• Slide
  Slide
  Slide
  previous arrow
  next arrow
 • The Kerala Story: ಇದು ವಾಸ್ತವವೇ ಅಥವಾ ಪ್ರಚಾರವೇ?

  300x250 AD

  ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಇದರ ಕುರಿತು ಎಡಪಂಥಗಳು ಸಾಕ್ಷಿ ಕೇಳುತ್ತಿವೆ. ಇದೊಂದು ಪ್ರಚಾರ, ಪ್ರೊಪಗಾಂಡಾ ಎಂದು ಊಳಿಡುತ್ತಿವೆ. ಅಸಲಿಗೆ ಇದು ನಿಜವಾ ? ಬರೀ ಕಲ್ಪನೆಯಾ ಎಂಬ ಪ್ರಶ್ನೆ ಜನಸಾಮಾನ್ಯರ ಮನಸ್ಸಿಗೆ ಬಂದು ಬಿಡುತ್ತದೆ. ಅದಕ್ಕೆ ಉತ್ತರ ಬೇಕಲ್ಲವೇ? ಪ್ರೂಫ್ ಬೇಕಲ್ಲವೇ..?

  YouTube Link: https://youtu.be/ez1hOrRjJyU

  ಚಿತ್ರ ಬಹುತೇಕ ನೈಜ ಘಟನೆ ಆಧರಿಸಿದೆ. ಸ್ವಲ್ಪಮಟ್ಟಿಗೆ ಚಿತ್ರ ಸ್ವಾತಂತ್ರ್ಯ ಇರುತ್ತದೆ. ಅದು ಬಿಟ್ಟರ ಸತ್ಯ ಘಟನೆಯನ್ನೇ ಸತ್ವವಾಗಿಸಿಕೊಂಡ ಚಿತ್ರ.

  ಇದರ ಕುರಿತು ಮಾತನಾಡುವಾಗ ಕತೆ ಹಿಂದಕ್ಕೆ ಹೋಗುತ್ತದೆ. ಮೊಪ್ಲಾ ದಂಗೆ ಗೊತ್ತಿರಬಹುದು. ಮೊಪ್ಲಾಗಳು ಎಂದರೆ ಹೊರಗಿಂದ ಬಂದವರು. ಹದಿನಾರನೇ ಶತನದ ಸುಮಾರಿಗೆ ಅರಬ್ ದೇಶದಿಂದ ಬಂದ ಮುಸ್ಲಿಮರು ಕೇರಳೀಯ ಮಹಿಳೆಯರನ್ನು ಮದುವೆ ಆದರು. ಇಲ್ಲಿಯೇ ನೆಲೆಸಿದರು. ಇವರು ಉದ್ಯೋಗಕ್ಕಾಗಿ ಅರಬ್ ದೇಶಕ್ಕೆ, ಗಲ್ಫ್ ದೇಶಕ್ಕೆ ಹೋಗಿ ಅಲ್ಲಿಂದ ಹಣ ಇಲ್ಲಿಗೆ ಜಕಾತ್( ದಾನ) ರೂಪದಲ್ಲಿ ಬರುತ್ತದೆ. ಅದರ ಶಕ್ತಿಯಿಂದ ಬೇರೆ ಬೇರೆ ಚಟುವಟಿಕೆ ನಡೆಯುತ್ತದೆ.

  ಇಂದೂ ಸಹ ಅರಬ್ ದೇಶಗಳಿಗೆ ಹೋಗುತ್ತಾರೆ. ಅಲ್ಲಿಂದ ಹಣ ಬರುತ್ತದೆ. ಅದರಿಂದ ಬೇರೆ ಬೇರೆ ಕೆಲಸಕ್ಕೆ ಹಣ ಬಳಕೆಯಾಗುತ್ತದೆ.
  ಮೇಲಾಗಿ ಕೇರಳದಲ್ಲಿರುವ ಮಾರ್ಕ್ಸ್, ಕಮ್ಯುನಿಸಂ ಆಡಳಿತ ಇಸ್ಲಾಮೀಕರಣ ಮತಾಂತರಕ್ಕೆ ದಾರಿ ಮಾಡುವಂಥವೇ.

  ಕೇರಳ ಸ್ಟೊರಿಯಲ್ಲಿ ಒಬ್ಬ ಹಿಂದು ಮಹಿಳೆ ಇಸ್ಲಾಮಿಗೆ ಹೇಗೆ ಸೆಳೆಯಲಾಗುತ್ತದೆ ? ಎಂದೆಲ್ಲ ಚಿತ್ರಿಸಿದ್ದಾರೆ. ಇದು ಇಂದಿಗೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಕೆಲಸ.

  300x250 AD

  ಶಶಿ ತರೂರ್ ಇದು ನಮ್ಮ ಕೇರಳ ಕಥೆಯಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸಿಗರಾದ ಇವರು ಹೆಸರಿಗೆ ಮಾತ್ರ ಹಿಂದು.

