• Slide
    Slide
    Slide
    previous arrow
    next arrow
  • PUC ರಿಸಲ್ಟ್: ಚೇತನಾ ವಿದ್ಯಾರ್ಥಿನಿ ಚಿನ್ಮಯಿ ರಾಜ್ಯಕ್ಕೆ 5ನೇ ಸ್ಥಾನ

    300x250 AD

    ಸಿದ್ದಾಪುರ: ಇಲ್ಲಿನ ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯವು ಪ್ರತಿ ವರ್ಷದಂತೆ ಈ ಬಾರಿಯು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ನೀಡಿದ್ದಾರೆ.

    ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನ ಫಲಿತಾಂಶ 99% ಆಗಿದ್ದು, ಅದರಲ್ಲಿ 07 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯನ್ನು (Distinction) ಹಾಗೂ ಒಂದು ವಿದ್ಯಾರ್ಥಿ ಹೊರತು ಪಡಿಸಿ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

    ಕುಮಾರಿ ಚಿನ್ಮಯಿ ಕುಮಾರ ನಾಯ್ಕ 592 ಅಂಕದೊಂದಿಗೆ 98.66% ಪಡೆದು ರಾಜ್ಯಕ್ಕೆ ಐದನೇ ರ‍್ಯಾಂಕ್‌, ಕಾಲೇಜಿಗೆ ಪ್ರಥಮ ರ‍್ಯಾಂಕ್‌ ಪಡೆದಿದ್ದಾಳೆ.

    ಹಾಗೆಯೇ ಧಾತ್ರಿ ರಾಮಮೂರ್ತಿ ಹೆಗಡೆ 543 ಅಂಕದೊಂದಿಗೆ 90.5 % ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ, ನಾಗೇಂದ್ರ ಮಂಜುನಾಥ ಹೆಗಡೆ 541 ಅಂಕದೊಂದಿಗೆ 90% ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

    300x250 AD

    ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಕಾಲೇಜಿನ ಪ್ರಾಚಾರ್ಯರು. ಎಲ್ಲಾ ಉಪನ್ಯಾಸಕರು ಅಭಿನಂದಿಸಿದ್ದಾರೆ.

    .

    Share This
    300x250 AD
    300x250 AD
    300x250 AD
    Leaderboard Ad
    Back to top