• Slide
  Slide
  Slide
  previous arrow
  next arrow
 • ದೂರದೃಷ್ಟಿಯುಳ್ಳ ಕಾಗೇರಿಗೆ ಮತ ನೀಡಿ, ಗೆಲ್ಲಿಸಿ: ಕೋಟಾ ಪೂಜಾರಿ

  300x250 AD

  ಸಿದ್ದಾಪುರ: ಶಿರ್ಸಿ- ಸಿದ್ದಾಪುರ ವಿಧಾನಸಭ ಕ್ಷೇತ್ರದ 264 ಬೂತಗಳಲ್ಲಿಯೂ ಕೂಡ ನಮ್ಮ ಪಕ್ಷ ಸಂಘಟನಾತ್ಮಕವಾಗಿ ಚುನಾವಣೆಯ ಕೆಲಸ ಕಾರ್ಯಗಳು ಆಗಿವೆ. ಕೇಂದ್ರ ಸರ್ಕಾರದ ಕಾರ್ಯಕ್ರಮ, ರಾಜ್ಯ ಸಕಾರದ ಯೋಜನೆಗಳು ನಮಗೆ ದೊಡ್ಡ ವರವಾಗಲಿದೆ. ಕರ್ನಾಟಕ ವಿಧಾನಸಭೆಯಲ್ಲಿ ಬಹುದೊಡ್ಡ ಶಕ್ತಿಯಾಗಿ ರಾಜ್ಯಕ್ಕೆ ಮಾದರಿಯ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

  ಅವರು ಪಟ್ಟಣದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ದೂರದೃಷ್ಟಿ ಇರುವ ಸರ್ವ ಜನಾಂಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮಾನಸಿಕ ಸ್ಥಿಯನ್ನು ಹೊಂದಿರುವ ಈ ಕ್ಷೇತ್ರದ ಶಾಸಕರಾದ ವಿಶ್ವೇಶ್ವರ ಹೆಗಡೆಯವರಿಗೆ ಮತವನ್ನು ನೀಡಬೇಕು. ಆ ಮೂಲಕ ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬುವಂತ  ಕೆಲಸ ಮಾಡಬೇಕು ಎಂದು ಕ್ಷೇತ್ರದ ಮತದಾರರಲ್ಲಿ ವಿನಂತಿಯನ್ನು ಮಾಡುತ್ತೇನೆ ಎಂದರು.

  300x250 AD

  ಪ್ರಧಾನಿ ನರೇಂದ್ರ ಮೋದಿಯವರ ನಿರಂತರವಾದ ಪ್ರೋತ್ಸಹ, ಮಾರ್ಗದರ್ಶನ, ಅಮಿತ ಶಾ ಹಾಗೂ ನಡ್ಡ ಅವರ ಪ್ರೀತಿ, ಯಡಿಯೂರಪ್ಪನವರ ಶ್ರಮ, ಮುಖ್ಯಮಂತ್ರಿಗಳ, ರಾಜ್ಯಾಧ್ಯಕ್ಷ ಸಂಘಟನಾತ್ಮಕವಾದ ಹೋರಾಟ ಇವೆಲ್ಲವುಗಳಿಂದ ದಿನದಿಂದ ದಿನಕ್ಕೆ ಬಿಜೆಪಿ ಶಕ್ತಿಯುತವಾಗುತ್ತಿದೆ. ರಾಜ್ಯದಲ್ಲಿ ನಮ್ಮ ಪಕ್ಷ ಸ್ಪಷ್ಟವಾದ ಬಹುಮತವನ್ನು ಪಡೆಯುತ್ತದೆ. ಈಲ್ಲೆಯಲ್ಲಿಯೂ ಈ ಹಿಂದೆ ಐದು ಕ್ಷೇತ್ರದಲ್ಲಿದ್ದ ಬಿಜೆಪಿ ಈಗ ಆರು ಕ್ಷೇತ್ರದಲ್ಲಿ ಆಯ್ಕೆಯಾಗಲಿದೆ. ಎಲ್ಲರೂ ಒಟ್ಟಾ ಚುನಾವಣಾ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
  ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಮಾರುತಿ ಟಿ.ನಾಯ್ಕ ಹೊಸೂರು,ಪ್ರಧಾನ ಕಾರ್ಯದರ್ಶಿ ಪ್ರಸನ್ನ ಹೆಗಡೆ, ಪ್ರಮುಖರಾದ ಕೆ.ಆರ್.ವಿನಾಯಕ ಕೋಲಶಿರ್ಸಿ, ಜಿ.ಬಿ.ನಾಯ್ಕ ಕೋಲಶಿರ್ಸಿ, ಸುರೇಶ ನಾಯ್ಕ ಬಾಲಿಕೊಪ್ಪ, ಜಿ.ಕೆ.ನಾಯ್ಕ ಕೊಪ್ಪ, ಶಿವಕುಮಾರ ಗೌಡರ್ ಬೇಡ್ಕಣಿ, ಹರೀಶ ಗಜಾನನ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top