• Slide
    Slide
    Slide
    previous arrow
    next arrow
  • ಐದು ವರ್ಷದ ಅವಧಿಯಲ್ಲಿ ಪ್ರಾಮಾಣಿಕ ಕೆಲಸ‌ ಮಾಡಿದ್ದೇನೆ : ದಿನಕರ ಶೆಟ್ಟಿ

    300x250 AD

    ಹೊನ್ನಾವರ:ಪಟ್ಟಣದ ಬಾಜಾರ್ ರಸ್ತೆ ಮಾರ್ಗದಲ್ಲಿ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಕುಮಟಾ-ಹೊನ್ನಾವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ದಿನಕರ ಶೆಟ್ಟಿ ಸೋಮವಾರದಂದು ಉದ್ಘಾಟಿಸಿದರು.

    ನಂತರ ಮಾತನಾಡಿದ‌ ಅವರು, ಐದು ವರ್ಷದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ತಲೆತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ. ಯಾರಿಗೂ ಉಪದ್ರವ ಕೊಟ್ಟಿಲ್ಲ. ನನ್ನ ವಿರೋಧಿಗಳಿಗೂ ತೊಂದರೆ ಕೊಟ್ಟಿಲ್ಲ ಎಂದು ಹೇಳಿದರು.

    ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ, ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಕೋವಿಡ್ ಸಂದರ್ಭದಲ್ಲಿಯೂ ಉತ್ತಮ ಕೆಲಸ ಮಾಡಿದ್ದಾರೆ. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇತ್ತು. ಬಿಜೆಪಿ ಸಸರಕಾರ ಬರಲು ಒಂದು ವರ್ಷ ತಡವಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೊರೋನಾ, ನೆರೆಹಾವಳಿ ಬಂತು. ರಾಜ್ಯ ಸರಕಾರದ ಬಳಿ ಹಣ ಇಲ್ಲದ್ದರೂ ಕುಮಟಾ-ಹೊನ್ನಾವರ ಕ್ಷೇತ್ರಕ್ಕೆ 1800 ಕೋಟಿ ರೂ.ಗಳ ಅನುದಾನ ಕೊಟ್ಟಿದ್ದಾರೆ. ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಇಷ್ಟೊಂದು ಅನುದಾನ ಕೊಟ್ಟಿರುವುದು ಈ ಸರಕಾರದಲ್ಲಿಯೇ ಎಂದರು.

    ಇದು ನನ್ನ ಕೊನೇಯ ಚುನಾವಣೆ. ಮುಂದಿನಸಲ ನನಗೆ 70 ವರ್ಷ ವಯಸ್ಸಾಗಿರುತ್ತದೆ ನನಗೆ ಇಬ್ಬರು ಹೆಣ್ಣುಮಕ್ಕಳು. ಅವರ ಮದುವೆಯಾಗಿದೆ. ನನ್ನ ಯಾವುದೇ ಬಿಜಿನೆಸ್ ಅನ್ನು ವಿಸ್ತರಿಸುವ ಆಶಯವಿಲ್ಲ. ಜನಸೇವೆಯೊಂದೇ ಗುರಿ, ಪಕ್ಷದ ಕಾರ್ಯಕರ್ತರನ್ನೇ ನನ್ನ ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದರು.

    ಹೊನ್ನಾವರದಲ್ಲಿ ಹೊಸ ಬಸ್ ನಿಲ್ದಾಣ, ಸರಕಾರಿ ಪದವಿ ಕಾಲೇಜಿನ ಕಟ್ಟಡ ಮಾಡಿಸಿದ್ದೇನೆ. ಶರಾವತಿ ಕುಡಿಯುವ ನೀರಿನ ಯೋಜನೆ ಶೇ 90ರಷ್ಟು ಕಾಮಗಾರಿ ಈಗಾಗಲೇ ಮುಗಿದಿದೆ. ಕುಮಟಾ ಹಾಗೂ ಹೊನ್ನಾವರ ತಾಲೂಕುಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಆಗಿ ಶಂಕು ಸ್ಥಾಪನೆಯಾಗಿದೆ. ಎರಡೂ ತಾಲೂಕುಗಳ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ರಸ್ತೆ, ಸೇತುವೆ ಇತ್ಯಾದಿ ಅಭಿವೃದ್ದಿ ಕೆಲಸಗಳಾಗಿವೆ ಎಂದರು.

    300x250 AD

    ಕಳೆದಸಲ 33 ಸಾವಿರ ಮತಗಳ ಲೀಡ್ ದೊರೆಯಿತು. ಇದು ಪಕ್ಷದ ಕಾರ್ಯಕರ್ತರಿಂದಾಗಿ ಸಾಧ್ಯವಾಯಿತು. ಈ ಬಾರಿಯೂ ಮತ್ತೊಮ್ಮೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.

    ಮುಖಂಡ ವಿನೋದ ನಾಯ್ಕ ರಾಯಲಕೇರಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳಲ್ಲಿ ಆಗಿರುವ ಅಭಿವೃದ್ದಿ ಕೆಲಸಗಳು ಸಹಕಾರಿಯಾಗಿವೆ ಎಂದರು. ಗಣೇಶ ಪೈ ಮಾತನಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದನ್ನೊಂದೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡೋಣ ಎಂದರು. ಸುಬ್ರಾಯ ನಾಯ್ಕ, ಎಂ.ಜಿ.ನಾಯ್ಕ, ಪ.ಪಂ. ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ, ಭಟ್ಕಳ-ಹೊನ್ನಾವರ ಕ್ಷೇತ್ರದ ಪ್ರಭಾರಿ ಕಿಶೋರಕುಮಾರ ಮಾತನಾಡಿ ಒಗ್ಗಟ್ಟಿನಿಂದ ಕೆಲಸ ಮಾಢಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

    ಪಕ್ಷದ ಹೊನ್ನಾವರ ಮಂಡಲದ ಅಧ್ಯಕ್ಷ ರಾಜು ಭಂಡಾರಿ ಮಾತನಾಡಿ ಈ ಚುನಾವಣೆಯಲ್ಲಿಯೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲೋಣ, ಕುಮಟಾ-ಹೊನ್ನಾವರ ಹಾಗೂ ಭಟ್ಕಳ-ಹೊನ್ನಾವರ ಎರಡೂ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು. ಪಕ್ಷದ ಹೊನ್ನಾವರ ತಾಲೂಕಾ ಪ್ರಧಾನ ಕಾರ್ಯದರ್ಶಿ ಸುರೇಶ ಹರಿಕಂತ್ರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ವಂದಿಸಿದರು. ವೇದಿಕೆಯಲ್ಲಿ ಉಮೇಶ ನಾಯ್ಕ, ರವಿ ಜಾಲಿ, ಎಂ.ಎಸ್.ಹೆಗಡೆ ಕಣ್ಣಿಮನೆ, ನಿಶಾ ಶೇಟ್ ಮತ್ತಿತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top