Slide
Slide
Slide
previous arrow
next arrow

ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಅವಕಾಶವಿದೆ: ಚೈತ್ರಾ ಕೊಠಾರಕರ್

300x250 AD

ಕಾರವಾರ/ ಅಂಕೋಲಾ: ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಎದುರಾಳಿಯೇ ಇಲ್ಲ. ಜನರು ಹೊಸ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಕಾಯುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಚೈತ್ರಾ ಕೊಠಾರಕರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕಾರವಾರ ಅಂಕೋಲಾ ಕ್ಷೇತ್ರದ ಜನ ಹೊಸಬರಿಗೆ ಅವಕಾಸ ನೀಡುವ ಬರವಸೆಯನ್ನು ಕೊಡುತ್ತಿದ್ದಾರೆ. ಈಗಾಗಲೇ ನಾನು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಎಲ್ಲೆಡೆಯು ಇಂತಹ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿಯು ಜೆಡಿಎಸ್ ಪಕ್ಷದ ಚುಕ್ಕಾಣಿ ಹಿಡಿದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ. ರಾಜ್ಯದಲ್ಲಿ ಬೇರೆ ಪಕ್ಷದ ದುರಾಡಳಿತವನ್ನು ನೋಡಿದ ಜನ ಪ್ರಾದೇಶಿಕ ಪಕ್ಷಕ್ಕೆ ಆದ್ಯತೆ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಈ ಬಾರಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ನನಗೆ ನೂರಕ್ಕೆ ನೂರರಷ್ಟು ಕ್ಷೇತ್ರದ ಎಲ್ಲಾ ಸಮುದಾಯದ ಜನರು ಬೆಂಬಲಿಸಿ ಗೆಲ್ಲಿಸಿ ಹೊಸ ಮುಖಕ್ಕೆ ಆದ್ಯತೆ ನೀಡುತ್ತಾರೆನ್ನುವ ವಿಶ್ವಾಸವಿದೆ ಎಂದರು.

ಶಾಸಕಿಯಾಗಿ ಆಯ್ಕೆಯಾದರೆ ಕ್ಷೇತ್ರದಲ್ಲಿ ಸ್ವಚ್ಛ ಶುದ್ಧ ಆಡಳಿತವನ್ನು ನೀಡುತ್ತೇನೆ. ಅಲ್ಲದೆ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಮಾಡಬೇಕಾದ ಬಹಳಷ್ಟು ಕೆಲಸಗಳಿವೆ. ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶ್ರಮಿಸುವುದು, ಮೀನುಗಾರರಿಗೆ ಸರಕಾರದಿಂದ ವಿಶೇಷ ಪ್ಯಾಕೇಜ್ ತರುವುದು, ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವುದು, ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆದ್ಯತೆ ನೀಡುವುದು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದು, ಕಾಮಗಾರಿಗಳ ಟೆಂಡರ್ ಹಂಚಿಕೆ ವೇಳೆ ಅವ್ಯವಹಾರ ಆಗದಂತೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು, ಕಾಮಗಾರಿಯ ಹಂಚಿಕೆ ವೇಳೆ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡುವುದು, ಪ್ರವಾಸೋದ್ಯಮಕ್ಕೆ ಒತ್ತು ನೀಡುವುದು, ಸ್ವಚ್ಛತೆ ಮೂಲಭೂತ ಸೌಕರ್ಯ ಮತ್ತು ಕೃಷಿ ಚಟುವಟಿಕೆಗೆ ಆದ್ಯತೆ ನೀಡುವುದು. ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಮತ್ತು ಡಿಜಿಟಲ್ ತರಗತಿಗಳನ್ನು ಪ್ರಾರಂಭಿಸುವುದು. ಯಾವುದೇ ಯೋಜನೆಯಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕೊಡಿಸಲು ಪ್ರಯತ್ನಿಸುವುದು. ಯಾವುದೇ ಕೆಲಸ ಆಗಬೇಕಾದರೆ ಆಪ್ತ ಸಹಾಯಕರ ಅಥವಾ ಆಪ್ತರ ಮೂಲಕವೇ ಬರಬೇಕು ಎನ್ನುವ ನಿಯಮಕ್ಕೆ ಬ್ರೇಕ್ ಹಾಕುವುದು ಇನ್ನೂ ಹತ್ತು ಹಲವಾರು ವಿಚಾರಗಳನ್ನಿಟ್ಟುಕೊಂಡು ಸ್ಪರ್ಧಿಸಿದ್ದೇನೆ ಪ್ರಜ್ಞಾವಂತ ಮತದಾರರು ಸುಶಿಕ್ಷಿತ ಹಾಗೂ ಜನಪರ ಕಾಳಜಿ ಇರುವ ನನಗೆ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

300x250 AD

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಸಂದೀಪ ಬಂಟ, ಕೇಣಿ, ರಾಜ್ಯ ಮಹಿಳಾ ಅಧ್ಯಕ್ಷೆ ಮೋಹಿನಿ ನಾಯ್ಕ, ತಾಲೂಕ ಮಹಿಳಾ ಪ್ರಧಾನ ಕಾರ್ಯದರ್ಶಿ ರಿಹನಾ ಯುಸುಫ್ ಶೇಖ್, ಜಾತ್ಯತೀತ ಜನಾದಳದ ಅಂಕೋಲಾ ತಾಲೂಕ ಅಲ್ಪ ಸಂಖ್ಯಾತ ವಿಭಾಗ ಅಧ್ಯಕ್ಷ ಅನ್ವರ್ ಗೌಸ್ ಸಯ್ಯದ್, ಹಿಂದುಳಿದ ವರ್ಗದ ತಾಲೂಕ ಅಧ್ಯಕ್ಷ ಗುರುರಾಜ್ ರಂಗು ಗೌಡ, ಭಾಸ್ಕರ ಆಗೇರ, ಎಸ್ಸಿ ಎಸ್ಟಿ ತಾಲೂಕ ಅಧ್ಯಕ್ಷ ಗಿರಿಧರ್, ಗಣೇಶ ಪಟಗಾರ, ಕಬ್ಗಲ, ಗಣಪತಿ ಬಂಟ, ಅನಿಲ ಕಾರ್ವಿ, ರಮೇಶ್ ನಾಯ್ಕ, ರವೀಶ್, ಶ್ರೀರಾಮ ನಾಯಕ, ಉಮೇಶ ಕಾಂಚಾನ, ದರ್ಶನ ನಾಯ್ಕ, ಯೂತ್ ಅಧ್ಯಕ್ಷ ರವಿ ಗೌಡ ಇದ್ದರು.

Share This
300x250 AD
300x250 AD
300x250 AD
Back to top