• Slide
    Slide
    Slide
    previous arrow
    next arrow
  • ಶ್ರೀರಾಮನಂತಹ ರಾಜ, ಶಂಕರಾಚಾರ್ಯರ0ತಹ ಗುರು ಸಿಕ್ಕಾಗ ಬದುಕಿಗೆ ವಸಂತ: ರಾಘವೇಶ್ವರ ಶ್ರೀ

    300x250 AD

    ಸಿದ್ದಾಪುರ: ಶ್ರೀರಾಮನಂತಹ ರಾಜ, ಶಂಕರಾಚಾರ್ಯರ0ತಹ ಗುರು ಸಿಕ್ಕಾಗ ಬದುಕಿಗೆ ವಸಂತ ಬರುತ್ತದೆ. 1200 ವರ್ಷಗಳು ಸಂದರೂ ಶಂಕರರ ಪ್ರಭಾವ ಅಳಿದಿಲ್ಲ, ಕುಗ್ಗಿಲ್ಲ. ಮನೆಗಳನ್ನಲ್ಲದೇ, ಊರನ್ನಲ್ಲದೇ ರಾಜ್ಯ-ದೇಶವನ್ನಲ್ಲದೇ ಪ್ರಪಂಚವನ್ನೇ ಬೆಳಗಿದ ದೀಪ ಶಂಕರಾಚಾರ್ಯರು ಎಂದು ಶ್ರೀ ರಾಮಚಂದ್ರಾಪುರ ಮಠ ಮಹಾಸಂಸ್ಥಾನದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

    ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠ ಗೋಸ್ವರ್ಗದಲ್ಲಿ ನಡೆದ ಶಂಕರಪ0ಚಮೀ ಉತ್ಸವದಲ್ಲಿ ‘ವೇದೋ ನಿತ್ಯಮಧೀಯತಾಂ’ ವಿಷಯವನ್ನಾಧರಿಸಿ ಶ್ರೀಗಳು ಪ್ರವಚನ ನೀಡುತ್ತಿದ್ದರು. ಸಂತರ ಮಹತಿ ಮಹಾತ್ಮರಿಗೆ ಮಾತ್ರ ಅರಿವಿಗೆ ಬರುತ್ತದೆ. ಸಂತ ಶಿಶುನಾಳ ಶರೀಫರು ಶಂಕರಾಚಾರ್ಯರ ಕುರಿತು ಶಂಕರನೇ ಅವತರಿಸಿ ದಾರುಣಿಗೆ ಶಂಕರಾಚಾರಿಯಾಗಿ ಬಂದನು ಎಂದಿದ್ದಾರೆ. ರಾಗ, ದ್ವೇಷ, ಕಾಮ, ಕ್ರೋಧ, ಅಹಂಕಾರಗಳಿ0ದ ಕೊಳೆಯಾಗಿದ್ದನ್ನು ತೊಳೆದು ಕಿಂಕರರಾದ ನಮ್ಮನ್ನು ಉದ್ಧರಿಸಲು ತತ್ವಜ್ಞಾನದ ಊಟವ ಉಣಿಸಿದ ಶಂಕರರು ಬೆನ್ನು ಬಿದ್ದವರ ಬಿಡದೆ ರಕ್ಷಿಸುತ್ತ ಈ ಭವಜಲದಿ ದಾಟಿಸಿದರು ಎಂದೂ ಶಂಕರರನ್ನು ಕೊಂಡಾಡಿದರು.

    300x250 AD

    ಈ ಸಂದರ್ಭದಲ್ಲಿ ರುದ್ರಘನ ಪಾರಾಯಣ ನಡೆಸಿಕೊಟ್ಟ ಘನಪಾಠಿಗಳಾದ, ವೇದಮೂರ್ತಿಗಳಾದ ಶೇಷಗಿರಿ ಭಟ್ಟರು ಸಂಪೆಕಟ್ಟೆ, ಮಂಜುನಾಥ ಭಟ್ಟರು ಗೋಕರ್ಣ, ಶಶಿಧರ ಭಟ್ಟರು ಇಡಗುಂಜಿ, ಪ್ರಶಾಂತ ಭಟ್ಟರು ತೇನಿ-ತಮಿಳುನಾಡು, ಗಣಪತಿ ಭಟ್ಟರು ಕಬ್ರೆ, ಮಂಜುನಾಥ ಭಟ್ಟರು ಜಲಗದ್ದೆ, ರಾಜೇಂದ್ರ ಭಟ್ಟರು ಶಿರಸಿ, ಅಲೋಕ ಭಟ್ಟರು ಸಿದ್ದಾಪುರ ಅವರುಗಳನ್ನು ಯಜಮಾನ ದಂಪತಿಗಳು ಪೂಜಿಸಿದರು.
    ವೇ.ಮೂ.ಮಂಜುನಾಥ ಭಟ್ಟ ಹುಲಿಮನೆ ಪೌರೋಹಿತ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುನೀಲ ನಾಯ್ಕ ಭಟ್ಕಳ, ಪ್ರಮೋದ ಹೆಗಡೆ ಯಲ್ಲಾಪುರ, ಮಾಜಿ ಸಂಸದ, ಮಾಜಿ ಶಾಸಕ ಮಂಜುನಾಥ ಕುನ್ನೂರ ಶಿಗ್ಗಾಂವ, ದಾನಿಗಳಾದ ಎನ್.ಎಚ್.ಇಲ್ಲೂರ, ಕುಮಾರಸ್ವಾಮಿ ವರ್ಮುಡಿ, ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಶಂಕರ ಪಂಚಮಿ ಸಮಿತಿ ಅಧ್ಯಕ್ಷ ಮಂಜುನಾಥ ಭಟ್ಟ ಕವ್ಲಮನೆ, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ ಚಟ್ನಳ್ಳಿ ಸೇರಿದಂತೆ ಸಹಸ್ರಾರು ಶಿಷ್ಯ ಭಕ್ತರು ಪಾಲ್ಗೊಂಡಿದ್ದರು. ಗುರುವಂದನೆಯೊAದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಗಣೇಶ ಜೋಶಿ ಸಂಕೊಳ್ಳಿ, ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top