Slide
Slide
Slide
previous arrow
next arrow

ಅಂಕೋಲಾ ಪುರಸಭೆಯ ಇಬ್ಬರು ಪುರಸಭಾ ಸದಸ್ಯರ ರಾಜೀನಾಮೆ

300x250 AD

ಅಂಕೋಲಾ: ಕಾರವಾರ-ಅಂಕೋಲಾ ಕ್ಷೇತ್ರದ ರಾಜಕೀಯ ಗರಿಗೆದರಿದ್ದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಅಸಮಾಧಾನ ತೋರಿ ಇಬ್ಬರು ಪುರಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅಂಕೋಲಾ ಪುರಸಭೆಯ ಕಾಂಗ್ರೆಸ್ ಸದಸ್ಯರಾದ ವಿಶ್ವನಾಥ್ ನಾಯ್ಕ ಹಾಗೂ ಜೈರಾಬಿ ಅಶ್ಪಾಕ್ ಬೇಂಗ್ರೆ ರಾಜೀನಾಮೆ ನೀಡಿದ ಸದಸ್ಯರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನ ಸರಿಯಾಗಿ ಗೌರವಕೊಡುತ್ತಿಲ್ಲ. ಜೊತೆಗೆ ಮಾಜಿ ಶಾಸಕರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಸ್ಪಂದಿಸುತ್ತಿಲ್ಲ ಎಂದು ರಾಜೀನಾಮೆ ಸಲ್ಲಿಸಿದ್ದಾರೆ.
ಚುನಾವಣಾ ಹೊಸ್ತಿಲಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳೇ ರಾಜೀನಾಮೆ ಸಲ್ಲಿಸಿರುವುದು ಪಕ್ಷದ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗಿದೆ. ಇನ್ನು ಇಬ್ಬರು ಪುರಸಭಾ ಸದಸ್ಯರ ರಾಜೀನಾಮೆಯಿಂದ ಪಕ್ಷದಲ್ಲಿ ಸಾಕಷ್ಟು ಗೊಂದಲ ಮೂಡಿದ್ದು, ರಾಜೀನಾಮೆ ಬಿಜೆಪಿಗೆ ಪ್ಲಸ್ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ.
“ಈ ಹಿಂದೇ ನನ್ನ ಕುಟುಂಬ ಕಾಂಗ್ರೇಸ್ ಪಕ್ಷಕ್ಕೆ ಮುಡಿಪಾಗಿತ್ತು, ಆದರೆ ಈಗ ಮಾಜಿ ಶಾಸಕರು ನಮಗೆ ಮನ್ನಣೆ ನೀಡದಿರುವುದು ಬೇಸರತಂದಿದೆ, ಅದಲ್ಲದೇ ಕಳೆದ ಬಾರಿ ಪುರಸಭೆ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಹುಮತ ಪಡೆಯುವ ಸನಿಹವಿದ್ದರು ಅಧಿಕಾರಕ್ಕೆ ತರುವಲ್ಲಿ ನಿರ್ಲಕ್ಷ್ಯವಹಿಸಿದ್ದು ತುಂಬಾ ಬೇಸರ ತಂದಿತ್ತು. ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರಲ್ಲಿ ನಾನೆ ಹಿರಿಯವನಾಗಿದ್ದು ಅಧ್ಯಕ್ಷರ ಆಯ್ಕೆಯಲ್ಲಿ ನನ್ನನ್ನು ಕಡೆಗಣಿಸಿದರು ಅದಲ್ಲದೆ ಪಕ್ಷ ಕಟ್ಟುವಲ್ಲಿ ತಳಮಟ್ಟದಿಂದ ದುಡಿದ ನನ್ನನ್ನು ನಿರ್ಲಕ್ಷಿಸಿದ ಮಾಜಿ ಶಾಸಕರ ನಡೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ವಾಡ್ ನಂ.೧೬ರ ಸದಸ್ಯ ವಿಶ್ವನಾಥ ಟಿ.ನಾಯ್ಕ ಹೇಳಿದ್ದಾರೆ

“ಪಕ್ಷಕ್ಕಾಗಿ ನಿಷ್ಠಾವಂತರಾಗಿ ದುಡಿದ ನಮ್ಮನ್ನು ನಿರ್ಲಕ್ಷಿಸಿದ ಮಾಜಿ ಶಾಸಕರು, ವಾರ್ಡ್ ಸಭೆಯಲ್ಲಿ ಮಹಿಳಾ ಪುರಸಭೆ ಸದಸ್ಯೆ ಎನ್ನುವುದು ಲೆಕ್ಕಿಸದೆ ನನಗೆ ಎಲ್ಲರ ಎದುರು ಬೈದು ನಿಂದಿಸಿದ್ದರು. ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಮಯದಲ್ಲಿ ಕಾಂಗ್ರೆಸ್ ಸದಸ್ಯರ ಕೈ ಬಿಟ್ಟಿದ್ದರು. ಅದರಿಂದ ಪುರಸಭೆ ಅಧಿಕಾರ ವಂಚಿತರಾದೆವು. ಇವೆಲ್ಲ ನೋವಿನಿಂದ ನನ್ನ ವಾರ್ಡ್ ಜನರ ಅಭಿಪ್ರಾಯವನ್ನು ಪಡೆದು ಕಾಂಗ್ರೆಸ್ ಹಾಗೂ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ವಾರ್ಡ್ ನಂ.೧೫ ಸದಸ್ಯೆ ಜೈರಾಬಿ ಅಶ್ಪಾಖ್ ಬೆಂಗ್ರೆ ಹೇಳಿಕೆ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top