• Slide
    Slide
    Slide
    previous arrow
    next arrow
  • ಹಳಿಯಾಳ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಶಾಸಕರೇ ಸೂಕ್ತ: ಸುನೀಲ್ ಹೆಗಡೆ

    300x250 AD

    ಹಳಿಯಾಳ: ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಮಾತಿನಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಧರ್ಮ, ಜಾತಿ ಆಧಾರದಲ್ಲಿ ಯೋಜನೆಗಳನ್ನು ನೀಡದೆ ಎಲ್ಲರಿಗೂ ಸರಿಸಮಾನವಾಗಿ ಅಭಿವೃದ್ಧಿ ಯೋಜನೆಗಳನ್ನು ತಲುಪಿಸುತ್ತಿರುವುದರಿಂದಲೇ ಇಂದು ಹಳಿಯಾಳ ಕ್ಷೇತ್ರದ ಅಭಿವೃದ್ಧಿಗೂ ಬಿಜೆಪಿ ಶಾಸಕರೇ ಸೂಕ್ತ ಎಂಬ ಅಭಿಪ್ರಾಯ ಇರುವುದರಿಂದ ಪ್ರಧಾನಿ ಮೋದಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆ ಆಗಲಿವೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಸುನಿಲ್ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

    ಅವರು ಶುಕ್ರವಾರ ತಮ್ಮ ಸ್ವಗೃಹದಲ್ಲಿ ಹಾಗೂ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ತಾಲೂಕಿನ ಜತಗಾ ಹೊಸುರ, ಮೊದಲಗೇರಾ, ತೇರಗಾಂವ ಹಾಗೂ ಬಾಳಶೆಟ್ಟಿಕೊಪ್ಪ ಗ್ರಾಮಗಳ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮತ್ತು ಇತರ ಸಂಘ ಸಂಸ್ಥೆಗಳ ಪ್ರಮುಖರು, ಯುವಕರು ಮತ್ತು ಮಹಿಳೆಯರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

    ಇಂದು ವಿವಿಧ ಪಕ್ಷಗಳನ್ನು ತೊರೆದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತು ಬಿಜೆಪಿಯ ತತ್ವ ಸಿದ್ಧಾಂತ, ಆಡಳಿತ ಹಾಗೂ ನಾಯಕತ್ವವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದರು.
    ಈ ಬಾರಿ ಮರಾಠಾ ಸಮುದಾಯ ಶತ ಪ್ರತಿ ಶತ ಬಿಜೆಪಿ ಕಡೆಗೆ ವಾಲುತ್ತದೆ. ಯಾವತ್ತೂ ಮರಾಠರು ಹಿಂದುತ್ವದ ತಳಹದಿಯ ಮೇಲೆ ನಂಬಿಕೆಯುಳ್ಳ ಹಿಂದವಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಪ್ರಾಯರಾಗಿದ್ದು, ತಾವುಗಳೆಲ್ಲರೂ ಶಿವಾಜಿ ಮಹಾರಾಜರ ಪರಮ ಭಕ್ತರಾಗಿದ್ದು, ಹಿಂದವೀ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಯಾವುದೇ ಜಾತಿಯನ್ನು ನೋಡದ ಮರಾಠರ ಅಸ್ಮಿತೆ ಹಿಂದುತ್ವವಾಗಿದೆ. ದೇಶ ಸರ್ವೋಪರಿ ಎನ್ನುವ ಹಾಗೂ ಹಿಂದೂತ್ವವನ್ನೇ ಉಸಿರಾಗಿಸಿಕೊಂಡಿರುವ ಮರಾಠರು ಭಾರತದ ಸಂಸ್ಕೃತಿಯನ್ನು, ಸನಾತನ ಧರ್ಮವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಭಾರತವನ್ನು ವಿಶ್ವ ಗುರು ಮಾಡಲು ಹೊರಟಿರುವ ಬಿಜೆಪಿಗೆ ಬೆಂಬಲಿಸಲಿದ್ದಾರೆAದು ವಿಶ್ವಾಸ ವ್ಯಕ್ತಪಡಿಸಿದರು.

