ಸಿದ್ದಾಪುರ: ಮತವನ್ನು ನೀಡುವುದು, ಮತವನ್ನು ಪಡೆಯುವುದು, ಮತವನ್ನು ಕೇಳುವುದು ಅದು ಅವರವರ ಹಕ್ಕು. ಜಾತಿ ವಿಚಾರವಾಗಿ ಧರ್ಮವನ್ನು ವಿಭಜನೆ ಮಾಡಬಾರದು. ಜಾತಿಯ ಮುಖಾಂತರ ವ್ಯಕ್ತಿಯನ್ನು ಗುರಿತಿಸಲು ಹೋಗಬಾರದು. ಒಬ್ಬ ವ್ಯಕ್ತಿ ಕೇವಲ ಒಂದು ಜಾತಿಗೆ ಸೀಮಿತವಾಗಿರಬಾರದು. ಚುನಾವಣೆಗಾಗಿ ಆ ವ್ಯಕ್ತಿ ಜಾತಿಯ ಪರವಾಗಿ ಅನೇಕ ಭಿನ್ನಾಭಿಪ್ರಾಯಗಳನ್ನು ಸಮಾಜಕ್ಕೆ ನೀಡಬಾರದು. ಈ ರೀತಿ ಮಾಡಿದರೆ ಅದು ಸಮಾಜಕ್ಕೆ ಬಹಳ ದೊಡ್ಡ ಮಾರಕ ಮತ್ತು ಬಹಳ ದೊಡ್ಡ ತಪ್ಪಾಗುತ್ತದೆ.ಎಲ್ಲರನ್ನು ಒಂದೇ ರೀತಿಯಲ್ಲೆ ತೆಗೆದುಕೊಂಡು ಹೋಗೋದು ಇಂದಿನ ಕಾಲಮಾನದಲ್ಲಿ ಅತಿ ಅವಶ್ಯಕವಾಗಿದೆ ಎಂದು ಜೆಡಿಎಸ್ ಪಕ್ಷದ ಶಿರಸಿ- ಸಿದ್ದಾಪುರ ಕ್ಷೇತ್ರದ ಅಭ್ಯರ್ಥಿ ಉಪೇಂದ್ರ ಪೈ ಹೇಳಿದರು.
ಅವರು ಪಟ್ಟಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ಜಾತಿಯವರನ್ನು ಎಲ್ಲಾ ಧರ್ಮದವರನ್ನು ಎಲ್ಲಾ ಜನರನ್ನು ಸೇರಿಸಿ ನೀವು ಚುನಾವಣೆಗೆ ಹೋಗಿ ಎಂದು ಕುಮಾರಸ್ವಾಮಿಯವರು ನಮಗೀಗಾಗಲೇ ಹೇಳಿದ್ದಾರೆ. ಈ ಸಮಾಜದ ಮತದಾರು ಇಷ್ಟು ಇದ್ದಾರೆ. ಈ ಸಮಾಜದವರು ಇಂತಹ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬ ಭಾವನೆ ನಮಗೆ ಬೇಡ. ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪ್ರಮುಖರು ಕಾರ್ಯಕರ್ತರು ಎಲ್ಲ ಸೇರಿ ಮುಂಬರುವ ಚುನಾವಣೆಗೆ ನಾವೆಲ್ಲ ಸನ್ನದ್ಧರಾಗಿದ್ದೇವೆ. ನಾನು ಪಕ್ಷಕ್ಕೆ ಬಂದಾಗ ಸಿರ್ಸಿ ಸಿದ್ದಾಪುರ ಎರಡು ತಾಲೂಕುಗಳಲ್ಲಿ ಪಕ್ಷದ ಕಚೇರಿಗಳು ಇರಲಿಲ್ಲ. ಕಾರ್ಯಕರ್ತರು ಇದ್ದರು ಎಲ್ಲೋ ತೆರೆಮರೆಯಲ್ಲಿ ಇದ್ದರು . ಜೆಡಿಎಸ್ ಪಕ್ಷದ ಕಾರ್ಯಾಲಯ ನಾಲ್ಕು ವರ್ಷ 11 ತಿಂಗಳು ಕ್ಷೇತ್ರದಲ್ಲಿ ಬಂದಿರುತ್ತಿತ್ತು ಚುನಾವಣೆ ವೇಳೆಯಲ್ಲಿ ಮಾತ್ರ ಒಂದು ತಿಂಗಳು ತೆರೆದಿರುತ್ತಿತ್ತು. ಪ್ರತಿಯೊಂದು ಬೂತ್ ಗಳಲ್ಲಿ ಸಹ 10 ಸದಸ್ಯರನ್ನು ನಾವು ಈಗಾಗಲೇ ನೇಮಕ ಮಾಡಿದ್ದೇವೆ ಪ್ರತಿ ಪಂಚಾಯಿತಿಗಳಿಗೆ ಒಂದು ಘಟಕ ಅಧ್ಯಕ್ಷರನ್ನು ಸಹ ನೇಮಕ ಮಾಡಿದ್ದೇವೆ. ಎಲ್ಲಾ ಘಟಕ ಹಾಗೂ ತಾಲೂಕ ಅಧ್ಯಕ್ಷರುಗಳ ಸಂಪರ್ಕದೊ0ದಿಗೆ ಈಗಾಗಲೇ ಪಕ್ಷವನ್ನು ಪುನಹ ಸಂಘಟಿಸಿ ಚುನಾವಣೆಗೆ ಎಲ್ಲಾ ರೀತಿಯಿಂದ ಸಜ್ಜಾಗಿದ್ದೇವೆ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರನ್ನು