ಕುಮಟಾ: ಮಿರ್ಜಾನಿನ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಏ.10ರಿಂದ 20ರವರೆಗೆ ಬೇಸಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ನೃತ್ಯ, ಕರಾಟೆ, ಸಂಗೀತ, ಚಿತ್ರಕಲೆ, ಸ್ಪೋಕನ್ ಇಂಗ್ಲೀಷ್, ಸಂಸ್ಕೃತ ಪಾಠಗಳು, ಭಗವದ್ಗೀತೆಯ ಶ್ಲೋಕಗಳು, ವೈದಿಕ ಗಣಿತ, ಚದುರಂಗ ಮುಂತಾದ ತರಬೇತಿಯನ್ನು ನೀಡಲಾಯಿತು. ಅಂತಿಮ ದಿನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ನಿರೂಪಣೆ ಪುಟಾಣಿ ಲಕ್ಷ್ಮಿ ನಾಯಕ್ ನಡೆಸಿಕೊಟ್ಟರು. ಶುಭಾಂಗಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪುಟಾಣಿ ನಿಹಾನ್ ನಾಯ್ಕ ಸ್ವಾಗತಿಸಿದನು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಡಳಿತ ಅಧಿಕಾರಿ ಜಿ.ಮಂಜುನಾಥ್‌ರವರು ವಿದ್ಯಾರ್ಥಿಗಳು ರಜಾ ಅವಧಿಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರೆ, ಇಂತಹ ಬೇಸಿಗೆ ಶಿಬಿರದಲ್ಲಿ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಶ್ರೀ ಆದಿಚುಂಚನಗಿರಿ ಟ್ರಸ್ಟ್ ಇಂತಹ ಶಿಬಿರ ನಡೆಸುತ್ತಿರುವುದು ತುಂಬಾ ಶ್ಲಾಘನೀಯ ಎಂದು ಹೇಳಿದರು.
ಪ್ರಾಚಾರ್ಯರಾದ ಲೀನಾ ಗೊನೇಹಳ್ಳಿ ದೇಶದ ಮುಂದಿನ ಭವಿಷ್ಯ ವಾದ ಮಕ್ಕಳು ಈಗಿನಿಂದಲೇ ಉತ್ತಮ ಚಾರಿತ್ರ‍್ಯವನ್ನು ರೂಢಿಸಿಕೊಂಡಲ್ಲಿ ಉತ್ತಮ ಪ್ರಜೆಯಾಗಿ ದೇಶದ ಸೇವೆಯನ್ನು ಮಾಡಬಹುದು ಎಂದು ಹೇಳಿದರು. ಶಿಬಿರದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಿ, ವಂದನಾರ್ಪಣೆಯೊ0ದಿಗೆ ಮಕ್ಕಳ ಬೇಸಿಗೆ ಶಿಬಿರದ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಿರ್ಜಾನ್ ಶಾಖಾಮಠದ ಬ್ರಹ್ಮಚಾರಿ ನಿಶ್ಚಲಾನಂದನಾಥ ಸ್ವಾಮೀಜಿಯವರು, ಎಂ.ಜಿ.ಹಿರೇಕುಡಿ, ಅನುರಾಧಾ ಗುನಗ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.