ಶಿರಸಿ: ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) ಜಿಲ್ಲಾ ಶಾಖೆ ಉತ್ತರ ಕನ್ನಡ, ಗ್ರೀನ್ ಕೇರ್ (ರಿ.) ಶಿರಸಿ, ಇಕೋ ಕೇರ್ (ರಿ.) ಶಿರಸಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.) ಶಿರಸಿ, ಮತ್ತು ಕರ್ನಾಟಕ ರಾಜ್ಯ ಔಷದ & ಮಾರಾಟ ಪ್ರತಿನಿಧಿಗಳ ಸಂಘ (ರಿ.) ಶಿರಸಿ ಘಟಕ, ಇವರ ಸಹಯೋಗದಲ್ಲಿ ಇಲ್ಲಿನ ಸುಯೋಗಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರ ಹುಲೇಕಲ್, ವೈದ್ಯಾಧಿಕಾರಿ ಡಾ.ಮಧುಕರ ಪಾಟೀಲ್ ಜಿ. ಎನ್. ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸುಯೋಗಾಶ್ರಯದ ಮುಖ್ಯಸ್ಥರಾದ ಲತಿಕಾ ಭಟ್ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷ ಮಹೇಶ್ ಡಿ. ನಾಯಕ್ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ ತೋನ್ಸೆ ಮಾತನಾಡಿ ನಾವು ಯಾವಾಗಲೂ ನಿಮ್ಮ ಜೊತೆ ಸೇವೆಗೆ ಸದಾ ಸಿದ್ದ ಎಂದು ಸುಯೋಗಾಶ್ರಮದ ಮುಖ್ಯಸ್ಥರಿಗೆ ತಿಳಿಸಿದರು. ಅತಿಥಿಗಳಾದ ಶ್ರೀಮತಿ ಗಿರಿಜಾ ಈಶ್ವರ್ ಹೆಗಡೆ ಐಸಿಟಿಸಿ ಕೌನ್ಸಿಲರ್ ಹಿರಿಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿದರು. ಸುಯೋಗಾಶ್ರಮದ ಮುಖ್ಯಸ್ಥರಾದ ಶ್ರೀಮತಿ ಲತಿಕಾ ಭಟ್ ಮಾತನಾಡಿ ನಮ್ಮ ಆಶ್ರಮದಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿರುವ ಎಲ್ಲರಿಗೂ ಶುಭ ಹಾರೈಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಕಿರಣ್ ನಾಯ್ಕ್, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಪ್ರವೀಣ್ ಪುಳ್ಕರ್, ಗ್ರೀನ್ ಕೇರ್ ನಿರ್ದೇಶಕರಾದ ಆಶಾ ಡಿಸೋಜ, ಮತ್ತು ಸಮಾಜ ಸೇವಕರಾದ ನೆಲ್ಸನ್ ಅಲ್ಫನ್ಸೋ ಅವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಎಲ್ಲಾ ಹಿರಿಯ ನಾಗರಿಕರಿಗೆ ರಕ್ತದೊತ್ತಡ, ಮಧುಮೇಹ ತಪಾಸಣೆ ಮತ್ತು ಹಿಮೋಗ್ಲೋಬಿನ್ ಪರೀಕ್ಷಿಸಿ ಸೂಕ್ತ ಔಷಧಿಗಳನ್ನು ಕೊಡಲಾಯಿತು. ರಮೇಶ್ ನಾಯ್ಕ್ ಅವರು ಕಾರ್ಯಕ್ರಮ ನಿರೂಪಿಸಿದರು, ಇಕೋ ಕೇರ್ ನ ಅಧ್ಯಕ್ಷರಾದ ಸುನಿಲ್ ಭೋವಿ ವಂದನಾರ್ಪಣೆ ಮಾಡಿದರು.