• Slide
    Slide
    Slide
    previous arrow
    next arrow
  • ಬಿಜೆಪಿ ಸೇರುವ ಅಸ್ನೋಟಿಕರ್ ಕನಸು ನನಸಾಗದು: ವೆಂಕಟೇಶ ನಾಯ್ಕ್

    300x250 AD

    ಕಾರವಾರ: ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರಿಗೆ ಈ ಬಾರಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ. ಹೀಗಾಗಿ ಅನಿವಾರ್ಯವಾಗಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಪ್ರಚಾರಕ್ಕಿಳಿದಿದ್ದಾರೆ ಎಂದು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದ್ದಾರೆ.

    ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್ ಯಾವ ಪಕ್ಷದಿಂದ ಬಂದಿದ್ದರು, ಬಳಿಕ ಎಲ್ಲಿಗೆ ತೆರಳಿದರು, ಈಗ ಎಲ್ಲಿದ್ದಾರೆ ಎನ್ನುವುದು ಜನರಿಗೆ ತಿಳಿದೆ. ಎಲ್ಲಿಯೂ ನೆಲೆ ಕಾಣದ ಅವರಿಗೆ ಕಾಂಗ್ರೆಸ್ ಪರ ಪ್ರಚಾರ ಅನಿವಾರ್ಯವಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಮುಂದಿನ ದಿನಗಳಲ್ಲಿ ಬಿಜೆಪಿ ಸೇರಲು ಬಯಸುವ ಅವರ ಕನನಸು ನನಸಾಗದು ಎಂದರು.

    300x250 AD

    ಜಿಲ್ಲಾ ಬಿಜೆಪಿಯ ಎಲ್ಲಾ ಕಾರ್ಯಕರ್ತರ ಸಹಾಯದಿಂದ ಅಂಕೋಲಾದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವು ಯಶಸ್ವಿಯಾಗಿದೆ. ಕಾರ್ಯಕ್ರಮಕ್ಕೆ ಜಿಲ್ಲೆಯ 6 ಕ್ಷೇತ್ರಗಳಿಂದ 2 ಲಕ್ಷ ಜನರು ಆಗಮಿಸಿದ್ದರು. ಅವರು ಮೋದಿಯವರ ಮಾತುಗಳನ್ನು ಇತರರಿಗೆ ತಲುಪಿಸಿ ಈ ಚುನಾವಣೆಯಲ್ಲಿ ಆರು ಕ್ಷೇತ್ರಗಳನ್ನು ಕೂಡಾ ಗೆಲ್ಲಿಸುತ್ತಾರೆ ಎಂದ ಅವರು, ಜಿಲ್ಲೆಯಲ್ಲಿ ಚುನಾವಣೆಯ ಪ್ರಚಾರಕ್ಕಾಗಿ ಮೇ 6ರಂದು ಹೊನ್ನಾವರದ ಸೇಂಟ್ ಜೋಸೆಫ್ ಮೈದಾನಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗಮಿಸಲಿದ್ದಾರೆ. ಈ ಮೂಲಕ ಕಾರ್ಯಕರ್ತರಲ್ಲಿ ಇನ್ನಷ್ಟು ಹುಮ್ಮಸ್ಸು ಮೂಡಲಿದೆ. ಜಿಲ್ಲೆಯ ಎಲ್ಲಾ ಭಾಗದಿಂದ 20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.
    ಸನಾತನ ಪರಂಪರೆ ತಿಳಿಯದ ಕಾಂಗ್ರೆಸಿಗರು ತಮ್ಮ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ದೇಶದ್ರೋಹಿ ಪಿಎಫ್‌ಐ ಜತೆಗೆ ಹೋಲಿಕೆ ಮಾಡಿದ್ದಾರೆ. ಭಜರಂಗದಳವನ್ನು ನಿಷೇಧ ಮಾಡುವುದಾಗಿ ಹೇಳಿರುವುದು ವಿಶೇಷವಲ್ಲ. ಸನಾತನ ಪರಂಪರೆ ತಿಳಿಯದವರು ಹೀಗೆ ಮಾತನಾಡುತ್ತಾರೆ. ಹಿಂದೆ ರಾಮ ಮಂದಿರ ನಿರ್ಮಿಸುವಾಗಲೂ ಅವರು ವಿರೋಧ ಮಾಡಿದ್ದರು. ಅಲ್ಲದೇ ರಾಮಸೇತುವೆಯನ್ನು ತೆರವುಗೊಳಿಸಿ ಹಡಗುಗಳ ಓಡಾಟಕ್ಕೆ ಜಾಗ ಮಾಡಿಕೊಡಲು ಹೊರಟಿದ್ದರು. ಈಗ ದೇಶದ್ರೇಹಿ ಪಿಎಫ್‌ಐ ಜತೆಗೆ ಭಜರಂಗದಳವನ್ನು ಹೋಲಿಕೆ ಮಾಡಿದ್ದಾರೆ ಅಷ್ಟೇ ಎಂದರು.
    ಈ ವೇಳೆ ಬಿಜೆಪಿಯ ಜಿಲ್ಲಾ ವಕ್ತಾರ ನಾಗರಾಜ ನಾಯಕ, ವಿಶೇಷ ಆಹ್ವಾನಿತ ಮನೋಜ ಭಟ್, ಕಾರವಾರ ನಗರ ಮಂಡಲದ ಅಧ್ಯಕ್ಷ ನಾಗೇಶ ಕುರುಡೇಕರ ಹಾಗೂ ರೋಶ್ನಿ ಮಾಳ್ಸೇಕರ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top