• Slide
    Slide
    Slide
    previous arrow
    next arrow
  • ರಾಗಮಿತ್ರ ಪ್ರತಿಷ್ಠಾನ ಮಿತ್ರಾ ಮ್ಯೂಸಿಕಲ್ಸ್ ವಾರ್ಷಿಕೋತ್ಸವ

    300x250 AD

    ಶಿರಸಿ: ರಾಗಮಿತ್ರ ಪ್ರತಿಷ್ಠಾನ ಮಿತ್ರಾ ಮ್ಯೂಸಿಕಲ್ಸ್ 31ನೇ ವಾರ್ಷಿಕೋತ್ಸವವು ಯೋಗಮಂದಿರದಲ್ಲಿ ನಡೆಯಿತು.

    ವಿದ್ಯಾಲಯದ ಹಿರಿಯ, ಕಿರಿಯ ವಿದ್ಯಾರ್ಥಿಗಳಿಂದ ಗಾಯನ, ವಾದನ ಕಾರ್ಯಕ್ರಮ ನಡೆಯಿತು. ಪ್ರಾರಂಭದಲ್ಲಿ ವಿದ್ವಾನ ಪ್ರಕಾಶ ಹೆಗಡೆಯವರ ತಂದೆ ದಿವಂಗತ ಮಂಜುನಾಥ ಹೆಗಡೆ ಹಾಗೂ ಅವರ ಗುರುಗಳಾದ ದಿವಂಗತ ವಸಂತ ಕನಕಾಪೂರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಎನ್. ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ವಾನ ಪ್ರಕಾಶ ಹೆಗಡೆ, ವಿ.ಎ. ಹೆಗಡೆ, ಸುರೇಶ ಭಟ್, ಗಣೇಶ ಭಟ್ ಹಳವಳ್ಳಿಯವರು ಭಾಗವಹಿಸಿದ್ದರು.

    300x250 AD

    ಕಾರ್ಯಕ್ರಮದಲ್ಲಿ ನಿರಂತರವಾಗಿ ವಿದ್ಯಾರ್ಥಿಗಳಿಂದ ಭಕ್ತಿಗೀತೆ, ಭಜನೆ, ಹಾರ್ಮೊನಿಯಂ ಸೋಲೊ ಹಾಗೂ ಶಾಸ್ತ್ರೀಯ ಗಾಯನ ಕಾರ್ಯಕ್ರಮಗಳು ನಡೆಯಿತು. ಹಾರ್ಮೋನಿಯಂದಲ್ಲಿ ವಿದ್ವಾನ ಪ್ರಕಾಶ ಹೆಗಡೆ, ಗೀತಾ ಜೋಶಿ, ಉನ್ನತಿ ಕಾಮತ, ಪವನ ಕುಮಾರ, ತಬಲಾದಲ್ಲಿ ಸುಧಾಕರ ನಾಯಕ, ಕಿರಣ ಹೆಗಡೆ ಕಾನಗೋಡು, ಶಂಕರ ಹೆಗಡೆ, ಸನತರಾವ್ ಭಾಗವಹಿಸಿದ್ದರು. ಗಣೇಶ ಭಟ್ ಹಳವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾಲಯದ ಗುರುಗಳಾದ ವಿದ್ವಾನ ಪ್ರಕಾಶ ಹೆಗಡೆಯವರು ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top