Slide
Slide
Slide
previous arrow
next arrow

ಪಾಳಾ ಆಲ್ಫಾನ್ಸೋ ಮಾವು: ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಡಾ.ವೆಂಕಟೇಶ ನಾಯ್ಕ್

300x250 AD

ಶಿರಸಿ: ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚನೆಗೊಂಡ ಮುಂಡಗೋಡು ಪಾಳಾದ ರೈತ ಕಲ್ಯಾಣ ರೈತ ಉತ್ಪಾದಕ ಕಂಪನಿಯು ನೈಸರ್ಗಿಕವಾಗಿ ಹಣ್ಣು ಮಾಡಿದ ಪಾಳಾ ಆಲ್ಫಾನ್ಸೋ ಮಾವಿನ ಹಣ್ಣುಗಳನ್ನು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಪಾಳಾ ಅಲ್ಫಾನ್ಸೋ ಹೆಸರಿನ ಮಾವಿನ ಹಣ್ಣು ಅತ್ಯಂತ ರುಚಿಕಟ್ಟಾಗಿದ್ದು ವ್ಯಾಪಕ ಬೇಡಿಕೆಯನ್ನು ಹೊಂದಿದೆ. ರೈತ ಕಲ್ಯಾಣ ರೈತ ಉತ್ಪಾದಕ ಕಂಪನಿಯು ಪ್ರತೀ ವರ್ಷ ರೈತರು ಬೆಳೆದ ಅಲ್ಫಾನ್ಸೋ ಮಾವುಗಳನ್ನು ನೈಸರ್ಗಿಕವಾಗಿ ಹಣ್ಣು ಮಾಡಿ ಮಾರಾಟ ಮಾಡುವ ಮೂಲಕ ಮಾವು ಬೆಳೆಗಾರರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಬೆಂಗಳೂರು, ಮುಂಬೈ, ಮಂಗಳೂರು, ಗೋವಾ ಮುಂತಾದ ಪ್ರದೇಶಗಳಿಂದ ಪಾಳಾ ಆಲ್ಫಾನ್ಸೋ ಬೇಡಿಕೆ ಬರುತ್ತಿದೆ. ಮಾವು ಪ್ರಿಯ ಸಾರ್ವಜನಿಕರು ಉತ್ತಮ ಮಾವಿನ ಹಣ್ಣುಗಳಿಗಾಗಿ ರೈತ ಕಲ್ಯಾಣ ಕಂಪನಿಯನ್ನು ಸಂಪರ್ಕಿಸುವಂತೆ ಕೋರಿದರು. ಮಾವು ಪ್ರಿಯ ಸಾರ್ವಜನಿಕರು ಉತ್ತಮ ಮಾವಿನ ಹಣ್ಣುಗಳಿಗಾಗಿ ರೈತ ಕಲ್ಯಾಣ ಕಂಪನಿಯ ಲಕ್ಷ್ಮೀಕಾಂತ Tel:+917676169170 ರವರನ್ನು ಸಂಪರ್ಕಿಸುವಂತೆ ಕೋರಿದರು.

300x250 AD

ಈ ಸಂದರ್ಭದಲ್ಲಿ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಕಾಂತ ನಾಡಿಗ್, ಸ್ಕೊಡ್ ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್.ರವಿ, ರೈತ ಉತ್ಪಾದಕ ಸಂಸ್ಥೆಗಳ ಕಾರ್ಯಕ್ರಮಾಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top