  ಗಾಂಧಿ ಗೋಡ್ಸೆ… ಬಾಲಿವುಡ್ ಇಂಥ ಚಿತ್ರ ಗಳನ್ನು ಮಾಡುತ್ತಿದೆ ಎಂದರೆ ಅಲ್ಲಿ ಪರಿವರ್ತನೆ ಆಗುತ್ತಿದೆ ಎಂದರ್ಥ. ಚಿತ್ರಗಳು ಬಾಯ್ಕಾಟ್ ಆಗುತ್ತಿವೆ. ಸಾಲು ಸಾಲು ಚಿತ್ರಗಳು ಫ್ಲಾಪ್ ಆಗಿ ಮಕಾಡೆ ಮಲಗುತ್ತಿದೆ. ಹೂಡಿದ ಹಣ ವಾಪಸು ಬರುತ್ತಿಲ್ಲ. ಹಾಗಾಗಿ ಉದ್ದೇಶ ನೀತಿಗಳನ್ನು ಚಿತ್ರರಂಗ ಬದಲಿಸಿಕೊಳ್ಳುತ್ತಿದೆ. ‘ಕಶ್ಮೀರ್ ಫೈಲ್ಸ್’ ದೊಡ್ಡ ಯಶ ಕಂಡಿತು ‘ಹೂ ಕಿಲ್ ಶಾಸ್ತ್ರಿ’ ಕೂಡ ಜನಮನ್ನಣೆ ಗಳಿಸಿತು. ಹಾಗಾಗಿ ಮೈನಾರಿಟಿ ಮೆಚ್ಚಿಸುವ ,ಅದೆ ಹಳಸಲು ಸ್ಟಫ್ ಒಳಗೊಂಡ ಚಿತ್ರದಿಂದ ಬಾಲಿವುಡ್ ಹೊರಬರುವ ಲಕ್ಷಣ ಇದು.
  ಹಾಕಿದ ಹಣವಾದರೂ ಬರಬೇಕಾದರೆ ನಿರ್ಮಾಪಕರು ವಿಚಾರ ಮಾಡುತ್ತಾರೆ. ಯಾಕೆಂದರೆ ಅದೊಂದು ಉದ್ಯಮ. ಮಹಾರಾಷ್ಟ್ರದಲ್ಲಿಗ ಪೂರಕ ವಾತಾವರಣ ಕೂಡ ಇದೆ.

  ಅದೇನೆ ಇರಲಿ,32000 ದಷ್ಟು ಮಹಿಳೆಯರು ಮತಾಂತರವಾಗಿದ್ದರಲ್ಲ ಅದರ ಕಥೆ ಏನು? ಅವರನ್ನು ಮರಳಿ ತರಬಹುದೆ? ಅವರ ಬ್ರೇನ್ ವಾಷಿಂಗ್ ಕೂಡ ಆಗಿರುತ್ತದೆ. ಈ ಕೆಲಸ ಸುಲಭದ್ದಲ್ಲ. ತಕ್ಷಣ ಆಗುವಂಥದ್ದಲ್ಲ. ಅದಕ್ಕಾಗಿ ಹಲವಾರು ಮಾರ್ಗಗಳಿವೆ.

  • ಮರಳಿ ಬರಲು ದಾರಿ ಮಾಡಿಕೊಡಬೇಕು
  • ಸಹಕಾರ ನೀಡುವ ಫಂಡ್’ಗಳನ್ನು ನಿಯಂತ್ರಿಸಬೇಕು
  • ಮದರಸಾಗಳ ಬಗ್ಗೆ ನಿಗಾ ಇಡುವುದು
  • ರಾಜ್ಯಗಳು ಕಾನೂನು ಸುವ್ಯವಸ್ಥೆ ಕಾಪಾಡಬೇಕು.
  • ಸೋಷಿಯಲ್ ಮೀಡಿಯಾ ಮೂಲಕ ಜನಜಾಗೃತಿ, ಚರ್ಚೆ ನಡೆಯಬೇಕು.
  • ಕುಟುಂಬ ವ್ಯವಸ್ಥೆ, ಸಂಸ್ಕಾರದ ಬಗ್ಗೆ ಸಂಬಂಧಗಳ ಮಹತ್ವ ಅರಿಯಬೇಕು. ತಿಳುವಳಿಕೆ ನೀಡಬೇಕು.
  • ವಿಶೇಷವಾಗಿ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ವಹಿಸುವುದು, ವೂಂಬ್ ಜಿಹಾದ್, ಸೆಕ್ಸ್ ಜಿಹಾದಿನಿಂದ ರಕ್ಷಣೆ ಆಗಬೇಕು.
  • ಕೇಂದ್ರ, ರಾಜ್ಯ ಸರ್ಕಾರ ಕ್ಕೆ ಪ್ರಶ್ನೆ ಕೇಳಬೇಕು ಎಲ್ಲಿಯೇ ಅನ್ಯಾಯವಾದರೂ ದನಿ ಎತ್ತಬೇಕು.
  • ಜನರಿಂದ ಸರ್ಕಾರದಿಂದ ಸಂಯೋಜಿತ ಪ್ರಯತ್ನಳಾಗಬೇಕು.

  ಕೇರಳ ಸ್ಟೋರಿ ಒಂದು ಚಿತ್ರ. ಇದು ರಾಜಕೀಯ ವಿಚಾರವಲ್ಲ ಪತ್ರಿಕಾ ಸ್ವಾತಂತ್ರ್ಯ, ಚಿತ್ರ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ವಿಚಾರವಾದಿಗಳು ಈ ಚಿತ್ರವನ್ನೇಕೆ ವಿರೋಧಿಸುತ್ತಾರೆ.?
  ಈ ಚಿತ್ರವನ್ನು ಒಮ್ಮೆ ನೋಡಿ. ಇನ್ನಾದರೂ ಎಚ್ಚೆತ್ತುಕೊಳ್ಳಿ.

  ಕೃಪೆ: https://www.youtube.com/@politicallyperfect

  Share This
  300x250 AD
  300x250 AD
  300x250 AD
  Leaderboard Ad
  Back to top