• Slide
    Slide
    Slide
    previous arrow
    next arrow
  • ಚುನಾವಣಾ ಕಾರ್ಯಾಲಯ ಸ್ಫೂರ್ತಿಯ ಕೇಂದ್ರವಾಗಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

    300x250 AD

    ಸಿದ್ದಾಪುರ: ಮಂಡಲದ ಈ ಚುನಾವಣಾ ಕಾರ್ಯಾಲಯ ನಮ್ಮೆಲ್ಲರ ಸಂಪರ್ಕದ ಕೇಂದ್ರ ಹಾಗೂ ಮಾಹಿತಿಯ ಕೇಂದ್ರವಾಗಿದೆ. ಎಲ್ಲಾ ರೀತಿಯ ಸ್ಫ್ಪೂರ್ತಿ ಕೊಡುವ ಕೇಂದ್ರ ಇದಾಗಲಿ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
    ಅವರು ಪಟ್ಟಣದಲ್ಲಿ ಸಿದ್ದಾಪುರ ಮಂಡಲ ಬಿಜೆಪಿ ಚುನವಣಾ ಕಾರ್ಯಲಯವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಬೂತ್‌ಗಳಲ್ಲಿ ದಾಖಲೆಯ ಮತ ಪಡೆದು ನಮ್ಮ ಇಡೀ ಕ್ಷೇತ್ರದಲ್ಲಿಯೇ ದಾಖಲೆಯ ಮತದೊಂದಿಗೆ ಗೆಲುವು ಸಾಧಿಸುತ್ತೇವೆ. ನಮ್ಮ ಗೆಲುವಿನಲ್ಲಿ ಸಿದ್ದಾಪುರದ ಕೊಡುಗೆ ಬಹಳ ದೊಡ್ಡದಾಗಿರುತ್ತದೆ ಎಂಬ ವಿಶ್ವಾಸವಿದೆ. ಅವುಗಳೆಲ್ಲವೂಗಳು ಈ ಕಾರ್ಯಾಲಯ ಒಂದು ಕೇಂದ್ರ ಕೊಂಡಿಯಾಗಲಿದೆ. ಪ್ರತಿಯೊಂದು ಮಂಡಲಗಳಲ್ಲಿ ವಿಧಾನಸಭಾ ಚುನಾವಣೆಗೆ ಸಂಬ0ಧಪಟ್ಟ0ತೆ ಕಾರ್ಯಾಲಯಗಳನ್ನು ತೆರೆಯಲಾಗಿದೆ ಎಂದರು.

    ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಶಿರಸಿ ನಗರ, ಶಿರಸಿ ಗ್ರಾಮೀಣ ಹಾಗೂ ಸಿದ್ದಾಪುರ ಹೀಗೆ ಮೂರು ಮಂಡಲಗಳಿವೆ. ನಾವು ನಮ್ಮ ಬಿಜೆಪಿ ಜಿಲ್ಲಾ ಕಾರ್ಯಾಲಯವನ್ನು ಶಿರಸಿಯಲ್ಲಿ ಅಂಬೇಡ್ಕರ್‌ರವರ ಜನ್ಮದಿನದ ಶುಭ ಸಂದರ್ಭದಲ್ಲಿ ಉದ್ಘಾಟನೆಯಾಗಿದೆ. ಸಿದ್ದಾಪುರ ಕಾರ್ಯಾಲಯದ ಉದ್ಘಾಟನೆಯನ್ನು ಇಂದು ಮಾಡಿದ್ದೇವೆ. ಇದರ ಮೂಲಕ ಪ್ರಸ್ತುತ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಬಲವಾದ ವಿಶ್ವಾಸವನ್ನು ನಾನು ವ್ಯಕ್ತಪಡಿಸುತ್ತೇನೆ ಎಂದರು.

    300x250 AD

    ಈ ಸಂದರ್ಭದಲ್ಲಿ ಶಿರಸಿ- ಸಿದ್ದಾಪುರ ವಿಧಾನಸಭಾ ಚುನಾವಣಾ ಪ್ರಭಾರಿ ಗೋವಿಂದ ನಾಯ್ಕ ಭಟ್ಕಳ, ಮಂಡಲ ಅಧ್ಯಕ್ಷ ಮಾರುತಿ ಟಿ.ನಾಯ್ಕ ಹೊಸೂರು, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಹೆಗಡೆ, ಜಿಲ್ಲಾ ಕಾರ್ಯದರ್ಶಿ ಗುರುರಾಜ ಶಾನಭಾಗ, ಪ್ರಮುಖರಾದ ವಿನಾಯಕ ಕೆ.ಆರ್., ತಿಮ್ಮಪ್ಪ ಎಂ.ಕೆ., ರಾಜೇಂದ್ರ ಕೀಮದ್ರಿ, ಚಂದ್ರು ಕೊಡಿಯ ಮೊದಲಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top