Slide
Slide
Slide
previous arrow
next arrow

‘ಜನ್ಮನಾ ಜಾಯತೇ ಜಂತುಃ ಕರ್ಮಣಾ ದ್ವಿಜಮುಚ್ಯತೆ’

300x250 AD

ಇತ್ತೀಚೆಗೆ ರೂಪಾ ಮೂರ್ತಿ ಎಂಬುವವರು ಉಪನಯನದ ಸಂದರ್ಭದ ಫೋಟೊ ಹಾಕಿ, ವಟುವನ್ನು ಆಶೀರ್ವದಿಸಿ ಎಂದು ಬರೆದಿದ್ದರು. ಇದನ್ನು ಆಧರಿಸಿ ಎಡಪಂಥೀಯರು ಮುಗಿಬಿದ್ದು ಹಿಂದೂ ಆಚರಣೆಯನ್ನು ವಿರೋಧಿಸಿದ್ದಾರೆ. ಮೇಲಾಗಿ ಬ್ರಾಹ್ಮಣ ಆಚರಣೆಯ ಮೇಲೆ ದಾಳಿ ಮಾಡಿದ್ದಾರೆ.
ಹಿಂದು, ಬ್ರಾಹ್ಮಣ ಅವಹೇಳನ ಕೆಲವರಿಗೆ ಹಿಂದಿನಿಂದಲೂ ಚಾಳಿಯಾಗಿದೆ. ಈಗ ಈ ಸುದ್ದಿ ಸದ್ದು ಆಗಲು ಕಾರಣ ಕರ್ನಾಟಕ ಚುನಾವಣೆ ಹಿನ್ನೆಲೆ ಸಹ ಇದೆ.

ಹಿಂದು ಧರ್ಮದಲ್ಲಿ ಹುಟ್ಟಿನಿಂದ ಜಾತಿ ನಿರ್ಧಾರವಾಗುವುದಿಲ್ಲ. ಅವರವರ ಗುಣಕ್ಕೆ, ಕರ್ಮಕ್ಕೆ ಅನುಗುಣವಾಗಿ ಅವರೇನೆಂದು ಅರಿತುಕೊಳ್ಳಬೇಕು.

ಜನ್ಮನಾ ಜಾಯತೇ ಜಂತುಃ ಕರ್ಮಣಾ ದ್ವಿಜಮುಚ್ಯತೆ ಅನ್ನುತ್ತಾರೆ. ಹುಟ್ಟುವಾಗ ಒಂದು ಜೀವಿಯಾಗಿ ತಾನು ಮಾಡುವ ಸತ್ಕಾರ್ಯದಿಂದ ಬ್ರಾಹ್ಮಣನಾಗುತ್ತಾನೆ. ಸತ್ಕಾರ್ಯ ಸಾಧ್ಯವಾಗುವುದು ಸಂಸ್ಕಾರದಿಂದ. ಉಪನಯನ ಎನ್ನುವುದು ಅಂತಹ ಒಂದು ಸಂಸ್ಕಾರ. ಉಪನೀತನಾದವನು ದ್ವಿಜನಾಗಿ ಬ್ರಾಹ್ಮಣ ಎನಿಸಿಕೊಳ್ಳುತ್ತಾನೆ. ದ್ವಿಜ ಎಂದರೆ ಎರಡು ಸಾರಿ ಹುಟ್ಟಿದವ ಎಂದು. ಉಪನಯನದ ನಂತರ ನಿತ್ಯವೂ ಸಂಧ್ಯಾವಂದನೆ ಮಾಡಬೇಕಾಗುತ್ತದೆ. ನಿಯಮಗಳನ್ನು ಪಾಲಿಸುತ್ತ ಬದುಕಬೇಕು. ಇಂತಹ ಆಚರಣೆಯಿಂದಲೇ ಅಲ್ಲವೇ ಧರ್ಮ ಉಳಿಯುವುದು. ಇದು ಎಡಚರಿಗೆ ಉರಿಸುತ್ತದೆ.

ಧರ್ಮದ ಮೂಲವಾಗಿರುವ , ಶಕ್ತಿಯಾಗಿರುವ ಬ್ರಾಹ್ಮಣರನ್ನು ಹಣಿದರೆ ಇತರರನ್ನು ಸುಲಭವಾಗಿ ಮೂರ್ಖರಾಗಿಸಬಹುದು ಎಂಬ ಹುನ್ನಾರ. ಯಾವುದೇ ಚುನಾವಣೆ ಇತರ ಸಂದರ್ಭವಾಗಲೀ ಬ್ರಾಹ್ಮಣದೂಷಣೆ, ನಿಂದನೆ ಕೆಲವರಿಗೆ ಅಸ್ತ್ರವಾಗಿದೆ. ಬ್ರಾಹ್ಮಣರನ್ನು ಬೈದು ತಮ್ಮ ಬೇಳೆ ಬೇಯಿಸಿಕೊಳ್ಳುವ ತಂತ್ರಗಾರಿಕೆ ಇವರದ್ದು. ಅಧಿಕಾರ, ಸ್ವಾರ್ಥ ಲಾಭಕ್ಕಾಗಿ ಇಂದು ಬ್ರಾಹ್ಮಣರನ್ನು ಅವಹೇಳನ ಮಾಡುವವರು ನಾಳೆ ಇತರರ ಸಮುದಾಯದವರನ್ನು ಬಿಡುತ್ತಾರೆಯೇ?
ಭಾರತವನ್ನು ಬಿಡುತ್ತಾರೆಯೇ? ಭಾರತೀಯರನ್ನು ಬಿಡುತ್ತಾರೆಯೇ ?

