• Slide
    Slide
    Slide
    previous arrow
    next arrow
  • 3.62 ಕೋಟಿ ಆಸ್ತಿ ವಿವರ ನೀಡಿದ ವಿ.ಎಸ್.ಪಾಟೀಲ್

    300x250 AD

    ಯಲ್ಲಾಪುರ: ಸೋಮವಾರ ನಾಮಪತ್ರ ಸಲ್ಲಿಸಿರುವ ವಿ.ಎಸ್.ಪಾಟೀಲ್ ತಮ್ಮ ಕುಟುಂಬದ ಒಟ್ಟು ಆಸ್ತಿ ವಿವರ 3.62 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ.

    ಕೃಷಿ ಮೂಲದಿಂದ ತಮ್ಮ ವಾರ್ಷಿಕ ಆದಾಯ 31,50,818 ರೂ. ಎಂದು ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ತಮ್ಮ ಕೈಯಲ್ಲಿ 60 ಸಾವಿರ ರೂ. ನಗದು, ಪತ್ನಿ ಶಶಿಕಲಾ ಅವರ ಕೈಯಲ್ಲಿ 50 ಸಾವಿರ ರೂ. ನಗದು ಹಣವಿದೆ. ಕೆವಿಜಿ ಬ್ಯಾಂಕ್‌ನಲ್ಲಿ 44,133.47 ರೂ. ಮುಂಡಗೋಡದ ಎಸ್‌ಬಿಐದಲ್ಲಿ 2,59,255ರೂ. 1,64,904.66 ರೂ. ಕಲಕೇರಿ ಸೇವಾ ಸಹಕಾರಿ ಸಂಘದ ಶೇರು 32,000 ರೂಪಾಯಿಗಳಿದೆ ಎಂದವರು ಅಫಡಾವಿಟ್‌ನಲ್ಲಿ ನಮೂದಿಸಿದ್ದಾರೆ. ಪತ್ನಿ ಶಶಿಕಲಾ ಅವರು ಕೆವಿಜಿ ಬ್ಯಾಂಕ್ ಖಾತೆಯಲ್ಲಿ 2,08,659.64 ರೂ. ಇನ್ನೊಂದು ಖಾತೆಯಲ್ಲಿ 86,485.66ರೂ ಎಸ್‌ಬಿಐ ಖಾತೆಯಲ್ಲಿ 1,46,448.61 ರೂ. ಹಾಗೂ ಕಲಕೇರಿ ಸೇವಾ ಸಹಕಾರಿ ಸಂಘದಲ್ಲಿ 30 ಸಾವಿರ ರೂ. ಶೇರು ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

    ಪತಿ ಪತ್ನಿ ಇಬ್ಬರು ಎಸ್‌ಬಿಐ ಹಾಗೂ ಎಲ್‌ಐಸಿ ವಿಮೆಯಲ್ಲಿ 1,63,399 ರೂ. ಹೂಡಿಕೆ ಮಾಡಿದ್ದಾರೆ. ವಿ ಎಸ್ ಪಾಟೀಲ್ ಅವರು 8 ಲಕ್ಷ ರೂ. ಹಾಗೂ 10 ಲಕ್ಷ ರೂ. ಬೆಲೆಯ ಎರಡು ಕಾರು, 6 ಲಕ್ಷ ರೂ. ಬೆಲೆಯ ಟಾಕ್ಟರ್ ಹೊಂದಿದ್ದು, ಅವರ ಪತ್ನಿ 5 ಲಕ್ಷ ರೂ. ಬೆಲೆಯ ಟಾಕ್ಟರ್‌ನ ಮಾಲಕರಾಗಿದ್ದಾರೆ. ವಿ ಎಸ್ ಪಾಟೀಲ್ ಅವರು 7 ಲಕ್ಷ ರೂ. ಬೆಲೆಯ 145 ಗ್ರಾಂ. ಬಂಗಾರವನ್ನು ಹೊಂದಿದ್ದಾರೆ. ಅವರ ಪತ್ನಿ 23 ಲಕ್ಷ ರೂ. ಬೆಲೆಯ ಚಿನ್ನ ಹಾಗೂ 1,35,000 ರೂ. ಬೆಲೆಯ ಬೆಳ್ಳಿಯ ಆಭರಣಗಳನ್ನು ಹೊಂದಿದ್ದಾರೆ. ವಿ ಎಸ್ ಪಾಟೀಲ್ ಹೆಸರಿನಲ್ಲಿ 1,11,75,000 ರೂ. ಮೌಲ್ಯದ 12.36 ಎಕರೆ ಕೃಷಿಭೂಮಿಯಿದ್ದು, ಇದು ಪಿತ್ರಾರ್ಜಿತವಾಗಿ ಬಂದಿದ್ದಾಗಿದೆ. ಅವರ ಪತ್ನಿ ಹೆಸರಿನಲ್ಲಿ 27,38,750 ರೂ. ಮೌಲ್ಯದ 3.13 ಎಕರೆ ಪಿತ್ರಾರ್ಜಿತ ಕೃಷಿಭೂಮಿಯಿದೆ. ಇದರೊಂದಿಗೆ ಕಲಗೇರಿ ಗ್ರಾಮದಲ್ಲಿ 10 ಗುಂಟೆ ಪಿತ್ರಾರ್ಜಿತವಾಗಿ ಬಂದ ಕೃಷಿಯೇತರ ಭೂಮಿಯೂ ಇದೆ. ಈ ಭೂಮಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಅವರು 30 ಲಕ್ಷ ರೂ. ವ್ಯಯಿಸಿದ್ದು, ಅದರ ಮಾರುಕಟ್ಟೆ ಮೌಲ್ಯ 40 ಲಕ್ಷ ರೂಪಾಯಿ ಎಂದು ಅವರು ಘೋಷಿಸಿಕೊಂಡಿದ್ದಾರೆ.

