• Slide
    Slide
    Slide
    previous arrow
    next arrow
  • ಕುಪ್ಪಗಡ್ಡೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

    300x250 AD

    ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಕುಪ್ಪಗಡ್ಡೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಆಚರಿಸಲಾಯಿತು. ಕುಪ್ಪಗಡ್ಡೆ ಗ್ರಾಮದ ಶ್ರೀಮಹಿಶಾಸುರ ಮರ್ದಿನಿ ದೇವಸ್ಥಾನದ ಹತ್ತಿರ ನಿರ್ಮಿಸಲಾದ ಅಂಬೇಡ್ಕರ್‌ರವರ ಮೂರ್ತಿ ಹತ್ತಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಂದ್ರಕಲಾ ಶೇಟ್ ಅಂಬೇಡ್ಕರ್‌ರವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಸಮಾನತೆ, ಶಿಕ್ಷಣಕೆ ಒತ್ತು ಕೊಟ್ಟು ಅವರ ಹಾದಿಯಲ್ಲಿ ಸಾಗೋಣ. ಮಹಾನಾಯಕನ ಬಗ್ಗೆ ಮಾತನಾಡಲು ಪದಗಳೇ ಸಾಕಾಗುವುದಿಲ್ಲ ಎಂದು ಹೇಳಿದರು.
    ಗ್ರಾ.ಪಂ ಸದಸ್ಯ ಮಾರುತಿ ಮಟ್ಟೇರ್ ಮಾತನಾಡಿ, ಎಲ್ಲರೂ ಸಂಘಟಕರಾಗಿ ಹೋರಾಡಬೇಕು. ಅಂಬೇಡ್ಕರ್ ಅವರು ನಮಗೆ ಎಲ್ಲವನ್ನು ಕೊಟ್ಟಿದ್ದಾರೆ. ಅವರಿಗಾಗಿ ನಾವೇನಾದರೂ ಕೊಡಬೇಕು ಎಂದರೆ ಅವರ ಹಾದಿಯಲ್ಲಿ ಸಾಗಬೇಕು ದೇವತಾ ಮನುಷ್ಯನನ್ನು ಕೇವಲ ಒಂದು ದಿನ ಮಾತ್ರ ನೆನಪಿಸಿದರೆ ಸಾಲದು. ಪ್ರತಿದಿನ ಅವರ ಆದರ್ಶವನ್ನು ಪಾಲಿಸಿ ನೆನಪಿಸಿಕೊಳ್ಳುತ್ತಿರಬೇಕು ಎಂದು ಹೇಳಿದರು.
    ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಪುಟ್ಟಸ್ವಾಮಿ ಗುರುಗಳು ಲೋಕೇಶ್ ನೇರಲಗಿ, ಮಾಲತೇಶ್ ಎಚ್., ಕುಮಾರ್ ಕಾಳಂಗಿ, ಶಿವಣ್ಣ ಕಾಳಂಗಿ, ಚಂದ್ರು ಸಂತ್ರೋಳಿ, ಮಂಜುನಾಥ್ ಪಾಟೀಲ್ ಹೋಸಕೊಪ್ಪ, ಇಲ್ಯಾಸ ಅಹಮದ ಕುಪ್ಪಗಡ್ಡೆ, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಊರ ನಾಗರಿಕರು, ಮಕ್ಕಳು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top