ಇಂತಹ ಹಳಿಯುವ ಕೆಲಸ ಜಾರ್ಜ್ ಸಾರೋಸ್, ಟೂಲ್ ಕಿಟ್ನ ಭಾಗವೆಂಬ ಗುಮಾನಿಯೂ ಇದೆ.

ಹಿಂದೂಗಳ ಸೋಲು, ಮೋದಿಯ ಸೋಲು, ಬಿಜೆಪಿಯ ಸೋಲು ಬಯಸುವ ಇವರಿಗೆ ದ್ವೇಷವೇ ಅಸ್ತ್ರವಾಗಿದೆ. ಅಲ್ಲದೇ, ಬ್ರಾಹ್ಮಣರು ಸುಲಭಕ್ಕೆ ಗುರಿಯಾಗಲು ಕಾರಣ ಅವರು ತಿರುಗಿ ಗಲಭೆ ದಂಗೆ ಮಾಡುವುದಿಲ್ಲ ಮತ್ತು ಕಲ್ಲು ಎಸೆಯುವುದಿಲ್ಲವಲ್ಲ.

300x250 AD

ಅಕ್ಬರ್ ಔರಂಗಜೇಬ್ ಕಾಲದಲ್ಲೂ ಬ್ರಾಹ್ಮಣರ ಹತ್ಯೆ ಆಗಿತ್ತು. ನಂತರ ಬ್ರಾಹ್ಮಣರ ಜನಿವಾರಗಳ ರಾಶಿಯನ್ನು ತಕ್ಕಡಿಯಲ್ಲಿ ತೂಗಿನೋಡುತ್ತಿದ್ದರು. ಎಷ್ಟು ಬ್ರಾಹ್ಮಣ ಹತ್ಯೆ ಆಗುತ್ತಿತ್ತೆಂದು ತಿಳಿಯಲು.

ಬ್ರಾಹ್ಮಣರ, ಕ್ಷತ್ರಿಯರ ಮೇಲಿನ ವಿರುದ್ಧ ಇಂದು ನಿನ್ನೆಯದಲ್ಲ. ಹಿಂದೂಗಳಲ್ಲಿ ಈ ರೀತಿ ಬಿರುಕು ಮುಡಿಸಿ ಬ್ರಾಹ್ಮಣರ ವಿರುದ್ದ ಇತರ ಸಮುದಾಯ ಎತ್ತಿ ಕಟ್ಟಿ ಎಡವ್ಯವಸ್ಥೆ ಲಿಂಗಾಯತ ವೋಟನ್ನು ಕಾಂಗ್ರಸ್ ಗೆ ದೊರಕಿಸಿಕೊಡುವ ಉದ್ದೇಶ ಹಿಂದಿದೆ. ಕರ್ನಾಟಕ ಚುನಾವಣೆಗೆ ಪ್ರಭಾವ ಬೀರುತ್ತದೆ.ಹಾಗಾಗಿ ಉಪನಯನದಂತಹ ಹಿಂದುಗಳ ಆಚರಣೆಯ ಮೇಲೆ ಹರಿಹಾಯಲಾಗಿದೆ.

ಸಂವಿಧಾನದ ಅಡಿಯಲ್ಲಿ ಭಾರತೀಯ ನಾಗರಿಕರೆಲ್ಲರಿಗೂ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಇದೆ. ಅದನ್ನು ಅಡ್ಡಿ ಪಡಿಸುವುದು ವಿರೋಧಿಸುವುದು ಸಂವಿಧಾನ ವಿರುದ್ಧವಾಗುತ್ತದೆ.

ಈ ವಿಷಯ ಅರಿತ ಎಡಪಂಥೀಯ ನಿತಿನ್ ಮಿಶ್ರಮ್ ಕೇಸ್ ಹಾಕುವ ವಿಚಾರದಿಂದ ಹಿಂದೆ ಸರಿದು , ಅಂತರಾಷ್ಟ್ರೀಯ ಪತ್ರಿಕೆಯಲ್ಲಿ ಲೇಖನ ಬರೆಯುತ್ತೇನೆಂದು ವರಸೆ ಬದಲಿಸಿದ್ದಾರೆ.

Share This
300x250 AD
300x250 AD
300x250 AD
Back to top