ಶಿರಸಿ: ನಾವು ಉಳಿಯಬೇಕೆಂದರೆ ಪ್ರಕೃತಿ ಉಳಿಯಬೇಕು.ಪ್ರಕೃತಿಯಲ್ಲಿ ಅನೇಕ ಜೀವ ವೈವಿಧ್ಯಗಳಿವೆ, ಅವುಗಳ ಸರಪಣಿಯನ್ನು ನಾವು ತಿಳಿಯಬೇಕು, ನೈಸರ್ಗಿಕ ಪರಿಸರ, ನದಿ, ಅರಣ್ಯ, ಹಾಗೂ ಪ್ರಾಣಿ ಪಕ್ಷಿ ಸಕಲ ಜೀವವೈವಿಧ್ಯಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ವಿದ್ಯಾನಗರ ರುದ್ರ ಭೂಮಿಯ ಸಮಿತಿಯ ಸದಸ್ಯರು ಸಾಮಾಜಿಕ ಕಾರ್ಯಕರ್ತರು ವಿ.ಪಿ.ಹೆಗಡೆ ವೈಶಾಲಿ ಹೇಳಿದರು.
ಅವರು ರವಿವಾರದಂದು ರುದ್ರಭೂಮಿಯ ಆವಾರದಲ್ಲಿ ಯೂತ್ ಫಾರ್ ಸೇವಾ ಶಿರಸಿ ಮತ್ತು ಸುಭಾಶ್ಚಂದ್ರ ಭೋಸ್ ಕಾರ್ಯಪಡೆ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ಜೀವವೈವಿಧ್ಯ ದಿನಾಚರಣೆ “ ದಾಖಲಾತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಜೀವ ವೈವಿಧ್ಯವು ಸೂಕ್ಷ್ಮಜೀವಿಗಳನ್ನು ಒಳಗೊಂಡಿದೆ. ಇದನ್ನು ರಕ್ಷಣೆ ಮಾಡುವದಿರಂದ ಆಹಾರ ಸರಪಳಿಯನ್ನು ಸಮತೋಲನ ಮತ್ತು ಭೂಮಿಯ ಪರಿಸರ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಅವು ಸಹಾಯ ಮಾಡುತ್ತವೆ.ಅಲ್ಲದೇ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳ ಅನುವಂಶಿಕ ವೈವಿದೈತೆಯನ್ನು ಸಂರಕ್ಷಿಸಲು ಅನುಕೂಲ ಮಾಡಿಕೊಡುತ್ತವೆ. “ಜಲಜಾ ನವ ಲಕ್ಷಾಣಿ ಸ್ಥಾವರಾ ಲಕ್ಷ ವಿಶಂತಿ ಕ್ರಿಮಯೋ: ರುದ್ರ ಸಂಖ್ಯಾ:” ನೀರಿನಲ್ಲಿ ಒಂಬತ್ತು ಲಕ್ಷ , ಭೂಮಿಯ ಮೇಲೆ 20 ಲಕ್ಷ ಜೀವ ವೈವಿಧ್ಯಗಳಿವೆ. ಕ್ರಿಮಿಗಳು ಕೋಟಿ ಕೋಟಿ ಸಂಖ್ಯೆಲ್ಲಿದೆ ಎಂದು ಪದ್ಮಪುರಾಣದಲ್ಲಿ ಉಲ್ಲೇಖವಾಗಿದೆ ಇವುಗಳನ್ನು ಕಾಪಾಡುವ ಹೊಣೆ ನಮ್ಮದಾಗಲಿ ಎಂದು ತಿಳಿಸಿದರು.
ಯೂತ್ ಫಾರ್ ಸೇವಾ ಪರಿಸರ ಸಂಯೋಜಕ ಉಮಾಪತಿ ಭಟ್ಟ್, ಶಿರಸಿ ಅಧ್ಯಾಯದ ವಿಜೇತ ನಾಯ್ಕ, ಯೂತ್ ಫಾರ್ ಸೇವಾ 11 ಸ್ವಯಂಸೇವಕರು ಸುಭಾಶ್ಚಂದ್ರ ಭೋಸ್ ಕಾರ್ಯಪಡೆ ಶಿರಸಿ ಇದರ ಸದಸ್ಯರು ಪಾಲ್ಗೊಂಡಿದ್ದರು.
ರುದ್ರಭೂಮಿಯ ಆವಾರದಲ್ಲಿನ ನಾಗಾರ್ಜುನ , ಹೊಂಗೆ, ಹಣ್ಣು ಸಂಪಿಗೆ , ಲಕುಚ, ಶ್ರೀಗಂದ, ಶಿವಣೆ, ಬುದ್ದನ ಕಲ್ಪವೃಕ್ಷ ಸಹದೇವಿ ಮೊದಲಾದ.144 ಸಸ್ಯ ಪ್ರಬೇಧ ಹಾಗೂ ಗಿಳಿ ನೊಣ ಹಿಡುಕ, ಬುಲ್ಬುಲ್, ಕೋಗಿಲೆ ಗರುಡ, ಕಾಜಾಣ ಮೊದಲಾದ 45 ಪಕ್ಷಿ ಪ್ರಬೇಧಗಳನ್ನು ದಾಖಲಾತಿ ಮಾಡಲಾಯಿತು.