ಶಿರಸಿ : ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ಅತಿ ಹೆಚ್ಚು ಫಲಿತಾಂಶವನ್ನು ಶಿರಸಿಯ ಎಂಇಎಸ್ ಪದವಿ ಪೂರ್ವ ಕಾಲೇಜು ದಾಖಲಿಸಿದೆ.
ಮಾರ್ಚ 2023 ರಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಹಾವಿದ್ಯಾಲಯದ ಫಲಿತಾಂಶ ಪ್ರತಿಶತ 99.66% ಆಗಿದ್ದು, ಪರೀಕ್ಷೆಗೆ ಕುಳಿತ 302 ವಿದ್ಯಾರ್ಥಿಗಳಲ್ಲಿ 301 ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಶೆ.100 ರಷ್ಟು ಫಲಿತಾಂಶ ಬಂದಿದ್ದು, 150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಪಾಸಾಗಿದ್ದಾರೆ. ಅವರಲ್ಲಿ 93 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿ ಪಡೆದುಕೊಂಡಿದ್ದಾರೆ.
ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ಶೆ. 99.28% ರಷ್ಟು ಫಲಿತಾಂಶ ಬಂದಿದ್ದು, 123 ವಿದ್ಯಾರ್ಥಿಗಳಲ್ಲಿ 122 ವಿದ್ಯಾರ್ಥಿಗಳು ಪರೀಕ್ಷೆ ಪಾಸಾಗಿದ್ದು, 61ವಿದ್ಯಾರ್ಥಿಗಳು ಉನ್ನತ ಶ್ರೇಣಿ, 54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 6 ದ್ವಿತೀಯ ಹಾಗೂ 1 ತೃತೀಯ ಶ್ರೇಣಿ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಮಹಾವಿದ್ಯಾಲಯವು ಶೆ. 100% ಫಲಿತಾಂಶ ಪಡೆದಿದ್ದು, 29 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆ ಹೊಂದಿದ್ದಾರೆ.11ವಿದ್ಯಾರ್ಥಿಗಳು ಉನ್ನತ ಶ್ರೇಣಿ, 15 ಪ್ರಥಮ ಶ್ರೇಣಿ, 3 ದ್ವಿತೀಯ ಶ್ರೇಣಿ ಪಡೆದಿದ್ದಾರೆ.
ಇನ್ನು ವೈಯಕ್ತಿಕವಾಗಿ ವಿಜ್ಞಾನ ವಿಭಾಗದಲ್ಲಿ ರಶ್ಮಿ ರಾಮದಾಸ ಪೈ
590/600 ಅಂಕ ಪಡೆದು ಕಾಲೇಜಿಗೆ ಪ್ರಥಮ ಹಾಗೂ ರಾಜ್ಯಕ್ಕೆ 7ನೇ ರ‍್ಯಾಂಕ್, ತೃಪ್ತಿ ಡಿಯೋ 588/600 ದ್ವಿತೀಯ, ರಾಜ್ಯಕ್ಕೆ 9ನೇ ರ‍್ಯಾಂಕ್, ಶ್ರೀರಾಮ ಪ್ರಕಾಶ ಹೆಗಡೆ 584/600 ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಚಲಾ ವಿ. ಹೆಗಡೆ 593/600 ಪ್ರಥಮ, ರಾಜ್ಯಕ್ಕೆ 5ನೇ ರ‍್ಯಾಂಕ್, ಅಂಜಲಿ ಉಡುಪಿಕರ 591/600 ದ್ವಿತೀಯ, ರಾಜ್ಯಕ್ಕೆ 7ನೇ ರ‍್ಯಾಂಕ್, ಅಮೃತಾ ಆರ್. ಹೆಗಡೆ 587/600 ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಧನಲಕ್ಷೀ ಎಸ್. ಕುರ್ಡೇಕರ 570/600, ಪ್ರಥಮ, ಪ್ರದೀಪ ಬಿ. ಎಚ್ 562/600, ದ್ವಿತೀಯ ಹಾಗೂ ಮೇಘನಾ ಕೆ
541/600 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಈ ಸಾಧಕ ವಿದ್ಯಾರ್ಥಿಗಳನ್ನು ಎಂ.ಇ.ಎಸ್ ಅಧ್ಯಕ್ಷ ಜಿ. ಎಂ. ಹೆಗಡೆ ಮುಳಖಂಡ, ಗೌರವ ಪ್ರಧಾನ ಕಾರ್ಯದರ್ಶಿ ಎಸ್. ಪಿ. ಶೆಟ್ಟಿ, ಖಜಾಂಜಿ ಸುಧೀರ ಭಟ್ಟ, ಉಪಸಮಿತಿ ಅಧ್ಯಕ್ಷ ಶ್ರೀಪಾದ ನಾರಾಯಣ ರಾಯ್ಸದ್ ಮತ್ತು ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಉಪನ್ಯಾಸಕ ವೃಂದದವರು, ಹಾಗೂ ಕಾಲೇಜು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.