Slide
Slide
Slide
previous arrow
next arrow

SSLC ರಿಸಲ್ಟ್: ಸರಕುಳಿ ಪ್ರೌಢಶಾಲೆ ಸಾಧನೆ

300x250 AD

ಸಿದ್ದಾಪುರ: ತಾಲೂಕಿನ ಸರಕುಳಿ ಜಗದಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ 96.9% ಫಲಿತಾಂಶ ಪಡೆದು ಸಾಧನೆ ಗೈದಿದ್ದಾರೆ. ಪರೀಕ್ಷೆಗೆ ಕುಳಿತ 32 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರಥಮ ಶ್ರೇಣಿಯಲ್ಲಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 13 ವಿದ್ಯಾರ್ಥಿಗಳು 90%ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.

ಸೌಖ್ಯಾ ಹೆಗಡೆ 625 ಕ್ಕೆ 613 ಅಂಕ (98.08%) ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಅಭಿನಂದನ ಹೆಗಡೆ 610 ಅಂಕಗಳೊಂದಿಗೆ (97.60%) ದ್ವಿತೀಯ ಸ್ಥಾನ, ಅಭಿರಾಮ ನಾಯ್ಕ 605 ಅಂಕಗಳೊಂದಿಗೆ (96.80%) ತೃತೀಯ ಸ್ಥಾನ, ವಿಸ್ಮಯಾ ಹೆಗಡೆ 601 ಅಂಕ (96.16%) ಪಡೆದು ಶಾಲೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ.

300x250 AD

ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯಾಧ್ಯಾಪಕರು, ಶಿಕ್ಷಕ ಸಿಬ್ಬಂದಿಗಳು, ಆಡಳಿತ ಮಂಡಳಿ, ಸ್ಥಳೀಯರು, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top