• Slide
    Slide
    Slide
    previous arrow
    next arrow
  • ವಿಷ್ಣು ಸಹಸ್ರನಾಮದ ಅರ್ಥವ್ಯಾಪ್ತಿ ಉಪನ್ಯಾಸ ಮಾಲಿಕೆ

    300x250 AD

    ಕುಮಟಾ: ಹವ್ಯಕ ವಿದ್ಯಾವರ್ಧಕ ಸಂಘದ ಯಾಜ್ಞವಲ್ಕ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಷ್ಣು ಸಹಸ್ರನಾಮದ ಅರ್ಥ ವ್ಯಾಪ್ತಿ ಉಪನ್ಯಾಸ ಮಾಲಿಕೆಯಲ್ಲಿ ಎರಡನೇ ಉಪನ್ಯಾಸವು ಹವ್ಯಕ ಸಭಾಭವನದಲ್ಲಿ ಜರುಗಿತು.

    ಉಪನ್ಯಾಸಕಾ ಡಾ.ಮಧುಸೂಧನ ಅಡಿಗರು ಹಿಂದಿನ ಮಾಲಿಕೆಯಲ್ಲಿ ವಿಷ್ಣು ಸಹಸ್ರ ನಾಮದ ವಿಶೇಷ, ಸಂದರ್ಭ ಕುರಿತು ಹೇಳಿದ್ದರೆ, ಈ ಮಾಲಿಕೆಯಲ್ಲಿ ನಾಮಗಳ ವಿಶೇಷ ಹಾಗೂ ಅವು ಪರಮಾತ್ಮನಲ್ಲಿ ಅನುಸಂಧಾನವಾಗುವ ಪರಿಯನ್ನು ವಿವರಿಸಿದರು. ಸಹಸ್ರನಾಮದಲ್ಲಿ ಕೆಲವು ದ್ವಿರುಕ್ತಿ, ತ್ರಿರುಕ್ತಿ ಹೀಗೆಲ್ಲ ಇವೆ. ಒಂದೇ ಶಬ್ದವು ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆ ಅರ್ಥವ್ಯತ್ಯಾಸ ಆಗುತ್ತವೆ ಎಂದು ತಿಳಿಸಿ, ಅವು ಹೇಗೆ ದ್ವಿರುಕ್ತಿ ಅಥವಾ ತ್ರಿರುಕ್ತಿ ಆಗುವುದಿಲ್ಲ ಎಂಬುದನ್ನು ವಿವರಿಸಿದರು.
    ಚರಾಚರಗಳಲ್ಲೆಲ್ಲ ಪರಮಾತ್ಮನ ಅಸ್ತಿತ್ವ ಹಾಗೂ ಪರಮಾತ್ಮ ಸ್ವತಃ ತಾನೇ ಇದ್ದು ಉಳಿದದ್ದನ್ನು ಇರುವ ಹಾಗೆ ಮಾಡುವ ಅವನ ಭಾವವನ್ನು ಸಾಮಾನ್ಯರಿಗೂ ತಿಳಿಯುವಂತೆ ಮನದಟ್ಟು ಮಾಡಿದರು. ವಿಶ್ವಂ (ವ್ಯಾಪಕ)ದಿಂದ ಪ್ರಾರಂಭವಾಗಿ ಸರ್ವಪ್ರಹರಣಾಯುಧ ಎಂಬ ಶಬ್ದದಲ್ಲಿ ಮುಕ್ತಾಯವಾಗುವ ವಿಷ್ಣು ಸಹಸ್ರ ನಾಮದ ಸಹಸ್ರ ಮುಖಗಳ ದರ್ಶನ ಮಾಡಿದರು.

    300x250 AD

    ಸುಮಾರು 1:30 ಗಂಟೆ ಕಾಲದ ಅವರ ಉಪನ್ಯಾಸವನ್ನು ಸಭಿಕರು ಮಂತ್ರಮುಗ್ಧರಾಗಿ ಆಲಿಸಿದರು. ಆಧುನಿಕ ಶಬ್ದಗಳನ್ನು ಹೇಗೆ ಸಂಸ್ಕೃತಕ್ಕೆ ಅಳವಡಿಸಬಹುದು ಎಂಬುದನ್ನು computerನ್ನು ‘ಕಂಪ ಯೂಥರ ‘ ಎಂದು ಮಾಡಬಹುದೆಂದು ತೋರಿಸಿಕೊಟ್ಟರು. ಉಪನ್ಯಾಸದ ನಂತರ ಕೆಲವರು ಕೇಳಿದ ಸಂದೇಹಗಳಿಗೆ ಸಮಂಜಸ ಉತ್ತರಗಳನ್ನು ಕೂಟ್ಟರು.
    ಅಧ್ಯಕ್ಷರಾದ ವಿಜ್ಞಾನಿ ಶ್ರೀಕಾಂತ ಹೆಗಡೆಯವರು ಕ್ಯಾನ್ಸರ್ ನಿವಾರಣೆಯಲ್ಲಿ ಮಂತ್ರ ಅರ್ಥಾತ್ ವಿಷ್ಣು ಸಹಸ್ರನಾಮದ ಪಾತ್ರವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ವಿವರಿಸಿದರು. ಸಭೆಯ ಪ್ರಾರಂಭವು ಭವ್ಯಾ ಹೆಬ್ಬಾರರ ಗಣೇಶ ಸ್ತುತಿಯೊಂದಿಗೆ ಆಯಿತು. ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಚಂದ್ರಶೇಖರ ಉಪಾಧ್ಯಾಯರು ಸ್ವಾಗತಿಸಿ ಪರಿಚಯಿಸಿದರು. ಕೆ.ಎನ್.ಕೃಷ್ಣ ವಂದಿಸಿದರು. ಎಂ.ಎನ್.ಹೆಗಡೆ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top