Slide
Slide
Slide
previous arrow
next arrow

SSLC Result: ಬಿದ್ರಕಾನ ಪ್ರೌಢಶಾಲೆ ʼಎʼ ಗ್ರೇಡ್ ಸಾಧನೆ

300x250 AD

ಶಿರಸಿ: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ತಾಲೂಕಿನ ಎಂ.ಜಿ.ಸಿ.ಎಂ. ಪ್ರೌಢಶಾಲೆ ವಿದ್ಯಾರ್ಥಿಗಳು ‘ಎ’ ಗ್ರೇಡ್ ಸಾಧನೆ ಮಾಡಿದೆ. ಪ್ರೌಢಶಾಲೆಯ ಪರಿಮಾಣಾತ್ಮಕ ಫಲಿತಾಂಶ 94.29% ಮತ್ತು ಗುಣಾತ್ಮಕ ಫಲಿತಾಂಶ 84.86% ಆಗಿದೆ.
10 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಮತ್ತು 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಉತ್ತಮ ಗುಣಾತ್ಮಕ ಫಲಿತಾಂಶವನ್ನು ನೀಡಿದ್ದಾರೆ.

ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಪ್ರಣವ ಮಧುಕೇಶ್ವರ ಭಟ್ಟ 625 ಕ್ಕೆ 608 (97.29%) ಅಂಕಗಳನ್ನು ಗಳಿಸಿ ತನ್ನದಾಗಿಸಿಕೊಂಡಿದ್ದಾನೆ. . ದ್ವಿತೀಯ ಸ್ಥಾನವನ್ನು ಅಂಜಲಿ ಕೃಷ್ಣ ನಾಯ್ಕ ಪಡೆದಿದ್ದು 606 ಅಂಕ ಗಳಿಸುವ ಮೂಲಕ 96.96% ಪಡೆದಿರುತ್ತಾಳೆ. ತೃತೀಯ ಸ್ಥಾನ ಗೌರವ ಪ್ರಶಾಂತ ಭಟ್ಟ– 586 -93.76%, ನಾಲ್ಕನೇ ಸ್ಥಾನವನ್ನು ಭಾಗ್ಯಲಕ್ಷ್ಮಿ ಶ್ರೀಧರ ಹೆಗಡೆ 579 – 92.64 % ಮತ್ತು ಐದನೇ ಸ್ಥಾನವನ್ನು ಜೀವನ ರವಿ ಆಚಾರಿ – 578 – 92.48% ಪಡೆಯುವ ಮೂಲಕ ಪ್ರೌಢಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

300x250 AD

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top