• Slide
  Slide
  Slide
  previous arrow
  next arrow
 • ಭಾರತದ ಸಂವಿಧಾನ ನಮ್ಮೆಲ್ಲರ ಹೆಮ್ಮೆ: ಜಗದೀಪ ತೆಂಗೇರಿ

  300x250 AD

  ಹೊನ್ನಾವರ: ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರು ಮಹಾನ್ ಮಾನವತಾವಾದಿಗಳಾಗಿದ್ದರು. ಅವರು ರಚಿಸಿದ ಭಾರತದ ಸಂವಿಧಾನಜಗತ್ತಿಗೆ ಮಾದರಿಯಾಗಿದ್ದು, ಅವರ ತತ್ವ, ಆದರ್ಶ, ಚಿಂತನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿ ನಿಂತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಅಭಿಪ್ರಾಯಪಟ್ಟರು.

  ಅವರು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪರಿಶಿಷ್ಟ ಜಾತಿ ವಿಭಾಗ ಏರ್ಪಡಿಸಿದ್ದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
  ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾವಿರಾರು ಜಾತಿ, ಹತ್ತಾರು ಧರ್ಮಗಳು, ಅನೇಕ ಭಾಷೆಗಳ ನಡುವೆಯೂ ನಾವು ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಶಾಂತಿ ಮತ್ತು ಸ್ನೇಹದಿಂದ ಬದುಕುತ್ತಿದ್ದರೆ ಅದು ಅಂಬೇಡ್ಕರ್‌ರವರು ಭಾರತಕ್ಕೆ ನೀಡಿದ ಸಂವಿಧಾನದ ಮೂಲಕ ಎನ್ನುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ. ಇಂತಹ ಮಹಾನ್ ಚಿಂತಕನ ತತ್ವ, ಆದರ್ಶಗಳು ಈ ಜಗತ್ತಿನಲ್ಲಿ ಸೂರ್ಯ, ಚಂದ್ರನಿರುವವರೆಗೂ ಶಾಶ್ವತವಾಗಿರಲಿ ಎಂದು ಹಾರೈಸಿ, ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲ ಉದ್ದೇಶವನ್ನು ಇಂದಿನ ಯುವಕರು, ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

  300x250 AD

  ಕಾರ್ಯಕ್ರಮದಲ್ಲಿ ಸೇರಿದ ಪಕ್ಷದ ಎಲ್ಲಾ ಕಾರ್ಯಕರ್ತರು ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಭೆಯಲ್ಲಿ ಕಾಂಗ್ರೆಸ್ ಇಂಟಕ್ ಅಧ್ಯಕ್ಷ ಆಗ್ನೆಲ್ ಡಯಾಸ್, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಝಕ್ರಿಯ್ಯಾ ಸಾಬ್, ಪಕ್ಷದ ಮುಖಂಡ ದಾಮೋದರ ನಾಯ್ಕ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುಪ್ಪು ಗೌಡ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮೇಸ್ತ, ಪ್ರವೀಣ ಲೋಪಿಸ್, ಚಂದ್ರು ಮೇಸ್ತ, ರಾಹುಲ್ ಮೇಸ್ತ, ನಾಗೇಶ ನಾಯ್ಕ, ಜಿಲ್ಲಾಕಾಂಗ್ರೇಸ್‌ಇ0ಟಕ್ ಕಾರ್ಯದರ್ಶಿ ಕೇಶವ ಮೇಸ್ತ, ಫಾರುಖ್ ಶೇಕ್,ಮಾದೇವ ನಾಯ್ಕ, ಕರ್ಕಿ, ಕೃಷ್ಣ ಮಾರಿಮನೆ, ಪಾತ್ರೋನ್ ಪರ್ನಾಂಡಿಸ್, ಸಂಜು ಮೇಸ್ತ, ಮಂಜು ಮುಕ್ರಿ, ಆಶಾ ಮಡಿವಾಳ,ಜ್ಯೋತಿ ವiಹಾಲೆ, ಗಣಪತಿ ಮೇಸ್ತ, ರೇಖಾ ಮಹಾಲೆ, ಪ್ರಶಾಂತ ಶೇಟ, ಜೋಸೆಫ್ ಡಿಸೋಜಾ, ಸುರೇಶ ಮೇಸ್ತ, ಮಧನರಾಜ್, ಮನ್ಸೂರ್ ಶೇಖ್ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು. ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ ಎಲ್ಲರನ್ನು ಸ್ವಾಗತಿಸಿದರು. ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top