    300x250 AD

    ಹಳಿಯಾಳ ಮತ ಕ್ಷೇತ್ರವು 215 ಭೂತಗಳನ್ನು ಹೊಂದಿದ್ದು 177511 ಮತದಾರರನ್ನು ಹೊಂದಿದೆ. ಪುರುಷ ಮತದಾರರ ಸಂಖ್ಯೆ 89503 ಇದ್ದು ಮಹಿಳಾ ಮತದಾರರ ಸಂಖ್ಯೆ 88006 ಇದೆ. ಈ ಮತ ಕ್ಷೇತ್ರವು ಭೌಗೋಳಿಕವಾಗಿ ವಿವಿಧತೆಯನ್ನು ಹೊಂದಿರುವ ಕ್ಷೇತ್ರವಾಗಿದ್ದು ಹಳಿಯಾಳ ತಾಲೂಕ ರೈತಾಪಿ ವರ್ಗ ಹೊಂದಿದ್ದು, ದಾಂಡೇಲಿ ತಾಲೂಕು ಔದ್ಯೋಗಿಕ ಮತ್ತು ಪ್ರವಾಸಿ ಕ್ಷೇತ್ರವಾಗಿದ್ದು, ಜೋಯಿಡಾ ತಾಲೂಕು ದಟ್ಟ ಕಾಡಿನಿಂದ ಕೂಡಿದ್ದು ಮೋದಿಜಿಯವರ ಮತ್ತು ಬೊಮ್ಮಾಯಿಯವರ ನೇತೃತ್ವದ ಸರಕಾರದ ಯೋಜನೆಗಳು ಮುಟ್ಟದ ಭಾರತೀಯನೇ ಇಲ್ಲ ಎಂದರಲ್ಲದೇ, ಕಿಸಾನ ಸಮ್ಮಾನ ಯೋಜನೆಯಡಿ ಹಳಿಯಾಳದ 13,500 ಕುಟುಂಬ, ದಾಂಡೇಲಿಯ 3600 ಕುಟುಂಬಗಳು ಸೇರಿ 17,100 ಫಲಾನುಭವಿಗಳಿದ್ದು, ಒಂದು ಮನೆಯಿಂದ 5 ಜನರ ಮತವನ್ನು ಪರಿಗಣಿಸಿದರೂ ಗೆಲ್ಲುವ ಸಂಖ್ಯೆ ನಿಖರವಾಗಿ ತಿಳಿಯುತ್ತದೆ ಎಂದರು.
    ಕಾAಗ್ರೆಸ್‌ನ 40% ಕಮಿಷನ್ ಆರೋಪಕ್ಕೆ ವಿರೋಧಿಸಿದ ಅವರು, ಈ ಹಿಂದೆ ಕಾಂಗ್ರೇಸ್ ನ ರಾಜೀವ ಗಾಂಧಿಯವರು ಹೇಳಿದ್ದ ಒಂದು ರೂಪಾಯಿ ಕೇಂದ್ರದಿ0ದ ಕಳುಹಿಸಿದರೆ ಫಲಾನುಭವಿಗೆ ತಲಪುವಾಗ ಹದಿನೈದು ಪೈಸೆ ಆಗಿರುತ್ತದೆ ಅಂದರೆ ಅವರೇ ಸ್ವತಃ ಒಪ್ಪಿಕೊಂಡAತೆ 85 % ಕಮಿಷನ್ ರೂಪದಲ್ಲಿ ಆಪೋಷನವಾಗುತ್ತಿತ್ತು ಎಂದು ತಿರುಗೇಟು ನೀಡಿದರು. ಇದೇ ರೀತಿ ಕಾಂಗ್ರೆಸ್ ಸುಳ್ಳು ಪುಕಾರು ಹಬ್ಬಿಸಿ ಪ್ರಚಾರ ಪಡೆಯುತ್ತದೆ ಎಂದರಲ್ಲದೇ ಮೋದಿಜಿಯವರ ಸರಕಾರದಲ್ಲಿ ಫಲಾನುಭವಿಗೆ ಸಿಗಬೇಕಾದ ಎಲ್ಲಾ ಹಕ್ಕುಗಳು ನೇರವಾಗಿ ಅವರ ಖಾತೆಗೆ ಜಮೆಯಾಗುತ್ತಿದೆ ಎಂದರು. ಇದೇ ರೀತಿ ಸ್ವಚ್ಛ ಭಾರತ ಯೋಜನೆ, ದೀನದಯಾಳ ಉಪಾಧ್ಯಾಯ ವಿದ್ಯುತ್ ಯೋಜನೆ, ಸೌಭಾಗ್ಯ ಯೋಜನೆ, ಪ್ರ.ಮಂ. ಉಜ್ವಲ ಗ್ಯಾಸ್ ಯೋಜನೆ ಹೀಗೆ ಅನೇಕ ಯೋಜನೆಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪುತ್ತಿರುವ ಕಾರಣ ಬಿಜೆಪಿಯ ಮೇಲೆ ಜನರಿಗೆ ಅಪಾರ ನಂಬಿಕೆ ಇದ್ದು ತಾವು ಗೆಲುವು ದಾಖಲಿಸುವುದಾಗಿ ಭವಿಷ್ಯ ನುಡಿದರು.
    ಈ ಸಂದರ್ಭದಲ್ಲಿ ಗಣಪತಿ ಕರಂಜೇಕರ, ಅನಿಲ ಮುತ್ನಾಳೆ, ಶಿವಾಜಿ ನರಸಾನಿ, ವಿ.ಎಂ.ಪಾಟೀಲ, ವಾಸುದೇವ ಪೂಜಾರಿ, ಸುವರ್ಣಾ ಹೆಗಡೆ, ಸಂತಾನ ಸಾವಂತ, ರೀಟಾ ಸಿದ್ದಿ, ರಹಮಾನ ಜಮಾದಾರ ಇತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top