• Slide
    Slide
    Slide
    previous arrow
    next arrow
  • ಅಂಬೇಡ್ಕರ್ ಸರ್ವ ಜನಾಂಗದ ನಾಯಕರು: ಡಾ.ಕೃಷ್ಣಾ

    300x250 AD

    ಹೊನ್ನಾವರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಪೂರ್ತಿ ನೋವು ಅವಮಾನಗಳನ್ನೆ ಅನುಭವಿಸಿಕೊಂಡು ಬೆಳದವರು. ಅವರಿಗೆ ತಳಮಟ್ಟದ ಸಮುದಾಯದ ನೋವುಗಳ ಬಗ್ಗೆ ಅರಿವಿತ್ತು. ಹಾಗಾಗಿಯೇ ಸರ್ವರಿಗೂ ಸಮಬಾಳು ಜೀವನ ತರಲು ಹೋರಾಟ ನಡೆಸಿದರು.ಅವರನ್ನು ಕೇವಲ ಒಂದು ಜಾತಿ ನಾಯಕನೆಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದು ತಪ್ಪಾದ ಗೃಹಿಕೆ ಎಂದು ಸ್ತ್ರೀರೋಗ ತಜ್ಞ ಡಾ.ಕೃಷ್ಣಾ ಜಿ ಹೇಳಿದರು.

    ಅವರು ತಾಲೂಕ ಆಸ್ಪತ್ರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಸ್ಪೃಶ್ಯತೆಯ ನೋವನ್ನು ಬಾಲ್ಯದಿಂದಲೂ ಅನುಭಿಸಿದ ಅಂಬೇಡ್ಕರ ಅದರ ವಿರುದ್ಧ ಹೋರಾಟ ರೂಪಿಸಿದರು. ವೈವಿಧ್ಯತೆಯಿಂದ ಕೂಡಿದ ಭಾರತದಲ್ಲಿ ಎಲ್ಲರಿಗೂ ಒಪ್ಪಿತವಾಗುವ ಸಂವಿಧಾನವನ್ನು ರಚಿಸಿದ್ದು, ಆಂಬೇಡ್ಕರ್‌ರವರ ಪ್ರತಿಭೆಗೆ ಹಿಡಿದ ಕೈಗನ್ನಡಿ. ನಮ್ಮ ಸಂವಿಧಾನ ಇವತ್ತು ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನ ಎಂದು ಹೆಸರು ಪಡೆದಿದೆ. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯೂ ಗೌರಯುತವಾಗಿ ಬದುಕಬೇಕು ಅದಕ್ಕೆ ಎಲ್ಲರಿಗೂ ಅವಕಾಶಗಳು ಸಿಗಬೇಕು ಎಂದು ಸಂವಿಧಾನದಲ್ಲಿ ಅದಕ್ಕೆ ಪೂರಕವಾದ ಅಂಶಗಳನ್ನು ಸೇರಿಸಿದರು. ನಾವು ಅಂಬೇಡ್ಕರರವರನ್ನು ಕೇವಲ ಒಂದು ಜಾತಿಯ ನಾಯಕರನ್ನಾಗಿ ನೋಡದೇ, ನಮ್ಮಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ನೆರವಾದ ಸಂವಿಧಾನ ರೂಪಿಸಿದ ಶಿಲ್ಪಿ ಎಂದು ನೆನಪಿಸಿಕೊಳ್ಳಬೇಕಾಗಿದೆ. ಅವರ ಆದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳೋಣ ಎಂದು ಹೇಳಿದರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಮಾತನಾಡುತ್ತ, ನಮಗೆಲ್ಲರಿಗೂ ಆಂಬೇಡ್ಕರ್ ಜೀವನ ಆದರ್ಶವಾಗಬೇಕು. ಸಂವಿಧಾನವನ್ನು ಸರಿಯಾಗಿ ಪಾಲಿಸುವದರ ಮೂಲಕ ಅಂಬೇಡ್ಕರ್’ ರಿಗೆ ಗೌರವ ಸಲ್ಲಿಸೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅರವಳಿಕೆ ತಜ್ಞರಾದ ಡಾ.ಮಹೇಶ ಶೆಟ್ಟಿ, ಆಯುಷ್ ವೈದ್ಯಾಧಿಕಾರಿ ಡಾ.ಗುರುದತ್ತ ಕುಲಕರ್ಣಿ, ಆಸ್ಪತ್ರೆಯ ಸಿಬ್ಬಂದಿವರ್ಗ, ಸಾರ್ವಜನಿಕರು ಹಾಜರಿದ್ದರು. ಶೂಶ್ರೂಷಾಧಿಕಾರಿ ಮಂಗಲಾ ನಾಯ್ಕ ಧನ್ಯವಾದಗಳನ್ನು ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top