ಅಂಕೋಲಾ: ಹಿರಿಯ ಪತ್ರಕರ್ತ, ಬರಹಗಾರ, ಜಾನಪದ ಗಾಯಕರಾಗಿದ್ದ ಅಂಕೋಲೆಯ ಬಿ.ಹೊನ್ನಪ್ಪ ಅವರ ಅಗಲುವಿಕೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳ ಕಾಲ ನುಡಿಜೇನು ಪತ್ರಿಕೆಯ ಸಂಪಾದಕರಾಗಿ ಪತ್ರಿಕಾ ಕ್ಷೇತ್ರಕ್ಕೆ ತಮ್ಮದೇ ಅದ ಕೊಡುಗೆಯನ್ನು ನೀಡಿದ್ದ ಬಿ.ಹೊನ್ನಪ್ಪರವರು ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು. ಉತ್ತಮ ಗಾಯಕರೂ ಅಗಿದ್ದ ಇವರು ಜನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ತಮ್ಮ ನೇರ, ನಿಷ್ಠುರವಾದ ಮಾತು ಹಾಗೂ ಬರಹಗಳ ಮೂಲಕ ಸಾಹಿತ್ಯ ಹಾಗೂ ಮಾದ್ಯಮ ಲೋಕದಲ್ಲಿ ಚಿರಪರಿಚಿತರಾಗಿದ್ದರು. ಬಹುಮುಖಿ ವ್ಯಕ್ತಿತ್ವದ ಬಿ. ಹೊನ್ನಪ್ಪರವರು ನಾಡಿನ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿದ್ದರಷ್ಟೇ ಅಲ್ಲದೇ ಅಂಕೋಲಾ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೂ ಭಾಜನರಾಗಿದ್ದರು.
ಇವರ ಅಗಲುವಿಕೆ ಕನ್ನಡ ಸಾಹಿತ್ಯ ಹಾಗೂ ಮಾದ್ಯಮ ಕ್ಷೇತ್ರಕ್ಕೆ ಅಪಾರ ಹಾನಿಯನ್ನುಂಟು ಮಾಡಿದೆ. ಈ ನೆಲದ ನಂಬಿಕೆಯAತೆ ಅಗಲಿದ ಹಿರಿಯ ಚೇತನ ಬಿ.ಹೊನ್ನಪ್ಪರವರ ಆತ್ಮಕ್ಕೆ ಶಾಂತಿ ಕೋರುವುದಾಗಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಗೌರವ ಕಾರ್ಯದರ್ಶಿಗಳಾದ ಪಿ.ಆರ್.ನಾಯ್ಕ, ಜಾರ್ಜ್ ಫರ್ನಾಂಡೀಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಕಂಬನಿ ಮಿಡಿದಿದ್ದಾರೆ