Slide
Slide
Slide
previous arrow
next arrow

ಸುನೀಲ್ ಹೆಗಡೆ ಪರವಾಗಿ ಗೋವಾ ಸಚಿವರ ಮತಯಾಚನೆ

300x250 AD

ಹಳಿಯಾಳ: ವಿಧಾನಸಭೆ ಚುನಾವಣೆಯ ನಿಮಿತ್ತ ಗೋವಾ ಸಚಿವರು, ಜಿಲ್ಲಾ ಉಸ್ತುವಾರಿ ವಿಶ್ವಜಿತ್ ರಾಣೆ ಅವರು ಕಾರ್ಯಕರ್ತರ ಸಭೆ ನಡೆಸಿ, ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಅವರ ಪರವಾಗಿ ಮತಯಾಚಿಸಿದರು.
ತಾಲೂಕಿನ ದುಸಗಿ, ಮುತ್ತಲಮುರಿ, ಸಾತ್ನಳ್ಳಿ ಗ್ರಾಮಕ್ಕೆ ಆಗಮಿಸಿದ ಸಚಿವರನ್ನು ದುಸಗಿ ಗ್ರಾಮದ ಯುವಕರು ವಿಶೇಷ ವಾದ್ಯಗಳೊಂದಿಗೆ ಮೆರವಣಿಗೆ ಮಾಡುವುದರ ಮೂಲಕ ಪ್ರೀತಿಯಿಂದ ಗ್ರಾಮಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಘಟಕದ ಕಾರ್ಯಕಾರಿಣಿ ಸದಸ್ಯರಾದ ಭಾರತಿ ಜಂಬಗಿ, ಪಕ್ಷದ ಅಧ್ಯಕ್ಷರಾದ ಗಣಪತಿ ಕರಂಜೇಕರ, ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳೆ, ವಿ.ಎಂ.ಪಾಟೀಲ್, ಪ್ರಮುಖರಾದ ವಿಲಾಸ ಯಡವಿ, ಶಿವಾಜಿ ನರಸಾನಿ, ವಾಸುದೇವ ಪೂಜಾರಿ, ಸಂತೋಷ ಘಟಕಾಂಬಳೆ, ರಾಜೇಶ್ವರಿ ಹಿರೇಮಠ, ಜಯಲಕ್ಷ್ಮೀ ಚವ್ಹಾಣ, ಸ್ಥಳೀಯ ಗ್ರಾಮಸ್ಥರು, ಯುವಕರು ಹಾಗೂ ಮತ್ತಿತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top