ಅಂಕೋಲಾ: ತಾಲ್ಲೂಕಿನ ಅಲಗೇರಿಯ ಗ್ರಾಮ ದೇವತೆಯಾದ ಶ್ರೀ ಸಣ್ಣಮ್ಮ ದೇವರಿಗೆ ಊರಿನ ನಿಸ್ವಾರ್ಥ ಭಕ್ತಗಣದವರು ಸೇರಿ ಶ್ರೀ ದೇವರಿಗೆ ಪಂಚಲೋಹದ ಪ್ರಭಾವಳಿಯನ್ನು ಸಮರ್ಪಿಸಿದರು.
ಕಳೆದ ಹಲವಾರು ವರ್ಷಗಳಿಂದ ಇವರು ದೇವರ ಅನ್ನದಾನ ಕಾರ್ಯ ನಡೆಸಿಕೊಂಡು ಬರುತ್ತಿದ್ದು ಪ್ರಸಕ್ತವಾಗಿ ಪ್ರಭಾವಳಿಯನ್ನು ಕಾಣಿಕೆಯಾಗಿ ನೀಡಿರುವುದು ವಿಶೇಷ. ಪಂಚಲೋಹವನ್ನು ಒಳಗೊಂಡ, ವೈವಿಧ್ಯಮಯ ಕಲಾ ವಿನ್ಯಾಸಗಳಿಂದ ಕೂಡಿದ ಪ್ರಭಾವಳಿಯು ಸುಮಾರು 16 ಕೆಜಿ ತೂಕವನ್ನು ಹೊಂದಿದೆ. ಯುವ ವಿನ್ಯಾಸಗಾರ ಗಜಾನನ ಜ್ಞಾನೇಶ್ವರ ಆಚಾರಿ ಇವರಿಂದ ವಿನ್ಯಾಸಗೊಳಿಸಲ್ಪಟ್ಟ ಈ ಪ್ರಭಾವಳಿಯನ್ನು ಹಿರಿಯರಾದ ಥಾಕು ನಾರಾಯಣ ನಾಯ್ಕರ ಮೂಲಕ ಶ್ರೀ ದೇವರಿಗೆ ಸಮರ್ಪಿಸಲಾಯಿತು.
ಶ್ರೀ ದೇವರು ಕೇವಲ ಗ್ರಾಮ ದೇವಿ ಮಾತ್ರವಲ್ಲದೇ ಹಲವಾರು ಕುಟುಂಬದವರ ಕುಲದೇವಿಯೂ ಸಹ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದು ಹಾಗೂ ತಮ್ಮ ಕೈಲಾದಷ್ಟು ಕಾಣಿಕೆ ನೀಡಿ ಧನ್ಯತೆ ಮರೆಯುವುದು ಸಾಮಾನ್ಯವಾಗಿದೆ. ಈ ಸಂದರ್ಭದಲ್ಲಿ ನಾರಾಯಣ ಗಾಂವಕರ, ತುಕಾರಾಮ ಎನ್. ನಾಯ್ಕ, ನಾಗರಾಜ ನಾಯ್ಕ, ರವಿ ಜಿ. ನಾಯ್ಕ, ಗಣೇಶ್ ಸಿ. ನಾಯ್ಕ, ದಿನಕರ ನಾಯ್ಕ, ದಿನೇಶ ಡಿ. ನಾಯ್ಕ, ಮಹಾಬಲೇಶ್ವರ್ ನಾಯ್ಕ, ಬ್ರಾಹ್ಮಣರು ಮತ್ತಿತರು ಹಾಜರಿದ್ದರು.