• Slide
    Slide
    Slide
    previous arrow
    next arrow
  • ತೋಟದಲ್ಲಿ ಅಡಗಿದ್ದ ಕಾಳಿಂಗ ಸರ್ಪ: ಮರಳಿ ಕಾಡಿಗೆ

    300x250 AD

    ಅಂಕೋಲಾ: ಕೆಂದಿಗೆ ಗ್ರಾಮದ ದೇವರಾಯ ಗೌಡ ಇವರ ಮನೆಯ ಹತ್ತಿರದ ತೋಟದ ಜಾಗದಲ್ಲಿ ಅಡಗಿ ಕುಳಿತಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಮಹೇಶ ನಾಯಕ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟು ಊರ ಜನರ ಭಯವನ್ನು ಹೋಗಲಾಡಿಸಿದ್ದಾರೆ.

    ಅಂಕೋಲಾ ಆರ್‌ಎಫ್‌ಒ ಜಿ.ವಿ.ನಾಯಕ ಮಾರ್ಗದರ್ಶನದಂತೆ ಕಾಳಿಂಗ ಸರ್ಪ ರಕ್ಷಣೆ ಮಾಡಲಾಗಿದೆ. ವಿಶೇಷ ಈ ಕಾರ್ಯಚರಣೆಯಲ್ಲಿ ಮಹೇಶ ನಾಯಕ ಅವರ ಜೊತೆ ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಶಂಭು, ಯಮುನಪ್ಪ, ಪ್ರಮೋದ ಗೌಡ, ಬೀರ ಗೌಡ ಹಾಗೂ ಅರಣ್ಯ ವೀಕ್ಷಕ ಅಶೋಕ ಗೌಡ, ಪ್ರಕಾಶ ಗೌಡ ಭಾಗವಹಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top