ದಾಂಡೇಲಿ: ಯುವತಿಯೋರ್ವಳು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಸ್ಥಳೀಯ ಯುವಕರಿಂದ ರಕ್ಷಣೆಗೊಳಗಾದ ಘಟನೆ ನಗರದ ಬೈಲ್‌ಪಾರಿನಲ್ಲಿ ನಡೆದಿದೆ.
ನದಿಗೆ ಜಿಗಿದ ಯುವತಿ ಸ್ಥಳೀಯ ಗಾಂಧಿನಗರದವಳೆAದು ತಿಳಿದುಬಂದಿದೆ. ಈಕೆ ಯಾವುದೋ ಕಾರಣಕ್ಕೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನದಿಗೆ ಹಾರುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕರುಗಳಾದ ಸಂಜು ಬೆಕ್ಕಂ, ಇರ್ಪಾನ್ ಬಶೀರ್ ಮುಲ್ಲಾ, ಫಾರೂಕ್, ಕಾಶಿನಾಥ್, ಆಪ್ಸಾನ್ ಶೇಖ್ ಮೊದಲಾದವರು ನದಿಗೆ ಜಿಗಿದು, ಯುವತಿಯನ್ನು ರಕ್ಷಿಸಿ ಮಾನವೀಯತೆ ಮರೆದಿದ್ದಾರೆ. ಮೊದಲೇ ಮೊಸಳೆಯ ಭಯದ ನಡುವೆಯು ಯುವಕರು ಸಾಹಸ ತೋರಿ ಯುವತಿಯನ್ನು ಬದುಕಿಸಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸ್ಥಳಕ್ಕೆ 112 ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಸ್ಥಳೀಯ ಯುವಕರಿಂದ ರಕ್ಷಣೆ