ಮನೆ ಮನೆಗೆ ಕಳುಹಿಸಿ ಈ ಹಿಂದೆ ಕುಮಾರಸ್ವಾಮಿಯವರು ನೀಡಿದ ಯೋಜನೆಗಳ ತಿಳಿಸಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗುವ ನಿಟ್ಟಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಕೇಳುತ್ತೇವೆ. ವಿಶೇಷ ಯೋಜನೆಗಳೊಂದಿಗೆ ನಮ್ಮ ಪಕ್ಷ ರೈತರ ಪರವಾಗಿ ಕೂಲಿ ಕಾರ್ಮಿಕರ ಪರವಾಗಿ ಬಡವರ ಪರವಾಗಿ ಹಾಗೂ ಮಹಿಳೆಯರ ಪರವಾಗಿ ಶಿಕ್ಷಣ ಆರೋಗ್ಯ ವಸತಿಗಳಿಗೆ ಹಾಗೂ ವೃದ್ಧಾಪ್ಯ ವೇತನ ಸೇರಿದಂತೆ ಇವತ್ತು ಅನೇಕ ಯೋಜನೆಗಳನ್ನು ನೀಡಿದೆ. ವರ್ಷಕ್ಕೆ ಐದು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ನೀಡುವುದು, ಕೃಷಿ ಮಾಡುವ ಯುವಕರನ್ನು ವಿವಾಹವಾಗುವ ಮಹಿಳೆಯರಿಗೆ 2 ಲಕ್ಷ ರೂ. ನೀಡುವುದು ನಮ್ಮ ಪಕ್ಷದ ಯೋಜನೆಯಾಗಿದೆ ಹೀಗಾಗಿ ಘೋಷಣೆಯಾದ ಈ ಎಲ್ಲ ಪ್ರಣಾಳಿಕೆಗಳು ಕಾರ್ಯರೂಪಕ್ಕೆ ಬಂದು ಯಶಸ್ವಿಯಾಗಬೇಕು ಎಂದರೆ , ಪಕ್ಷವನ್ನು ಆಡಳಿತಕ್ಕೆ ತರಬೇಕು ಪ್ರಣಾಳಿಕೆಯಲ್ಲಿ ಪಕ್ಷವು ಮಹಿಳಾ ಸಬಲೀಕರಣ ಮತ್ತು ರೈತರ ಅಭಿವೃದ್ಧಿಗೆ ಒತ್ತು ನೀಡಿದೆ.
ಒಂದು ಎಕರೆ ತೋಟಕ್ಕೆ 9 ಎಕರೆ ಬೆಟ್ಟವನ್ನು ಸಾಗುವಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಹಿಂದೆ ನೀಡಲಾಗಿತ್ತು. ಈ ಬೆಟ್ಟಕ್ಕೆ ಮೊದಲು 75 ಶೇಕಡ ರೈತರ ಹಕ್ಕು ಹಾಗೂ 25 ಶೇಕಡ ಸರಕಾರದ ಹಕ್ಕಿತ್ತು ಅದಕ್ಕೆ ರೈತರು ಕರಕಟ್ಟುತ್ತಿದ್ದರು ಅಂದರೆ ಇದು ರೈತರದ್ದೆ ಬೆಟ್ಟ ಆಗಿತ್ತು. ಆದರೆ ಈಗ ಅದನ್ನು ಬ ಕರಾಬ್ ಎಂದು ಪರಿವರ್ತಿಸಲಾಗಿದೆ. ಇದರ ಅರ್ಥ ಈ ಬೆಟ್ಟ ಸರ್ಕಾರದ್ದು ಎಂದು.
ಈ ಕ್ಷೇತ್ರದ ಜನತೆ ಇಂದು ನಿರುದ್ಯೋಗ ಸಮಸ್ಯೆಯಲ್ಲಿ ಇದ್ದಾರೆ ಶಿರಸಿ ಸಿದ್ದಾಪುರ ತಾಲೂಕಿನ ಮಧ್ಯದಲ್ಲಿ ಗಾರ್ಮೆಂಟ್ ಫ್ಯಾಕ್ಟರಿಗಳನ್ನು ಮಾಡಿದರೆ ಕನಿಷ್ಠ 10ರಿಂದ 15 ಸಾವಿರ ರೂಪಾಯಿ ದುಡಿಮೆ ಆ ನಿರುದ್ಯೋಗಿಗಳದ್ದಾಗುತ್ತದೆ. ಸಾಗರದಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ನಮ್ಮ ಸಿದ್ದಾಪುರ ಭಾಗಗಳಿಂದ ಸುಮಾರು 300ರಿಂದ 4 ಜನ ಸಾಗರದಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ನಮ್ಮ ಸಿದ್ದಾಪುರ ಭಾಗಗಳಿಂದ ಸುಮಾರು 300ರಿಂದ 400 ಜನ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದಾರೆ.
