ಜೋಯಿಡಾ: ಜೋಯಿಡಾ – ಹಳಿಯಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಗೆಲುವು ಖಚಿತ ಎಂದು ಜೋಯಿಡಾ ಗ್ರಾ.ಪಂ.ಸದಸ್ಯ ಮಹೇಂದ್ರ ಹರ್ಚಿಲಕರ ಹೇಳಿದರು.
ಅವರು ಜೋಯಿಡಾ ಭಾಗದಲ್ಲಿ ಬಿಜೆಪಿ ಪರ ಪ್ರಚಾರ ಕೈಗೊಂಡು ಮಾತನಾಡುತ್ತಾ ದೇಶದಲ್ಲಿ ಬಿಜೆಪಿ ಸರ್ಕಾರ ಇದೆ, ಈ ಬಾರಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ, ನಮ್ಮ ಭಾಗದ ನಾಯಕ ಪಕ್ಷದ ಅಭ್ಯರ್ಥಿ ಸುನೀಲ್ ಹೆಗಡೆ ಅವರು ಪ್ರಚಂಡ ಬಹುಮತದಿಂದ ಗೆದ್ದು ಬರಲಿದ್ದಾರೆ, ಜೋಯಿಡಾ ಭಾಗದಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ, ಜೋಯಿಡಾ ತಾಲೂಕಿನಲ್ಲಿ ಬಿಜೆಪಿ ಬಾವುಟ ರಾರಾಜಿಸಲಿದೆ ಎಂದರು.
ಈ ಸಂದರ್ಭದಲ್ಲಿ ಜೋಯಿಡಾ ಗ್ರಾ.ಪಂ.ಅಧ್ಯಕ್ಷ ಅರುಣ ಕಾಂಬ್ರೆಕರ, ಸದಸ್ಯ ರೂಪೇಶ ದೇಸಾಯಿ ಬಿಜೆಪಿ ಪಕ್ಷದ ಕಾರ್ಯಕರ್ತರಾದ ಸಂತೋಷ ಸಾವಂತ, ಸಿದ್ದು ಜೋಕೇರಿ, ಸುರೇಶ ಕೊಟೆಕಲ್,ಬಸವರಾಜ ಚಿತ್ತೋಡಗಿ ಸೇರಿದಂತೆ ಬಹಳಷ್ಟು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.