ಸಿದ್ದಾಪುರ: ನಾವೆಲ್ಲರೂ ವಸುದೈವ ಕುಟುಂಬಸ್ಥರು. ಕಲೆ ಸಾಂಸ್ಕೃತಿಕ ಏಕತೆ, ವೈದಿಕ, ವೈವಿಧ್ಯಮಯ ಹೊಂದಿದ ಸಮಾಜ ನಮ್ಮದು. ನಾವು ಯಾವಾಗಲೂ ನಕರಾತ್ಮಕ ಚಿಂತನೆ ಬದಲಾಗಿ ಸಕಾರಾತ್ಮಕವಾಗಿ ಸಮಾಜದ ಅಭಿವೃದ್ಧಿ ಕುರಿತು ಚಿಂತನೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ದಾವಣಗೆರೆ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಹೇಳಿದರು.
ಅವರು ಸ್ಥಳೀಯ ಶ್ರೀಲಕ್ಷ್ಮಿನಾರಾಯಣ ದೇವಾಲಯದಲ್ಲಿ ಜರುಗಿದ ದೈವಜ್ಞ ಶ್ರೀರಾಜರಾಜೇಶ್ವರಿ ಮಹಿಳಾ ಮಂಡಳಿಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾವು ಸನ್ಮಾರ್ಗದಲ್ಲಿ ಸಾಗಬೇಕು. ತುಳಿದು ಬೆಳೆಯದಿರಿ, ಬೆಳೆದು ಬೆಳೆಸಿ.ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಶಿವಮೊಗ್ಗದ ದೈವಜ್ಞ ತರಂಗ ಪತ್ರಿಕೆಯ ಸಂಪಾದಕ ಕಮಲಾಕ್ಷ ಎಸ್.ಡಿ. ಮಾತನಾಡಿ, ಮನೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡುವಲ್ಲಿ ಮಾತೆಯರು ಪ್ರಯತ್ನಿಸಬೇಕು. ಸಿದ್ದಾಪುರ ಸಮಾಜದ ಇತಿಹಾಸವನ್ನು ವಿವರಿಸುತ್ತಾ ದಿವಂಗತ ವಿಶ್ವನಾಥ್ ಶೇಟ್ ಹಾರ್ಸಿಕಟ್ಟಾರವರು ಕೊಂಕಣಿಯಲ್ಲಿ ರಚಿಸಿದ ರಾಮಾಯಣ ದರ್ಶನ ಮಹಾಕಾವ್ಯದ ಕುರಿತು ಪ್ರಶಂಶಿಸಿದರು.
ದೈವಜ್ಞ ಸಮಾಜದ ಅಧ್ಯಕ್ಷ ಶಾಂತರಾಮ್ ವಿ.ಶೇಟ್ ಹಾಗೂ ಯುವಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ.ಶೇಟ್‌ರವರು ಮಹಿಳಾ ಮಂಡಳಿಯ ಈ ಕಾರ್ಯಕ್ರಮವು ಇನ್ನು ಹೆಚ್ಚು ಹೆಚ್ಚು ಅಭಿವೃದ್ಧಿಯಾಗಿ ಬೆಳೆಯಲಿ ಎಂದು ಆಶಿಸಿದರು. ವೇದಿಕೆಯಲ್ಲಿ ರಾಧಾ ರಾಯ್ಕರ್ ಹಾಗೂ ಪಟ್ಟಣ ಪಂಚಾಯತ ಸದಸ್ಯೆ ರಾಧಿಕಾ ಎಂ.ಕಾನಗೋಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಧಾ ಬೆಟಗೇರಿ ದಂಪತಿ, ವಿಜಯಾ ಶೇಟ್ ದಂಪತಿ, ತುಕಾರಾಮ ಜಿ.ಶೇಟ್ ದಂಪತಿ, ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಲಲಿತಾ ಶೇಟ್, ಶಿಕ್ಷಕಿ ಸುಮಿತ್ರ ಜಿ.ಶೇಟ್, ಎಂಸಿಎ ಪರೀಕ್ಷೆಯಲ್ಲಿ 8ನೇ ರ‍್ಯಾಂಕ್ ಪಡೆದ ಅನುಷಾ ಎಂ.ರಾಯ್ಕರ್ ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷ ವಿಜಯ ರಾಯ್ಕರ್ ದಂಪತಿಯನ್ನು ಮಹಿಳಾ ಮಂಡಳಿಯಿ0ದ ಸತ್ಕರಿಸಲಾಯಿತು. ವಾಸುದೇವ ರಾಯ್ಕರ್ ಹಾಗೂ ಕಮಲಾಕ್ಷ ಎಸ್.ಡಿ ಅವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿದರಲ್ಲದೆ ಎಲ್‌ಕೆಜಿ ಮಕ್ಕಳಿಂದ ಹಿಡಿದು ಎಂಟನೇ ತರಗತಿಯ ಸಮಾಜದ ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೂ ಪಠ್ಯ- ಪುಸ್ತಕ ವಿತರಿಸಲಾಯಿತು. ಪ್ರಾರಂಭದಲ್ಲಿ ಸ್ವಾಗತ ಗೀತೆಯನ್ನು ಸುವರ್ಣ ಶೇಟ್ ಸಂಗಡಿಗರು ಹಾಗೂ ಪ್ರಾರ್ಥನಾ ಗೀತೆಯನ್ನು ವೀಣಾ ಶೇಟ್ ಸಂಗಡಿಗರು ಹಾಡಿದರು. ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಸುನಿತಾ ಶೇಟ್ ಸ್ವಾಗತಿಸಿದರು. ರಾಮದಾಸ ರಾಯ್ಕರ್ ಹಾಗೂ ವೀಣಾ ಶೇಟ್ ಅತಿಥಿಗಳನ್ನು ಪರಿಚಯಿಸಿದರು. ಮಾಲಾ ಎಂ.ರಾಯಕರ ವರದಿ ವಾಚಿಸಿದರು. ನಂತರ ಚಿಕ್ಕ ಮಕ್ಕಳ ನೃತ್ಯ, ಮಹಿಳಾ ಮಂಡಳಿಯವರ ಶ್ರೀಕೃಷ್ಣ ಪಾರಿಜಾತ ನೃತ್ಯ ರೂಪಕ ನಡೆಯಿತು. ಸುಧಾ ಮಹೇಶ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಸುಧಾ ಚಂದ್ರಹಾಸ ಶೇಟ ವಂದಿಸಿದರು.