೇ. ಆದರೆ ಅಸಲಿಗೆ ಈ ಚಿತ್ರ ಏನೆಂದು ನೋಡದೇ ಈ ಚಿತ್ರ ಹಾಗೆ ಹೀಗೆ, ಬ್ಯಾನ್ ಮಾಡಿ ಎನ್ನುತ್ತಾರೆ ಅವರಿಗೇನೆನ್ನುವುದು.? ಅವರೆಲ್ಲರೂ ಚಿತ್ರ ನೋಡಲಿ ಮೊದಲು ಎನಂಬುದು ನಿರ್ದೇಶಕರ ಅಭಿಮತ.

ಏಕ್ ಶೂಟೌಟ್ ಅಟ್ ಲೋಖಂಡ್ವಾಲಾ ಎಂಬ ಪಾನ್ ಇಂಡಿಯಾ ಚಿತ್ರ ಬಂತು. ಅದೇನು ಲೋಖಂಡವಾಲಾದ ಮರ್ಯಾದೆ ತೆಗೆವ ಉದ್ದೇಶವಲ್ಲ ಅದೊಂದು ಚಿತ್ರದ ಹೆಸರಷ್ಟೆ. ಆ ಹೆಸರನ್ನಿಷ್ಟು ಒಂದು ವಿಷಯ ನಿರೂಪಿಸಿದರು. ಹಾಗೇ ಈ ಚಿತ್ರ ಕೂಡ ಕೇರಳ ಸ್ಟೋರಿ, ಇದು ದೇಶದಲ್ಲಿ ಆಗುವ ವಿಷಯ ಆಧರಿಸಿದೆ. ನಮ್ಮ ದೇಶದಲ್ಲಿ , ಯಾವುದೇ ಹೆಣ್ಣುಮಗಳು ಮನೆಗೆ ಬರುವುದು ತಡವಾದಾಗ, ಸಂಜೆ ಆದರೂ ಇನ್ನೂ ಬರಲಿಲ್ಲ ಎಂದಾಗ ತಳಮಳವಾಗುತ್ತದೆ, ತಾಯಂದಿರಿಗೆ ದಿಗಿಲಾಗುತ್ತದೆ. ದೇಶಾದ್ಯಂತ ಹಿಂಗಾದರೆ ಭಾರತಮಾತೆಗೆ ಏನೆನ್ನಿಸುತ್ತದೆ? ಜನರು ವಿಚಾರ ಮಾಡಬೇಕು.
ಮುಂದೆ ಈ ವಿಷಯ ತಮಗೆ ಗೊತ್ತಿರಲಿಲ್ಲ. ತಂದೆ ತಾಯಿಗಳು ಹಿರಿಯರು ಹೇಳಲಿಲ್ಲ ಎಂದು ದೂರಬಾರದೆಂದರೆ ಇಂತಹ ವಿಷಯದ ಬಗ್ಗೆ ಶಿಕ್ಷಣ ತಿಳುವಳಿಕೆ ನೀಡಬೇಕು.

ಕೃಪೆ: https://www.youtube.com/@BharatVerseAnalysis

Share This
300x250 AD
300x250 AD
300x250 AD
Back to top