Slide
Slide
Slide
previous arrow
next arrow

ಲಯನ್ಸ್ ವಾರ್ಷಿಕ ಸಮಾವೇಶ: ವಿಶೇಷ ಸ್ಥಾನಮಾನ ಪಡೆದ ಶಿರಸಿ‌ ಕ್ಲಬ್

300x250 AD

ಲಯನ್ಸ್ ಕ್ಲಬ್ ಮತ್ತು ಸದಸ್ಯರಿಗೆ ಪ್ರಶಸ್ತಿಗಳು
ಶಿರಸಿ: ಇತ್ತೀಚೆಗೆ ಗೋವಾದಲ್ಲಿ ನಡೆದ ಲಯನ್ಸ ಜಿಲ್ಲಾ 317 B ಇದರ ವಾರ್ಷಿಕ ಸಮಾವೇಶದಲ್ಲಿ ಶಿರಸಿ ಲಯನ್ಸ್ ಕ್ಲಬ್’ಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು ಶಿರಸಿ ಕ್ಲಬ್ ಒಂದು ವಿಶೇಷ ಸ್ಥಾನವನ್ನು ಗಳಿಸಿದೆ. ಬ್ಯಾನರ್ ಪ್ರೆಸೆಂಟೇಶನ್ನಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ವೈಯುಕ್ತಿಕವಾಗಿ ಹಲವಾರು ಸದಸ್ಯರನ್ನು ಉತ್ತಮ ಸೇವೆಗಾಗಿ ಪುರಸ್ಕರಿಸಲಾಗಿದೆ. ರೀಜನಲ್ ಛೇರಪರ್ಸನ್ ಜ್ಯೋತಿ ಭಟ್ಟರಿಗೆ ಅತ್ಯುತ್ತಮ ನಾಯಕತ್ವಕ್ಕಾಗಿ ಅಂತರರಾಷ್ಟ್ರೀಯ ಅಧ್ಯಕ್ಷರ ಪದಕವನ್ನು ಕೊಡಮಾಡಲಾಯಿತು. ಡಿಸ್ಟ್ರಿಕ್ಟ್ ಛೇರಪರ್ಸನ್ ರಮಾ ಪಟವರ್ಧನ್, ಗುರುರಾಜ ಹೊನ್ನಾವರ ಮತ್ತು ಅಶೋಕ ಹೆಗಡೆಯವರಿಗೆ ಅಂತರ ರಾಷ್ಟ್ರೀಯ ಅಧ್ಯಕ್ಷರ ಪ್ರಶಂಸಾ ಪತ್ರಗಳನ್ನು ನೀಡಲಾಯಿತು. ಲಿಯೊ ಅಧ್ಯಕ್ಷೆ ಅನನ್ಯಾ ಹೆಗಡೆಗೆ ಬೆಸ್ಟ ಪ್ರೆಸಿಡೆಂಟ್ ಮತ್ತು ಕಾರ್ಯದರ್ಶಿ ಶ್ರೇಯಾ ಬಡಿಗೇರಳಿಗೆ ಪ್ರಶಂಸಾ ಪ್ರಶಸ್ತಿಯನ್ನು ಹಾಗು ಶ್ರೀನಿಕೇತನ ಲಿಯೊ ಸಿರಿ ಹೆಗಡೆಗೆ ಜಿಲ್ಲಾ ಪ್ರಶಂಸಾ ಪ್ರಶಸ್ತಿಯನ್ನು ನೀಡಿದರು. ಲಯನ್ಸ ಕ್ಲಬ್ ಅಧ್ಯಕ್ಷರಾದ ತ್ರಿವಿಕ್ರಮ ಪಟವರ್ಧನರು ಎಲ್ಲರನ್ನೂ ಅಭಿನಂದಿಸಿ ಲಯನ್ಸ ಕ್ಲಬ್ ಶಿರಸಿ ಮತ್ತಷ್ಟು ಹೆಚ್ಚಿನ ಸೇವೆ ನೀಡುವಂತಾಗಲಿ ಎಂದು ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top