Slide
Slide
Slide
previous arrow
next arrow

ಆಳ್ವಾರನ್ನು ಬಹುಮತದಿಂದ ಗೆಲ್ಲಿಸಲು ಪಕ್ಷದಲ್ಲಿನ ಬಂಡಾಯವನ್ನು ಶಮನ ಮಾಡಿಕೊಳ್ಳಿ- ಬಿ.ಕೆ. ಹರಿಪ್ರಸಾದ ಕರೆ

300x250 AD

ಕುಮಟಾ: ಇಲ್ಲಿನ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ನಿವೇದಿತ್ ಆಳ್ವಾರನ್ನು ಬಹುಮತದಿಂದ ಗೆಲ್ಲಿಸಲು ಪಕ್ಷದಲ್ಲಿನ ಬಂಡಾಯವನ್ನು ಶಮನ ಮಾಡಿಕೊಳ್ಳುವಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ ಅವರು ಕರೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ ಎಲ್ ನಾಯ್ಕ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ ಅವರು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಸಹಜ. ಟಿಕೆಟ್ ಕೈತಪ್ಪಿದಾಗ ಬೇಸರವಾಗುವುದು ಕೂಡ ಸಾಮಾನ್ಯ. ಆದರೆ ನಾವೆಲ್ಲರೂ ಪಕ್ಷದ ಹೈಕಮಾಂಡ್ ನಿರ್ಣಯಕ್ಕೆ ಬದ್ಧರಾಗಬೇಕು. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಿದ್ಧಾಂತದಡಿ ಇರುವ ನಾವೆಲ್ಲ ಈ ಭಾರಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ನಿವೇದಿತ್ ಆಳ್ವಾರನ್ನು ಗೆಲ್ಲಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ ಕೆ ಹರಿಪ್ರಸಾದ ಅವರು ಕರೆ ನೀಡಿದ್ದಾರೆ. ಪಕ್ಷದಲ್ಲಿರುವ ಬಂಡಾಯ, ವೈಮನಸ್ಸು, ಭಿನ್ನಾಬಿಪ್ರಾಯಗಳನ್ನು ಮರೆತು ಪಕ್ಷದ ಗೆಲುವಿಗೆ ದುಡಿಯಬೇಕಾಗಿದೆ. ಆ ನಿಟ್ಟಿನಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದ ನಾಯಕರನ್ನು ಭೇಟಿ ಮಾಡಿ, ಮನವೊಲಿಸುವ ಪ್ರಯತ್ನ ಮಾಡಲಾಗುವುದು. ನಮ್ಮ ಬಳಿಯಾಗದಿದ್ದರೆ, ರಾಜ್ಯ ಮುಖಂಡರ ಮೂಲಕವಾದರೂ ಬಂಡಾಯವನ್ನು ಶಮನ ಮಾಡಿಕೊಳ್ಳುತ್ತೇವೆ. ಖಂಡಿತ ಈ ಬಾರಿಯ ಚುನಾವಣೆಯಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಶತಸಿದ್ಧ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ ಎಲ್ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top