• Slide
    Slide
    Slide
    previous arrow
    next arrow
  • ಇಂದಿನಿಂದ ಸಮುದ್ರ ಈಜು ತರಬೇತಿ

    300x250 AD

    ಕಾರವಾರ: ಇಲ್ಲಿನ ಕರಾವಳಿ ದೋಣಿ ವಿಹಾರ ಹಾಗೂ ಸಾಹಸಿ ಕೇಂದ್ರದ ವತಿಯಿಂದ ಏ.22ರಿಂದ ಇಲ್ಲಿನ ಅಲಿಗದ್ದಾ ಕಡಲತೀರದಲ್ಲಿ ಈಜು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
    ಸಾರ್ವಜನಿಕರಿಗಾಗಿ ಹಾಗೂ ವಿದ್ಯಾರ್ಥಿಗಳಿಗಾಗಿ ಈ ಈಜು ತರಬೇತಿಯನ್ನು ನೀಡಲಾಗುತ್ತಿದ್ದು 8 ವರ್ಷ ಮೇಲ್ಪಟ್ಟ ಮಕ್ಕಳು, ಯುವಕ-ಯುವತಿಯರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಈಜು ತರಬೇತಿ ಜೊತೆಗೆ ವಿದ್ಯಾರ್ಥಿಗಳಿಗೆ ಜಲಸಾಹಸ ಕ್ರೀಡೆಗಳಾದ ಕಯಾಕಿಂಗ್, ಬೋಟ್ ಬ್ಯಾಲೆನ್ಸ್, ಬೋಟಿಂಗ್ ಕಲಿಸಲಾಗುವುದು. ಅಲ್ಲದೇ ಟ್ರೆಕ್ಕಿಂಗ್ ಸೇರಿದಂತೆ ವಿವಿಧ ಸಾಹಸಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ.
    ಈಜು ತರಬೇತಿ ಪಡೆಯಲಿಚ್ಛಿಸುವ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಲಿಗದ್ದಾ ಕಡಲತೀರದ ಬಳಿ ರಾ.ಹೆ.66 ರ ಪಕ್ಕ ಇರುವ ಕರಾವಳಿ ದೋಣಿ ವಿಹಾರ ಹಾಗೂ ಸಾಹಸಿ ಕೇಂದ್ರವನ್ನು ಸಂಪರ್ಕಿಸುವಂತೆ ಸಂಘಟಕರು ಕೋರಿದ್ದಾರೆ. ಅಲ್ಲದೇ ತರಬೇತಿಯ ಸಂಘಟಕರಾದ ಪ್ರಕಾಶ ಹರಿಕಂತ್ರ (ಮೊ: 7760365079) ಇವರನ್ನು ಸಂಪರ್ಕಿಸಬಹುದಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top