ನಮ್ಮಲ್ಲಿರುವ ಎಲ್ಲ ಜನ ಸಮೂಹವನ್ನು ಒಂದೆಡೆ ಮಾಡಿ ಅಭಿವೃದ್ಧಿಯ ಜೊತೆಯಲ್ಲಿ ಒಳ್ಳೆಯ ಶಿಕ್ಷಣವನ್ನು ನೀಡಿ ನಾವು ಅವರನ್ನು ಮುಂದಿನ ದಿನಗಳಲ್ಲಿ ಎಲ್ಲಾ ಸೌಕರ್ಯಗಳನ್ನು ನೀಡಬೇಕೆಂಬುದು ನಮ್ಮ ಪಕ್ಷದ ಉದ್ದೇಶವಾಗಿದೆ. ಪ್ರಣಾಳಿಕೆಯಲ್ಲಿ ಪಕ್ಷವು ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನವನ್ನು ತಿಂಗಳಿಗೆ 5000 ರೂಪಾಯಿಗೆ ಹೆಚ್ಚಿಸಲಿದೆ. ಪದವಿಯವರಿಗೆ ಉಚಿತ ಶಿಕ್ಷಣ ಮಾರಕ ಕಾಯಿಲೆಗಳಿಗೆ ಬಡವರಿಗೆ 10 ಲಕ್ಷದವರೆಗೆ ಸರ್ಕಾರದಿಂದ ವೆಚ್ಚ ಭರಿಸುವುದು ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ, ವರ್ಷಕ್ಕೆ ಐದು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ, 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ವ್ಯಕ್ತಿಗಳಿಗೆ ಪಿಂಚಣಿ.ಕೃಷಿ ಮಾಡುವ ಯುವಕರನ್ನು ವಿವಾಹವಾಗುವ ಮಹಿಳೆಯರಿಗೆ 2 ಲಕ್ಷ ರೂ. ನೀಡುವುದಾಗಿ ಹೇಳಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಕಾನೂನು ತರುವುದಾಗಿಯೂ ಭರವಸೆ ನೀಡಿದೆ.
ಜಾತಿ ಮತ ಪಂಗಡದ ಆದರದ ಮೇಲೆ ಮತ ಕೇಳದಂತೆ ನಮ್ಮ ಎಲ್ಲಾ ಕಾರ್ಯಕರ್ತರುಗಳು ಸೂಚಿಸಲಾಗಿದೆ ನಮ್ಮ ಪಕ್ಷದ ಯೋಜನೆಗಳು ಈ ಹಿಂದೆ ನಮ್ಮ ಸರ್ಕಾರ ಆಡಳಿತದ ಅವಧಿಯಲ್ಲಿ ಮಾಡಿದ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಮತ ಕೇಳಲಿದ್ದೇವೆ. ಕೇವಲ 18 ತಿಂಗಳು ಆಡಳಿತ ನಡೆಸಿದ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯದ ಮೂಲಕ ಸ್ಥಳೀಯರ ಸಮಸ್ಯೆ ಅರಿತು ಗ್ರಾಮದ ಅಭಿನಯ ಮಾಡಿದ್ದಾರೆ ಇನ್ನೊಮ್ಮೆ ಕುಮಾರಸ್ವಾಮಿಯವರಿಗೆ ಅಧಿಕಾರವನ್ನು ಕೊಡಲು ಈ ರಾಜ್ಯದ ಜನತೆ ಬಯಸಿದೆ. ಅದೇ ರೀತಿಯಾಗಿ ಈ ಕ್ಷೇತ್ರದ ಅಭ್ಯರ್ಥಿಯಾಗಿರುವ ನಾನು ಕೂಡ ಎಲ್ಲೂ ಯಾವ ಸಂದರ್ಭದಲ್ಲಿ ಕೂಡ ತಾರತಮ್ಯವನ್ನು ಮಾಡಿಲ್ಲ ಎಂದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಸತೀಶ ಹೆಗಡೆ ಬೈಲಳ್ಳಿ, ಪ್ರಮುಖರಾದ ಕೆ.ಬಿ.ನಾಯ್ಕ ಕಾನಳ್ಳಿ, ರಾಜು ಗೊಂಡ ಅವರಗುಪ್ಪ, ಮಾರುತಿ ನಾಯ್ಕ, ಪರಮೇಶ್ವರ ಮಡಿವಾಳ, ಶ್ರೀಪಾದ ದಿಕ್ಷತ್ ಮೊದಲಾದವರಿದ್ದರು.