ಕುಮಟಾ: ಪಟ್ಟಣದ ನೆಲ್ಲಿಕೇರಿ ಸರಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜು ಮಾರ್ಚ್ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.
ಕಾಲೇಜಿನಲ್ಲಿ ಒಟ್ಟು 845 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದು, 779 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಒಟ್ಟಾರೆ ಫಲಿತಾಂಶ 92.2% ಆಗಿದ್ದು, 127 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 377 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 250 ವಿದ್ಯಾರ್ಥಿಗಳಲ್ಲಿ 244 ವಿದ್ಯಾರ್ಥಿಗಳು ಉತ್ತೀರ್ಣರಾಗಿ 97.6% ಫಲಿತಾಂಶ ಬಂದಿದೆ. 77 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 152 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 359 ವಿದ್ಯಾರ್ಥಿಗಳಲ್ಲಿ 339 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95% ಫಲಿತಾಂಶ ಬಂದಿದೆ. 41 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 182 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ 236 ವಿದ್ಯಾರ್ಥಿಗಳಲ್ಲಿ 196 ವಿದ್ಯಾರ್ಥಿಗಳು ಉತ್ತೀರ್ಣರಾಗಿ 83.5% ಫಲಿತಾಂಶ ಬಂದಿರುತ್ತದೆ. 09 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 43 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಗಣಿತದಲ್ಲಿ 01, ಗಣಕ ವಿಜ್ಞಾನದಲ್ಲಿ 09, ಸಮಾಜ ಶಾಸ್ತçದಲ್ಲಿ 01, ಇತಿಹಾಸದಲ್ಲಿ 01, ಸಂಸ್ಕೃತದಲ್ಲಿ 10 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಗಳಿಸಿದ್ದಾರೆ. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಾಚಾರ್ಯ ಸತೀಶ ಬಿ.ನಾಯ್ಕ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.
ಕಾಲೇಜಿನ ಟಾಪರ್ಸ್: ವಿಜ್ಞಾನ ವಿಭಾಗದಲ್ಲಿ ಸಹನಾ ಮಡಿವಾಳ (585/ 97.5%) ಪ್ರಥಮ, ಕಾರ್ತಿಕ್ ಕಾಮತ್ (581/ 96.83%) ಹಾಗೂ ಜ್ಯೋತಿ ಪಟಗಾರ (581/ 96.83%) ದ್ವಿತೀಯ, ಮಾಯಾ ಪಟಗಾರ (578/ 96.33%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಜೇಷ್ಠಿತಾ ಹರಿಕಾಂತ (570/ 95%) ಪ್ರಥಮ, ಜ್ಯೋತಿ ಎಸ್.ಗೌಡ (568/ 94.66%) ದ್ವಿತೀಯ, ನಾಗರತ್ನ ಎನ್.ನಾಯ್ಕ (565/ 94.16%) ತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ರಮ್ಯಾ ಶೆಟ್ಟಿ (569/ 94.83%) ಪ್ರಥಮ, ಶುಭಾ ನಾಯ್ಕ (567/ 94.5%) ಹಾಗೂ ಯೋಗಿತಾ ನಾಯ್ಕ (567/ 94.5%) ದ್ವಿತೀಯ, ಗೀತಾ ನಾಯ್ಕ (565/ 94.16%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.