    300x250 AD

    ಇದರೊAದಿಗೆ ಮಳಗನಕೊಪ್ಪದ ನಂದಿಶ್ವರದಲ್ಲಿ 11652 ಚದರ ಅಡಿ ಹಾಗೂ ಅಂದಲಗಿಯಲ್ಲಿ 10890 ಚದರ ಅಡಿ ಜಾಗವನ್ನು 1997ರಲ್ಲಿ ಅವರು ಖರೀದಿಸಿ, ಅಲ್ಲಿ 60 ಲಕ್ಷ ರೂ ಬೆಲೆಯ ಕಟ್ಟಡವನ್ನು ನಿರ್ಮಿಸಿದ್ದಾರೆ. ಪಾಟೀಲ್ ಅವರು ಕಲಕೇರಿ ಅಂದಲಗಿ ವ್ಯವಸಾಯ ಸಹಕಾರಿ ಸೇವಾ ಸಂಘದಲ್ಲಿ 299899ರೂ ಕಿಸಾನ್ ಕ್ರೆಡಿಟ್ ಸಾಲ ಪಡೆದಿದ್ದಾರೆ. ಟ್ರಾö್ಯಕ್ಟರ್ ಖರೀದಿಗೆ 27420ರೂ ಮಾಧ್ಯಮಿಕ ಸಾಲ ಹಾಗೂ ಡ್ರೆöÊನೇಜ್ ನಿರ್ಮಾಣಕ್ಕೆ 450000ರೂ ಮಾಧ್ಯಮಿಕ ಸಾಲ ಪಡೆದಿದ್ದಾರೆ. ಅವರ ಪತ್ನಿ 217000 ರೂ ಬೆಳೆ ಸಾಲ ಪಡೆದಿದ್ದು, 299899ರೂ ಕಿಸಾನ್ ಕ್ರೆಡಿಟ್ ಸಾಲ ಪಡೆದಿದ್ದಾರೆ. ಜೊತೆಗೆ ಟಾಕ್ಟರ್ ಖರೀದಿಗೆ 338570 ರೂ ಹಾಗೂ ಡ್ರೆöÊನೇಜ್ ನಿರ್ಮಾಣಕ್ಕೆ 332000ರೂ ಸಾಲ ಮಾಡಿದ್ದಾರೆ. ಇತರೆ ಬ್ಯಾಂಕ್‌ಗಳಲ್ಲಿ ವಿ ಎಸ್ ಪಾಟೀಲ್ ಅವರಿಗೆ 1024179ರೂ ಹಾಗೂ ಅವರ ಪತ್ನಿ ಶಶಿಕಲಾ ಅವರಿಗೆ 1187469ರೂ ಸಾಲವಿದೆ.

    ಅಫಿಡವಿಟ್‌ನಲ್ಲಿ ಅವರು ಘೋಷಿಸಿಕೊಂಡAತೆ ಪಾಟಿಲ್ ಅವರ ಬಳಿ 3525513ರೂ ಮೌಲ್ಯದ ಚರಾಸ್ತಿ ಹಾಗೂ 3921000ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಶಶಿಕಲಾ ಬಳಿ 3525513 ಚರಾಸ್ತಿ ಹಾಗೂ 2200000ರೂ ಮೌಲ್ಯದ ಸ್ಥಿರಾಸ್ತಿಗಳಿವೆ. ವಿ ಎಸ್ ಪಾಟೀಲ್ ಅವರು ಹೊಂದಿದ ಭೂಮಿಯ ಮಾರುಕಟ್ಟೆ ಮೌಲ್ಯ 12775000ರೂ ಹಾಗೂ ಅವರ ಪತ್ನಿ ಹೊಂದಿದ ಭೂಮಿಯ ಮಾರುಕಟ್ಟೆ ಮೌಲ್ಯ 10338750ರೂಪಾಯಿಗಳಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top