• Slide
    Slide
    Slide
    previous arrow
    next arrow
  • ಮುಖದ ಮೇಲೆ ತ್ರಿವರ್ಣ ಧ್ವಜ ಚಿತ್ರಿಸಿದ್ದ ಮಹಿಳೆಗೆ ಗೋಲ್ಡನ್ ಟೆಂಪಲ್ ಪ್ರವೇಶ ನಿರ್ಬಂಧ

    300x250 AD

    ಪಂಜಾಬ್: ಪಂಜಾಬಿನ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಮುಖದ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಿದ್ದ ಮಹಿಳೆಯೋರ್ವಳಿಗೆ ಪ್ರವೇಶಕ್ಕೆ ಅವಕಾಶ ನೀಡದೆ ತಡೆಯಲಾಗಿದ್ದು,ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

    ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಮಹಿಳೆಯೋರ್ವಳು ತನ್ನ ಮುಖದ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಂಡು ಗೋಲ್ಡನ್ ಟೆಂಪಲ್ ಪ್ರವೇಶಕ್ಕೆ ಮುಂದಾದಾಗ ಅಲ್ಲಿನ ಸಿಬ್ಬಂದಿಗಳು ಆಕೆಯನ್ನು ತಡೆದು ಪ್ರಶ್ನಿಸಿದ್ದು, ನಂತರ ಆಕೆಯ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಈ ಘಟನೆಯನ್ನು ವೀಡಿಯೊದಲ್ಲಿ ರೆಕಾರ್ಡ್ ಆಗಿದ್ದು,ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವಾರು ಬಳಕೆದಾರರು ವಿರೋಧ ವ್ಯಕ್ತಪಡಿಸಿದ್ದಾರೆ.

    ಸಿಖ್ ದೇಗುಲಕ್ಕೆ ತನ್ನ ಪ್ರವೇಶವನ್ನು ನಿರಾಕರಿಸಿದ ಸಿಬ್ಬಂದಿಯನ್ನು ಮಹಿಳೆ ಮತ್ತು ಪುರುಷ ಪ್ರವೇಶ ನೀಡುವಂತೆ ಕೇಳಿದಾಗ ನಡೆದ ಮಾತಿನ ಚಕಮಕಿಯ ವೀಡಿಯೊ ಎಲ್ಲೆಡೆ ಹರಿದಾಡಿದೆ. ಪ್ರವೇಶ ನಿರಾಕರಣೆಗೆ ವಿವರಣೆ ಕೇಳಿದಾಗ, ಮಹಿಳೆಯ ಮುಖದ ಮೇಲೆ ಧ್ವಜವಿದ್ದ ಕಾರಣ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    ಇದು ಭಾರತದ ಧ್ವಜ ಎಂದು ಮಹಿಳೆ ಸ್ಪಷ್ಟಪಡಿಸಿದ್ದು, ಅದಕ್ಕೆ ಆ ವ್ಯಕ್ತಿ “ಇದು ಪಂಜಾಬ್, ಭಾರತವಲ್ಲ” ಎಂದು ಉತ್ತರಿಸಿದರು.

    300x250 AD

    ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದಂತೆ, ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ (SGPC) ಪ್ರಧಾನ ಕಾರ್ಯದರ್ಶಿ ಸ್ಪಷ್ಟೀಕರಣವನ್ನು ನೀಡಿದ್ದಾರೆ.

    “ಇದು ಸಿಖ್ ದೇಗುಲ. ಪ್ರತಿಯೊಂದು ಧಾರ್ಮಿಕ ಸ್ಥಳಕ್ಕೂ ಅದರದ್ದೇ ಆದ ಅಲಂಕಾರವಿದೆ…ಎಲ್ಲರಿಗೂ ಸ್ವಾಗತವಿದೆ…ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದರೆ ಕ್ಷಮೆಯಾಚಿಸುತ್ತೇವೆ…ಅವಳ ಮುಖದಲ್ಲಿರುವ ಧ್ವಜ ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲವಾದ್ದರಿಂದ ಅದರಲ್ಲಿ ಅಶೋಕ ಚಕ್ರ ಇರಲಿಲ್ಲ. ಇದು ರಾಜಕೀಯ ಧ್ವಜವಾಗಿರಬಹುದು, ”ಎಂದು ಗ್ರೆವಾಲ್ ಉಲ್ಲೇಖಿಸಿದ್ದಾರೆ.

    ಕೃಪೆ: https://www.youtube.com/@TheNewIndian

    Share This
    300x250 AD
    300x250 AD
    300x250 AD
    Leaderboard Ad
    Back to top