ಹೊನ್ನಾವರ: ವಿಧಾನಸಭಾ ಚುನಾವಣೆ ಹಿನ್ನಲೆ ತಾಲೂಕಿನ ಪೊಲೀಸ್ ತಂಡದೊ0ದಿಗೆ ಸಿಆರ್‌ಪಿಎಫ್ ಯೋಧರು ಪಟ್ಟಣದಲ್ಲಿ ಪಥಸಂಚಲನ ನಡೆಸಿದರು.
ಮುಂಬರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾರ್ವಜನಿಕರು ಮುಕ್ತ ಹಾಗೂ ನಿರ್ಭೀತ ವಾತಾವರಣದಲ್ಲಿ ಮತದಾನ ಮಾಡುವ ನಿಟ್ಟಿನಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆ ದೃಷ್ಟಿಯಿಂದ ಜಾಗೃತಿ ಮೂಡಿಸಲು ಇಲಾಖೆಯು ಈ ಪಥಸಂಚಲನ ಹಮ್ಮಿಕೊಂಡಿದ್ದು, ಪೊಲೀಸ್ ಮೈದಾನದಿಂದ ಬಜಾರ್ ರಸ್ತೆ, ಹೂವಿನಚೌಕ್, ದುರ್ಗಾಕೇರಿ ಮೂಲಕ ಬಸ್ ನಿಲ್ದಾಣ ಮಾರ್ಗವಾಗಿ ಶರಾವತಿ ವೃತ್ತದ ಮೂಲಕ ಪೊಲೀಸ್ ಠಾಣಾ ಮುಂಭಾಗದವರೆಗೆ ಪಥಸಂಚಲನ ನಡೆಸಿದರು.
ಕಳೆದ ಚುನಾವಣೆಯ ಪೂರ್ವದಲ್ಲಿ ಪಟ್ಟಣದಲ್ಲಿ ನಡೆದ ಗಲಭೆಯ ನಂತರ ಪ್ರತಿನಿತ್ಯ ಆಯ್ದ ಭಾಗದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಪೊಲೀಸರು ಸರ್ವೆ ಸಾಮನ್ಯವಾಗಿ ಬಂದವಸ್ತ್ ಕಂಡು ಬಂದರೂ ಏಕಾಏಕಿ ಪಥ ಸಂಚಲನ ಒಮ್ಮೆ ಗಲಬಿಲ ಮೂಡಿಸಿತು. ನಂತರ ವಿಧಾನ ಸಭಾ ಚುನಾವಣೆಯ ಹಿನ್ನಲೆ ಎಂದು ವಿಷಯ ಅರಿತಾಗ ಸಾರ್ವಜನಿಕರು ಸಂತಸದಿ0ದ ವೀಕ್ಷಿಸಿ ಗೌರವ ಸಲ್ಲಿಸಿದರು. ಪೊಲೀಸ್ ಮತ್ತು ಸಿಆರ್‌ಪಿಎಫ್ ತುಕಡಿ ಪಥಸಂಚಲನವನ್ನು ನಡೆಸುವ ಮೂಲಕ ಜನರಲ್ಲಿ ಶಾಂತಿಯುತ ಚುನಾವಣೆಯನ್ನು ನಡೆಸುವ ಕುರಿತು ಭರವಸೆ ಮೂಡಿಸುವಲ್ಲಿ ಯಶಸ್ವಿಯಾದವು.
ಇನ್ಸ್ಪೆಕ್ಟರ್ ಮಂಜುನಾಥ ಇ.ಓ ನೇತ್ರತ್ವದಲ್ಲಿ ಪಿಎಸೈಗಳಾದ ಪ್ರವೀಣಕುಮಾರ, ಸುಬ್ಬಣ್ಣ, ಪೆಮೀನಾ ಹಾಗೂ ಸಿಬ್ಬಂದಿಗಳು, ಸಿಆರ್‌ಪಿಎಫ್ ಯೋಧರು ಪಾಲ್ಗೊಂಡಿದ್ದರು.