• Slide
  Slide
  Slide
  previous arrow
  next arrow
 • ಶಂಕರಪ0ಚಮೀ ಉತ್ಸವದಲ್ಲಿ ಶ್ರೀರಾಮತಾರಕ ಹವನ- ಚಂಡಿಹವನ

  300x250 AD

  ಸಿದ್ದಾಪುರ: ತಾಲೂಕಿನ ಭಾನ್ಕುಳಿ ಶ್ರೀ ರಾಮದೇವಮಠ- ಗೋಸ್ವರ್ಗದಲ್ಲಿ ಜರುಗುತ್ತಿರುವ ಶಂಕರಪ0ಚಮೀ ಉತ್ಸವದಲ್ಲಿ ಸೋಮವಾರ ಹವ್ಯಕ ಮಹಾಮಂಡಲ ಆಯೋಜನೆಯಲ್ಲಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಸಮಾರೋಪ ನಡೆಯಿತು.

  ಮಾತೆಯರಿಂದ ಕುಂಕುಮಾರ್ಚನೆ, ಗುರುವಂದನೆ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ದೇವತಾ ನಾಂದಿ, ಋತ್ವಿಗ್ವರಣ, ಮಹಾಸಂಕಲ್ಪ, ಬ್ರಹ್ಮಕೂರ್ಚಹವನ, ಶ್ರೀಮಹಾಗಣಪತಿ ಹವನ, ಶ್ರೀರಾಮತಾರಕ ಹವನ, ಚಂಡಿಹವನ, ಆದಿತ್ಯ ಹವನಗಳು ನಡೆದವು. ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಪೂರ್ಣಾಹುತಿಯಲ್ಲಿ ಪಾಲ್ಗೊಂಡಿದ್ದರಲ್ಲದೇ ಶ್ರೀ ಶಂಕರಗುರುಪೂಜೆ ನೆರವೇರಿಸಿದರು. ಬಿಳಗಿ ಸೀಮೆಯ ಶಿಷ್ಯರಿಂದ ಶ್ರೀಗುರುಭಿಕ್ಷಾ ಸೇವೆ ಜರುಗಿತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಶಿಷ್ಯ ಭಕ್ತರಿಗೆ ರಾಘವೇಶ್ವರ ಭಾರತೀ ಶ್ರೀಗಳವರು ಫಲಮಂತ್ರಾಕ್ಷತೆ ಅನುಗ್ರಹಿಸಿದರು.

  300x250 AD

  ಏ.25ರಂದು ಶಂಕರಪ0ಚಮೀ ಉತ್ಸವದಲ್ಲಿ ಘನರುದ್ರ ಪಾರಾಯಣ, ಶತರುದ್ರ ಹವನ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ‘ವೇದೋ ನಿತ್ಯಮಧೀಯತಾಂ’ ವಿಷಯವನ್ನಾಧರಿಸಿ ಪ್ರವಚನ ನಡೆಯಲಿದೆ. ಸಂಜೆ ಕುಂಭಾಷಿ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ(ರಿ) ಕೊಂಡದಕುಳಿ ಅವರಿಂದ ಯಕ್ಷಗಾನ ಪ್ರದರ್ಶನವಿದೆ. ಘನರುದ್ರ ಪಾರಾಯಣದಲ್ಲಿ ನಾಡಿನ ಹೆಸರಾಂತ ಘನಪಾಠಿಗಳು ಪಾಲ್ಗೊಳ್ಳುತ್ತಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top